IND vs SA 1st T20 : ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಗೆಲುವು

ತಿರುವನಂತಪುರಂ : (IND vs SA 1st T20 ) ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟಿ20ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಬೌಲರ್‌ಗಳಾದ ಅರ್ಷದೀಪ್‌ ಸಿಂಗ್‌ ( Arshadeep Singh), ದೀಪಕ್‌ ಚಹರ್ ಹಾಗೂ ಹರ್ಷಲ್‌ ಪಟೇಲ್‌ ದಾಳಿಗೆ ಆಫ್ರಿಕಾದ ಆಟಗಾರರು ತತ್ತರಿಸಿ ಹೋಗಿದ್ದಾರೆ. ಕನ್ನಡಿಗ ರಾಹುಲ್‌ (KL Rahul) ಹಾಗೂ ಸೂರ್ಯ ಕುಮಾರ್‌ ಯಾದವ್‌ (Suryakumar Yadav) ಅದ್ಬುತ ಆಟದ ನೆರವಿನಿಂದ ಭಾರತ ಮೊದಲ ಪಂದ್ಯದಲ್ಲಿ ಗೆದ್ದು, ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ಕೇರಳದ ತಿರುವನಂತಪುರಂನಲ್ಲಿರುವ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ಗೆದ್ದ ಭಾರತ ಬೌಲಿಂಗ್‌ ನಡೆಸಿತು. ಆರಂಭದಿಂದಲೇ ಮಾರಕ ದಾಳಿ ನಡೆಸಿದ ಅರ್ಷದೀಪ್‌ ಸಿಂಗ್‌ ಹಾಗೂ ದೀಪಕ್‌ ಚಹರ್‌ ಬವುಮಾ, ರೊಸ್ಸೌವ್, ಡೇವಿಡ್‌ ಮಿಲ್ಲರ್‌ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಶೂನ್ಯಕ್ಕೆ ಫೆವಿಲಿಯನ್‌ ಹಾದಿ ತೋರಿಸಿದ್ರು. ಇನ್ನು ಡಿಕಾಕ್‌ ಒಂದು ರನ್‌ ಗಳಿಸಿ ಔಟಾದ್ರು. ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮಕರಮ್‌ ಹಾಗೂ ಪೆರ್ನೆಲ್‌ ತಂಡವನ್ನು ಸ್ವಲ್ಪಹೊತ್ತು ಆಧರಿಸಿದ್ರು. ಮಕರಮ್‌ 25 ಹಾಗೂ ಪರ್ನೆಲ್‌ 24ರನ್‌ ಗಳಿಸಿ ಔಟಾದ್ರು. ಆದರೆ ಕೇಶವ್‌ ಮಹಾರಾಜ್‌ ಅಂತಿಮ ಹಂತದಲ್ಲಿ 41 ರನ್‌ ಗಳಿಸಿ ತಂಡ ಮೊತ್ತವನ್ನು 100ರ ಗಡಿ ದಾಟಿಸಿದ್ರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 106 ರನ್‌ ಗಳಿಸಿದೆ.

ದಕ್ಷಿಣ ಆಫ್ರಿಕಾ ನೀಡಿದ್ದ ಸುಲಭ ಗುರಿಯನ್ನು ಬೆನ್ನತ್ತಲು ಹೊರಟ ಭಾರತ ತಂಡಕ್ಕೆ ರಬಾಡ ಆಘಾತ ನೀಡಿದ್ರು. ನಾಯಕ ರೋಹಿತ್‌ ಶರ್ಮಾ ಅವರನ್ನು ರಬಾಡ ಶೂನ್ಯಕ್ಕೆ ಔಟ್‌ ಮಾಡಿದ್ರೆ, ವಿರಾಟ್‌ ಕೊಹ್ಲಿ ನೊಟ್ರೋಜ್‌ ಅವರ ಎಸೆತದಲ್ಲಿ ಡಿಕಾಕ್‌ಗೆ ವಿಕೆಟ್‌ ಒಪ್ಪಿಸಿದ್ರು. ನಂತರ ಉಪನಾಯಕ ರಾಹುಲ್‌ ಹಾಗೂ ಸೂರ್ಯ ಕುಮಾರ್‌ ಯಾದವ್‌ ಉತ್ತಮ ಜೊತೆಯಾಟ ಆಡಿದ್ರು. ಕೆ.ಎಲ್.ರಾಹುಲ್‌ 56 ಎಸೆತಗಳಲ್ಲಿ 51 ರನ್‌ ಬಾರಿಸಿದ್ರೆ, ಸೂರ್ಯಕುಮಾರ್‌ ಯಾದವ್‌ 33 ಎಸೆತಗಳಲ್ಲಿ 50 ರನ್‌ ಬಾರಿಸುವ ಮೂಲಕ 16.4 ಓವರ್‌ ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ತಂಡವನ್ನು ಗೆಲುವಿನ ತಲುಪಿಸಿದ್ರು.

ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ಡಬ್ಲ್ಯೂ), ಟೆಂಬಾ ಬವುಮಾ (ಸಿ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ಡಬ್ಲ್ಯೂ), ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್.

ಇದನ್ನೂ ಓದಿ : Sanju Samson Cutout : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೂ ಮುನ್ನ ಮೈದಾನದ ಹೊರಗೆ ಸಂಜು ಸ್ಯಾಮ್ಸನ್ ಕಟೌಟ್

ಇದನ್ನೂ ಓದಿ : Rest of India Team : ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಒಬ್ಬನೇ ಕನ್ನಡಿಗ

IND vs SA 1st T20 India Win 8 wicket KL Rahul Suryakumar Yadav Arshadeep Singh

Comments are closed.