Bitcoin Case : 12 ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ಗಳಿಗೆ ಪತ್ರ ಬರೆದಿದ್ದ ಸೈಬರ್‌ ಕ್ರೈಂ ಪೊಲೀಸರು

ಬೆಂಗಳೂರು : ರಾಜ್ಯದಲ್ಲಿ ಬಿಟ್‌ಕಾಯಿನ್‌ ಪ್ರಕರಣ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಸಿಸಿಬಿ ಈಗಾಗಲೇ 12 ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ಗಳಿಗೆ ಸಿಸಿಬಿ ಪತ್ರವನ್ನು ಬರೆದಿದೆ. ಆದರೆ ಈ ಪೈಕಿ ಜಪಾನ್‌ ಮೂಲದ ಸಂಸ್ಥೆ ಮಾತ್ರವೇ ಉತ್ತರವನ್ನು ನೀಡಿದೆ ಅನ್ನೋ ಮಾಹಿತಿ ಇದೀಗ ಬಯಲಾಗಿದೆ.

ಬಿಟ್‌ ಕಾಯಿನ್‌ ಸೂತ್ರಧಾರ ಶ್ರೀಕಿ ಅಲಿಯಾಸ್‌ ಶ್ರೀಕೃಷ್ಣ ಬಿಟ್‌ ಕಾಯಿನ್‌ ಹ್ಯಾಕಿಂಗ್‌ ಮಾಡಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸೈಬರ್‌ ಕ್ರೈಂ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದರು. ಇದೇ ಹೊತ್ತಲ್ಲೇ ಪೊಲೀಸರು 12 ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ಗಳಿಗೆ ಪತ್ರವನ್ನು ಬರೆದಿದ್ದರು. ಬಿಟ್‌ ಕ್ಲಬ್‌ ನೆಟ್‌ವರ್ಕ್‌, ಬಿಟ್‌ ಫಿನಿಕ್ಸ್‌, ಎಫ್‌ಸಿಸಿಇ ಎಕ್ಸ್‌ಚೆಂಜ್‌, ಬಿಟಿಸಿ ಇ.ಕಾಂ, ಬಿಟ್‌ ಸೆಂಟ್ರಲ್‌, ಸ್ಲುಶ್‌ ಪೂಲ್‌, ಕೋಯ್ನಿಲ್‌, ಎಂಪಿಇಎಕ್ಸ್‌, ಪೇ ಟೀಝಡ್‌, ಹಾವ್ಲಾಕ್‌ ಇನ್‌ವೆಸ್ಟ್‌ಮೆಂಟ್‌, ಬಿಟಿಸಿ 2ಪಿಎಮ್‌. ಮಿ ಕಂಪೆನಿಗಳಿಗೆ ಪತ್ರವನ್ನು ಬರೆದು ಬಿಟ್‌ ಕಾಯಿನ್‌ ಕಳವು ಆಗಿರುವ ಕುರಿತು ಮಾಹಿತಿಯನ್ನು ಕೇಳಲಾಗಿತ್ತು.

ಇಂಟರ್‌ ಪೋಲ್‌ ಮೂಲಕ ಸಿಸಿಬಿ ಪತ್ರ ಬರೆದು ಎಂಟು ತಿಂಗಳು ಕಳೆದಿದ್ದರೂ ಕೂಡ ಇದುವರೆಗೆ ಜಪಾನ್‌ ಮೂಲದ ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ ಕಂಪೆನಿ ಮಾತ್ರವೇ ಉತ್ತರವನ್ನು ನೀಡಿದೆ. ಉಳಿದ ೧೧ ಕಂಪೆನಿಗಳು ಇದುವರೆಗೂ ಪತ್ರಕ್ಕೆ ಕ್ಯಾರೇ ಅಂದಿಲ್ಲ. ಆದರೆ ಜಪಾನ್‌ ಮೂಲದ ಬಿಟ್‌ ಫಿನಿಕ್ಸ್‌ ಕಂಪೆನಿ ಮಾಹಿತಿಯನ್ನು ನೀಡಿದೆ. ಅದರಲ್ಲಿ ಡಿಸೆಂಬರ್‌ ೧ರಂದು ದೊಡ್ಡ ಮಟ್ಟದ ಬಿಟ್‌ ಕಾಯಿನ್‌ ವರ್ಗಾವಣೆ ಮಾಡಿರುವ ಕುರಿತು ಮಾಹಿತಿಯನ್ನು ನೀಡಿದೆ.

ಬಿಟ್‌ ಫಿನಿಕ್ಸ್‌ ಎಕ್ಸ್‌ಚೇಂಜ್‌ ಮಾಡಿರುವ ಮಾಹಿತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಸುದ್ದಿಗೋಷ್ಠಿಯಲ್ಲಿ ಆರೋಪವನ್ನು ಮಾಡಿದ್ದರು. ಇದರ ಬೆನ್ನಲ್ಲೇ ನಗರ ಪೊಲೀಸ್‌ ಆಯುಕ್ತರು ಕೂಡ ಸ್ಪಷ್ಟನೆಯನ್ನು ನೀಡುವ ಕಾರ್ಯವನ್ನು ಮಾಡಿದ್ದಾರೆ. ಇದೀಗ ಸಿಸಿಬಿ ಬಿಟ್‌ ಕಾಯಿನ್‌ ಎಕ್ಸ್‌ಚೇಂಜ್‌ ಕಂಪೆನಿಗಳಿಗೆ ಪತ್ರ ಬರೆದಿರೋದು ಬಯಲಾಗಿದೆ.

ಇದನ್ನೂ ಓದಿ : ಕುತೂಹಲ ಹೆಚ್ಚಿಸಿದೆ ಬಿಟ್‌ ಕಾಯಿನ್‌ ಪ್ರಕರಣ : ಅಷ್ಟಕ್ಕೂ ಆರೋಪಿಗಳು ಕೊಟ್ಟ ಹೇಳಿಕೆಯಲ್ಲೇನಿದೆ

ಇದನ್ನೂ ಓದಿ : ಬಿಟ್‌ಕಾಯಿನ್‌ ಹೇಗಿರುತ್ತೆ? ಚಲಾವಣೆ – ವ್ಯವಹಾರ ಹೇಗೆ ಮಾಡುತ್ತಾರೆ ? ಈಗೇಕೆ ಹೆಚ್ಚು ಚರ್ಚೆಯಾಗುತ್ತಿದೆ ಈ ಕ್ರಿಪ್ಟೋಕರೆನ್ಸಿ

(CCB who wrote letters to 12-bit coin exchanges case)

Comments are closed.