Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ ; ಇಂದೂ ಕೂಡ ಯೆಲ್ಲೋ ಅಲರ್ಟ್‌

ಬೆಂಗಳೂರು : (Karnataka Weather Yellow Alert)ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನಲೆಯಲ್ಲಿ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಹೆಚ್ಚಾಗುವ ಸಾಧ್ಯತೆಯಿದ್ದು , ಉತ್ತರ ಕನ್ನಡ , ದಕ್ಷಿಣ ಕನ್ನಡ , ಉಡುಪಿ, ಶಿವಮೊಗ್ಗ , ಚಿಕ್ಕಮಗಳೂರು , ಹಾಸನ , ದಾವಣಗೆರೆ , ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ .

ಕರ್ನಾಟಕ(Karnataka Weather Yellow Alert)ದ ಹಲವು ಕಡೆ ಮಳೆಯ ಅಬ್ಬರ ಕಡಿಮೆಯಾಗಿದ್ದು , ಇಂದೂ ಬೆಂಗಳೂರು ಸೇರಿದಂತೆ ಮಲೆನಾಡು , ಕರಾವಳಿಯ ಕೆಲವು ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ . ಮೈಸೂರು ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು , ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ .

ತುಮಕೂರು , ರಾಮನಗರ, ಚಾಮರಾಜನಗರ , ಚಿಕ್ಕಮಗಳೂರು , ಕೊಡಗು , ಕೋಲಾರ, ದಕಿಣ ಕನ್ನಡ , ಉತ್ತರ ಕನ್ನಡ , ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸೂಚನೆ ನೀಡಲಾಗಿದ್ದು , ಕರಾವಳಿ ಬಾಗದಲ್ಲಿ ಕೂಡ ಇಂದು ಮಳೆಯಾಗಲಿದೆ . ಧಾರವಾಡ , ಬೆಳಗಾವಿ , ಹಾವೇರಿ , ರಾಯಚೂರಿನಲ್ಲಿ ಕೊಂಚ ಮಳೆಯಾಗಲಿದ್ದು , ಬೆಂಗಳೂರು ನಗರ , ಚಾಮರಾಜನಗರ , ಕೋಲಾರ , ಮಂಡ್ಯ, ಮೈಸೂರು, ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ .

ಇದನ್ನೂ ಓದಿ : Student suicide : ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಹೊರಹಾಕಿದ್ದ ಶಿಕ್ಷಕರು : 13 ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಇದನ್ನೂ ಓದಿ : Chandrasheskar death case : ಚಂದ್ರು ಸಾವಿನ ಮರುಸೃಷ್ಟಿ, ಸಮಗ್ರ ತನಿಖೆ ಸಿಎಂ ಬೊಮ್ಮಾಯಿ ಸೂಚನೆ

ಇದನ್ನೂ ಓದಿ : Sunny Leone photo on hall ticket : ಟಿಇಟಿ ಪರೀಕ್ಷೆ ಹಾಲ್‌ ಟಿಕೆಟ್‌ ನಲ್ಲಿ ಸನ್ನಿಲಿಯೋನ್‌ ಫೋಟೊ ; ದೂರು ದಾಖಲು

ಜಮ್ಮು ಕಾಶ್ಮೀರ, ಲಡಾಖ್‌, ಹಿಮಾಚಲ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇಂದು ಮತ್ತು ನಾಳೆ ಚದುರಿದ ಮಳೆಯಾಗಲಿದ್ದು , ಇಂದು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ವ್ಯಾಪಕ ಮಳಯಾಗುವ ಸಾಧ್ಯತೆಯಿದೆ . ತಮಿಳುನಾಡು , ಕಾರೈಕಲ್‌ ಮತ್ತು ಪುದುಚೇರಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು ಹಿಮಾಚಲ ಪ್ರದೇಶ , ಜಮ್ಮು ಮತ್ತು ಕಾಶ್ಮೀರ ದ ಪ್ರದೇಶದಲ್ಲಿ ವ್ಯಾಪಕವಾದ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ . ಕೇರಳ, ಮಾಹೆ , ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು , ಆಂಧ್ರಪ್ರದೇಶ ಹಾಗೂ ಪಶ್ಚಿಮ ರಾಜಸ್ಥಾನದಲ್ಲಿ ವರುಣನ ಆರ್ಭಟ ಹೆಚ್ಚಾಗಲಿದೆ . ನವೆಂಬರ್ 11 ರಿಂದ ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಾಹೆ ಮತ್ತು ಆಂಧ್ರಪ್ರದೇಶದಲ್ಲಿ ಗುಡುಗು ಮತ್ತು ಮಿಂಚು ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ .

(Karnataka Weather Yellow Alert) In the background of surface cyclone formation in the Bay of Bengal, there is a possibility of rain in the coastal and southern hinterland of Karnataka today, the Indian Meteorological Department has predicted that the rain will increase in some districts including Uttara Kannada, Dakshina Kannada, Udupi, Shimoga, Chikmagalur, Hassan, Davanagere, Mysore.

Comments are closed.