Virat Kohli Earns Instagram : ಫಾರ್ಮ್‌ನಲ್ಲಿಲ್ಲದಿದ್ದರೂ ಕೊಹ್ಲಿಯೇ ಕಿಂಗ್.. ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ₹8.69 ಕೋಟಿ ಜೇಬಿಗಿಳಿಸ್ತಾರೆ ವಿರಾಟ್

ಬೆಂಗಳೂರು: ಟೀಮ್ ಇಂಡಿಯಾದ ಒಂದು ಕಾಲದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli Earns Instagram), ಇತ್ತೀಚೆಗೆ ತಮ್ಮ ಖ್ಯಾತಿಗೆ, ಗುಣಮಟ್ಟಕ್ಕೆ ತಕ್ಕಂತೆ ಆಡ್ತಿಲ್ಲ. ಕೊಹ್ಲಿ ಸ್ಟಾಂಡರ್ಡ್ ಅಂದ್ರೆ, ಬ್ಯಾಟ್ ಹಿಡಿದು ಮೈದಾನಕ್ಕಿಳಿದ್ರೆ ಸೆಂಚುರಿ. ಆದ್ರೆ ವಿರಾಟ್ ಕೊಹ್ಲಿ (Virat Kohli) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸದೆ 33 ತಿಂಗಳುಗಳೇ ಉರುಳಿ ಹೋಗಿವೆ. 2019ರ ನವೆಂಬರ್’ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊಹ್ಲಿ ಶತಕ ಬಾರಿಸಿದ್ದೇ ಕೊನೆ, ನಂತರ ಕಿಂಗ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸುವ ದೃಶ್ಯವನ್ನು ನೋಡುವ ಅವಕಾಶ ಕ್ರಿಕೆಟ್ ಪ್ರಿಯರಿಗೆ ಸಿಕ್ಕಿಲ್ಲ.

ವಿರಾಟ್ ಕೊಹ್ಲಿ ಶತಕ ಬಾರಿಸದೇ ಇರ್ಬಹ್ದು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಕಿಂಗ್ ಕೊಹ್ಲಿಯ ಪಾಪ್ಯುಲಾರಿಟಿ ಸ್ವಲ್ಪವೂ ಕಡಿಮೆಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈಗಲೂ ಕೊಹ್ಲಿಯೇ ಕಿಂಗ್. ಪ್ರತೀ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ (Instagram post) ಕೊಹ್ಲಿ ಪಡೆಯುವ ಸಂಭಾವನೆಯೇ ಇದಕ್ಕೆ ಸಾಕ್ಷಿ. ಔಟ್ ಆಫ್ ಫಾರ್ಮ್ ವಿರಾಟ್ ಕೊಹ್ಲಿ ತಮ್ಮ ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಈಗಲೂ ₹8.69 ಕೋಟಿ ಜೇಬಿಗಿಳಿಸ್ತಾರೆ. ಫಾರ್ಮ್ ಪಾತಾಳಕ್ಕೆ ಕುಸಿದ್ರೂ ಕೊಹ್ಲಿಯ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟುವಾಗಿರುವ ಕೊಹ್ಲಿ, ಜಾಗತಿಕ ಮಟ್ಟದಲ್ಲೂ ಅಗ್ರಮಾನ್ಯ ಕ್ರೀಡಾತಾರೆಯಾಗಿ ಗುರುತಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಜಾಹೀರಾತು ಪೋಸ್ಟ್’ಗಳು ತುಂಬಾನೇ ಪರಿಣಾಮಕಾರಿ. ಯಾಕಂದ್ರೆ ಕೊಹ್ಲಿ ಹಾಕುವ ಪೋಸ್ಟ್’ಗಳನ್ನು ಕೋಟ್ಯಂತರ ಜನ ಫಾಲೋ ಮಾಡ್ತಾರೆ. ಹೀಗಾಗಿ ಇನ್’ಸ್ಟಾಗ್ರಾಂ ಮೂಲಕ ಕೊಹ್ಲಿ ಯಾವುದಾದ್ರೂ ಪ್ರಾಯೋಜಿತ ಪೋಸ್ಟ್ ಮಾಡಿದ್ರೆ, ಒಂದು ಪೋಸ್ಟ್’ಗೆ ಕೊಹ್ಲಿಗೆ ಸಿಗೋ ಮೊತ್ತ ಬರೋಬ್ಬರಿ ₹8.69 ಕೋಟಿ.

ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಪೋಸ್ಟ್’ಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ಜಗತ್ತಿನ ಟಾಪ್-10 ಕ್ರೀಡಾಪಟುಗಳಲ್ಲಿ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ಪೋರ್ಚುಗಲ್’ನ ದಿಗ್ಗಜ ಫುಟ್ಬಾಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೊ (Cristiano Ronaldo) ಪ್ರತೀ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ₹19 ಕೋಟಿ ಪಡೆದ್ರೆ, 2ನೇ ಸ್ಥಾನದಲ್ಲಿರುವ ಅರ್ಜೆಂಟೀನಾದ ಸ್ಟಾರ್ ಫುಟ್ಬಾಲರ್ ಲಯನೆಲ್ ಮೆಸ್ಸಿ (Lionel Messi) ತಮ್ಮ ಪ್ರತೀ ಇನ್’ಸ್ಟಾಗ್ರಾಂ ಪೋಸ್ಟ್’ಗೆ ₹14 ಕೋಟಿ ಪಡೆಯುತ್ತಾರೆ.

ಕ್ರಿಸ್ಚಿಯಾನೊ ರೊನಾಲ್ಡೊ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 53 ಕೋಟಿ ಫಾಲೋವರ್ಸ್ ಇದ್ರೆ, ಲಯನಲ್ ಮೆಸ್ಸಿಗೆ 34 ಕೋಟಿ ಮತ್ತು ಟೀಮ್ ಇಂಡಿಯಾ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ 20 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಇನ್‌ಸ್ಟಾಗ್ರಾಂ ಪಾಪ್ಯುಲಾರಿಟಿಯಲ್ಲಿ ಭಾರತಗ ನಂ.1 ಕ್ರೀಡಾತಾರೆ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ, ಸದ್ಯ ಕ್ರಿಕೆಟ್”ನಿಂದ ವಿರಾಮ ಪಡೆದಿದ್ದು, ಪತ್ನಿ ಅನುಷ್ಕಾ ಶರ್ಮಾ ಮತ್ತು ಪುತ್ರಿ ವಾಮಿಕಾ ಜೊತೆ ವಿದೇಶೀ ಪ್ರವಾಸದಲ್ಲಿದ್ದಾರೆ. ಆಗಸ್ಟ್ 18ರಿಂದ ಆರಂಭವಾಗಲಿರುವ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೂಲಕ ಕೊಹ್ಲಿ, ಮತ್ತೆ ಟೀಮ್ ಇಂಡಿಯಾದೆ ಮರಳುವ ಸಾಧ್ಯತೆಯಿದೆ.

ಇದನ್ನೂ ಓದಿ : Women Cricketers Marriage Story : ಮಂದಾನ, ಮಿಥಾಲಿ, ಹರ್ಮನ್, ಮಹಿಳಾ ಕ್ರಿಕೆಟರ್”ಗಳೇಕೆ ಮದುವೆಯಾಗಲ್ಲ.. ಇಲ್ಲಿದೆ ಅಸಲಿ ಸತ್ಯ !

ಇದನ್ನೂ ಓದಿ : Sourav Ganguly next ICC chief : ಐಸಿಸಿಯಲ್ಲಿ ಶುರುವಾಗಲಿದ್ಯಾ ದಾದಾ ದರ್ಬಾರ್ ? ಐಸಿಸಿಗೆ ಗಂಗೂಲಿ ಹೊಸ ಬಾಸ್ ?

Virat Kohli Earns Instagram ₹8.69 Cr Per Instagram post

Comments are closed.