Ranji Semi final: ನಾಳೆಯಿಂದ ಚಿನ್ನಸ್ವಾಮಿಯಲ್ಲಿ ರಣಜಿ ಸೆಮಿಫೈನಲ್: ಸೌರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಸೇಡಿನ ಸಮರ

ಬೆಂಗಳೂರು: ರಣಜಿ ಟ್ರೋಫಿ ಸೆಮಿಫೈನಲ್ (Ranji Trophy Semi final) ಹಣಾಹಣಿ ನಾಳೆ (ಬುಧವಾರ) ಆರಂಭವಾಗಲಿದ್ದು, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಸೌರಾಷ್ಟ್ರ (Karnataka Vs Saurashtra) ತಂಡದ ಸವಾಲನ್ನು ಎದುರಿಸಲಿದೆ.

ಇದು ಕರ್ನಾಟಕದ ಪಾಲಿಗೆ ಸೇಡಿನ ಸಮರ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದ 2018-19ನೇ ಸಾಲಿನ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ 5 ವಿಕೆಟ್’ಗಳ ಸೋಲು ಅನುಭವಿಸಿತ್ತು. ಅಂಪೈರ್’ಗಳ ಕೆಟ್ಟ ನಿರ್ಧಾರ ಕರ್ನಾಟಕದ ಸೋಲಿಗೆ ಕಾರಣವಾಗಿತ್ತು. ಆ ಸೋಲಿಗೆ ತವರು ನೆಲದಲ್ಲೇ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶ ಕರ್ನಾಟಕಕ್ಕೆ ಒಲಿದು ಬಂದಿದೆ.ಇಂದೋರ್’ನ ಹೋಳ್ಕರ್ ಮೈದಾನದಲ್ಲಿ ನಡೆಯುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮಧ್ಯಪ್ರದೇಶ ತಂಡ, ಬಂಗಾಳ ತಂಡವನ್ನು ಎದುರಿಸಲಿದೆ.

ರಣಜಿ ಟ್ರೋಫಿ ಸೆಮಿಫೈನಲ್ (Ranji Trophy semi final)
ಕರ್ನಾಟಕ Vs ಸೌರಾಷ್ಟ್ರ
ಪಂದ್ಯ ಆರಂಭ: ಬೆಳಗ್ಗೆ 9.30
ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ರಣಜಿ ಟ್ರೋಫಿ ಸೆಮಿಫೈನಲ್: ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ :
1.ಮಯಾಂಕ್ ಅಗರ್ವಾಲ್ (ನಾಯಕ), 2.ಆರ್.ಸಮರ್ಥ್ (ಉಪನಾಯಕ), 3.ದೇವದತ್ತ್ ಪಡಿಕ್ಕಲ್, 4.ನಿಕಿನ್ ಜೋಸ್, 5.ಮನೀಶ್ ಪಾಂಡೆ, 6.ಶ್ರೇಯಸ್ ಗೋಪಾಲ್, 7.ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), 8.ಕೃಷ್ಣಪ್ಪ ಗೌತಮ್, 9.ವಿದ್ವತ್ ಕಾವೇರಪ್ಪ, 10.ಎಂ.ವೆಂಕಟೇಶ್, 11.ವೈಶಾಖ್ ವಿಜಯ್ ಕುಮಾರ್, 12.ವಿ.ಕೌಶಿಕ್, 13.ಕೆ.ವಿ ಸಿದ್ಧಾರ್ಥ್, 14.ಶುಭಾಂಗ್ ಹೆಗ್ಡೆ, 15.ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್).

ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆರನ್ ಪಿಂಚ್

ಇದನ್ನೂ ಓದಿ : Shikhar Dhawan meets actor Sudeep: ಬೆಂಗಳೂರಲ್ಲಿ ಕಿಚ್ಚನನ್ನು ಭೇಟಿ ಮಾಡಿದ ಟೀಮ್ ಇಂಡಿಯಾ ಗಬ್ಬರ್

ಇದನ್ನೂ ಓದಿ : Shikhar Dhawan Aesha Mukerji : ಮಾಜಿ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಗಬ್ಬರ್, ಶಿಖರ್ ಮಾಜಿ ಪತ್ನಿಗೆ ದೆಹಲಿ ಕೋರ್ಟ್ ಖಡಕ್ ವಾರ್ನಿಂಗ್

ರಣಜಿ ಟ್ರೋಫಿ: ಕರ್ನಾಟಕ Vs ಸೌರಾಷ್ಟ್ರ ಮುಖಾಮುಖಿ

  • 1998-99 (ಸೂಪರ್ ಲೀಗ್): ಕರ್ನಾಟಕಕ್ಕೆ 197 ರನ್ ಜಯ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
  • 2006-07 (ಎಲೈಟ್ ಗ್ರೂಪ್): ಪಂದ್ಯ ಡ್ರಾ (ಮಾಧವರಾವ್ ಸಿಂಧಿಯಾ ಕ್ರೀಡಾಂಗಣ)
  • 2007-08 (ಎಲೈಟ್ ಗ್ರೂಪ್): ಸೌರಾಷ್ಟ್ರಕ್ಕೆ 3 ರನ್ ಜಯ (ಇನ್ಫೋಸಿಸ್ ಕ್ರೀಡಾಂಗಣ, ಮೈಸೂರು)
  • 2008-09 (ಕ್ವಾರ್ಟರ್ ಫೈನಲ್): ಸೌರಾಷ್ಟ್ರಕ್ಕೆ 5 ವಿಕೆಟ್ ಜಯ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ)
  • 2009-10 (ಎಲೈಟ್ ಗ್ರೂಪ್): ಕರ್ನಾಟಕಕ್ಕೆ 6 ವಿಕೆಟ್ ಜಯ (ಖಂಧೇರಿ ಕ್ರಿಕೆಟ್ ಗ್ರೌಂಡ್)
  • 2011-12 (ಎಲೈಟ್ ಗ್ರೂಪ್): ಪಂದ್ಯ ಡ್ರಾ (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
  • 2012-13 (ಕ್ವಾರ್ಟರ್ ಫೈನಲ್): ಪಂದ್ಯ ಡ್ರಾ (ಸೌರಾಷ್ಟ್ರ ಯುನಿವರ್ಸಿಟಿ ಕ್ರೀಡಾಂಗಣ)
  • 2016-17 (ಎಲೈಟ್ ಗ್ರೂಪ್): ಸೌರಾಷ್ಟ್ರಕ್ಕೆ 4 ವಿಕೆಟ್ ಗೆಲುವು ಧ್ರುವ್ ಪಾಂಡೋವ್ ಕ್ರೀಡಾಂಗಣ, ಪಟಿಯಾಲ)
  • 2018-19 (ಎಲೈಟ್ ಗ್ರೂಪ್): ಸೌರಾಷ್ಟ್ರಕ್ಕೆ 87 ರನ್ ಜಯ(ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ರಾಜ್’ಕೋಟ್)
  • 2018-19 (ಸೆಮಿಫೈನಲ್): ಸೌರಾಷ್ಟ್ರಕ್ಕೆ 5 ವಿಕೆಟ್ ಜಯ(ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
  • 2019-20 (ಎಲೈಟ್ ಗ್ರೂಪ್): ಪಂದ್ಯ ಡ್ರಾ (ಮಾಧವರಾವ್ ಸಿಂಧಿಯಾ ಕ್ರೀಡಾಂಗಣ)

Ranji Trophy Semi final: Ranji Semi Final at Chinnaswamy from tomorrow: Saurashtra vs Karnataka revenge battle

Comments are closed.