Siddaramaiah Congress PM candidate : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ : ಪ್ರಧಾನಿ ಅಭ್ಯರ್ಥಿಯಾಗಿ ಸಿದ್ಧರಾಮಯ್ಯ

ಬೆಂಗಳೂರು : (Siddaramaiah Congress PM candidate) ಈಗಾಗಲೇ ಸಾಕಷ್ಟು ಭಾರಿ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕದ ಸಮಾಜವಾದಿ ಹಿನ್ನೆಲೆಯ ನಾಯಕ ಹಾಗೂ ಕಾಂಗ್ರೆಸ್ ನ ಹಿರಿಯ ಮುತ್ಸದ್ಧಿ ಮಾಜಿಸಿಎಂ ಸಿದ್ಧರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ತೆರಳುವ ವಿಚಾರ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಸಿದ್ಧರಾಮಯ್ಯನವರು ತಮಿಳುನಾಡಿಗೆ ತೆರಳಿದ ವೇಳೆ ಈ ವಿಚಾರ ಪ್ರಸ್ತಾಪಕ್ಕೆ ಬಂದಿದ್ದು, ಕಾಂಗ್ರೆಸ್‌ ಪ್ರಧಾನಿ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಘೋಷಣೆಯಾಗುವ ಸಾಧ್ಯತೆಯಿದೆ.

ಸದ್ಯ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಮರ್ಥ ನಾಯಕತ್ವ ಕೊರತೆಯಿಂದ ನರಳುತ್ತಿದೆ. ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಸಮರ್ಥ ನಾಯಕತ್ವದ ಕೊರತೆ ಪಕ್ಷವನ್ನು ಚುನಾವಣೆಗಳಲ್ಲಿ ಹಿಮ್ಮೆಟ್ಟುವಂತೆ ಮಾಡ್ತಿದೆ. ಇದೇ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಗಳಲ್ಲಿ ಮಖಾಡೆ ಮಲಗಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ ಹಾಗೂ ಐದು ವರ್ಷಗಳ ಕಾಲ ಸುಭದ್ರ ಅಧಿಕಾರ ನೀಡಿದ ಅನುಭವವುಳ್ಳ ಸಿದ್ಧರಾಮಯ್ಯನವರನ್ನು ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಲಾಗುತ್ತಿದೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿದೆ.

ಹಾಗೇ ನೋಡಿದರೇ ಈ ಆಹ್ವಾನ ಇಂದು ನಿನ್ನೆಯದಲ್ಲ. 2018 ರ ಚುನಾವಣೆ ವೇಳೆಗೆ ತುಂಬ ಬಲವಾಗಿ ಸಿದ್ಧರಾಮಯ್ಯನವರು ಕೇಂದ್ರ ರಾಜಕಾರಣದ ಮುಂಚೂಣಿಗೆ ಬರಬೇಕೆಂದು ಸ್ವತಃ ರಾಹುಲ್ ಗಾಂಧಿ ಕೂಡ ಆಹ್ವಾನಿಸಿದ್ದರು. ಅಲ್ಲದೇ ಮೋದಿಯವರ ನಾಯಕತ್ವದಲ್ಲಿ ಸಾಗುತ್ತಿರುವ ಎನ್ ಡಿಎ ಗೆ ಟಕ್ಕರ್ ಕೊಡುವಂತ ನಾಯಕತ್ವ ಕಾಂಗ್ರೆಸ್ ಗೂ ಬೇಕೆಂಬ ಒತ್ತಡವೂ ಪಕ್ಷದ ಮೇಲಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ರೀತಿ ಹಾಗೂ ಪಕ್ಷವನ್ನು ಅಧಿಕಾರಕ್ಕೆ ತಂದ ಛಲ ಮತ್ತು ನೀಡಿದ ಜನಸ್ನೇಹಿ ಆಡಳಿತ, ಎಲ್ಲದಕ್ಕಿಂತ ಮುಖ್ಯವಾಗಿ ಕೇಂದ್ರದ ಕಾಂಗ್ರೆಸ್ ಎದುರಿಸುತ್ತಿರುವ ರಾಜಕೀಯ ಅನುಭವದ ಕೊರತೆಯ ದೃಷ್ಟಿಯಿಂದ ಸಿದ್ಧರಾಮಯ್ಯ ಕೇಂದ್ರಕ್ಕೆ ಬರೋದು ಸೂಕ್ತ ಎಂದು ಎಲ್ಲರೂ ಅಭಿಪ್ರಾಯಿಸಿದ್ದರು.

ಈಗ ಮತ್ತೆ ಕಾಂಗ್ರೆಸ್ ಚುನಾವಣೆಯ ಹೊಸ್ತಿಲಿನಲ್ಲಿದೆ. ರಾಜ್ಯಗಳಲ್ಲಿ ಎದುರಾದ ಸಾಲು ಸಾಲು ಸೋಲು ಕೈಹೈಕಮಾಂಡ್ ಕಂಗೆಡಿಸಿದೆ. ಹೀಗಾಗಿ 2024 ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಈಗಲೇ ಸಿದ್ದರಾಮಯ್ಯನವರನ್ನು ದೆಹಲಿ ರಾಜಕಾರಣಕ್ಕೆ ಬರುವಂತೆ ಒತ್ತಾಯ ಹೇರಲಾಗುತ್ತಿದೆ ಎಂದು ಸಿದ್ಧು ಆಪ್ತ ಮೂಲಗಳು ಖಚಿತಪಡಿಸಿವೆ‌‌. ಅದರಲ್ಲೂ ಸಿದ್ಧರಾಮೋತ್ಸವದ ಬಳಿಕ ಕಾಂಗ್ರೆಸ್ ನಲ್ಲಿ ಸಿದ್ಧು ಇಮೇಜ್ ಮತ್ತಷ್ಟು ಉಜ್ವಲಗೊಂಡಿದ್ದು, ಇದೇ ಕಾರಣಕ್ಕೆ ಹೈಕಮಾಂಡ್ ಮತ್ತೊಮ್ಮೆ ಸಿದ್ಧುಗೆ ದೆಹಲಿಗೆ ಬರುವಂತೆ ಮನವೊಲಿಸಿದೆ ಎನ್ನಲಾಗ್ತಿದೆ.

ಆದರೆ ಸಿದ್ಧರಾಮಯ್ಯ ಪಕ್ಷ ನಿಷ್ಠರಾಗಿದ್ದರೂ ತಮ್ಮ ನಿರ್ಧಾರಗಳಲ್ಲಿ ಬದ್ಧರು. ಈಗಾಗಲೇ ಹೇಳಿದಂತೆ ಸಿದ್ಧರಾಮಯ್ಯ ಯಾವ ಕಾರಣಕ್ಕೂ ದೆಹಲಿ ರಾಜಕಾರಣಕ್ಕೆ ತೆರಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರಂತೆ. ಅಷ್ಟೇ ಅಲ್ಲ 2023 ರ ಚುನಾವಣೆ ಕೊನೆಯ ಚುನಾವಣೆ. ಮತ್ತೆ ರಾಜ್ಯಪಾಲರು ಸೇರಿದಂತೆ ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಸ್ವೀಕರಿಸುವುದಿಲ್ಲ. ಯಾವುದೇ ರಾಜಕೀಯಕ್ಕೂ ಬರೋದಿಲ್ಲ ಎಂದು ಸಿದ್ಧು ಹೈಕಮಾಂಡ್ ಗೂ ಖಡಾಖಂಡಿತವಾಗಿ ಹೇಳಿದ್ದಾರಂತೆ. ಹೀಗಾಗಿ‌ ಸಿದ್ಧು ದೆಹಲಿ ರಾಜಕಾರಣ ಮತ್ತೊಮ್ಮೆಯೂ ಕೇವಲ ಸುದ್ದಿಯಾಗಿಯೇ ಉಳಿಯ ಬಹುದೆಂದು ನೀರಿಕ್ಷಿಸಲಾಗುತ್ತಿದೆ.

ಇದನ್ನೂ ಓದಿ : Siddramautsav program : ಸಿದ್ದರಾಮೋತ್ಸವದಿಂದ ನಡುಕ ಶುರುವಾಗಿದ್ದು ಬಿಜೆಪಿಗಲ್ಲ, ಕಾಂಗ್ರೆಸ್ಸಿಗರಿಗೆ : ಡಾ.ಸಿ.ಎನ್​ ಅಶ್ವತ್ಥ ನಾರಾಯಣ

ಇದನ್ನೂ ಓದಿ : Umesh Katthi : ಬಿಜೆಪಿಯಲ್ಲೂ ಶುರುವಾಯ್ತು ಸಿಎಂ ಅಭ್ಯರ್ಥಿ ಚರ್ಚೆ : ಮುಖ್ಯಮಂತ್ರಿಯಾಗಲು ನಾನು ಸಿದ್ಧನೆಂದ ಉಮೇಶ್​ ಕತ್ತಿ

Congress prepares for Lok Sabha elections, Siddaramaiah Congress PM candidate

Comments are closed.