ದಿನಭವಿಷ್ಯ 27 ಡಿಸೆಂಬರ್‌ 2023 : ಬ್ರಹ್ಮಯೋಗದಿಂದ ಮೇಷ, ವೃಶ್ಚಿಕರಾಶಿಯವರಿಗೆ ಅದೃಷ್ಟ

Horoscope Today : ದಿನಭವಿಷ್ಯ 27 ಡಿಸೆಂಬರ್‌ 2023 ಬುಧವಾರ. ಜ್ಯೋತಿಷ್ಯದ ಪ್ರಕಾರ ಮಿಥುನರಾಶಿಗೆ ಇಂದು ಚಂದ್ರನು ಸಾಗುತ್ತಾನೆ. ಜೊತೆಗೆ ಬ್ರಹ್ಮಯೋಗದಿಂದ ಮೇಷ ರಾಶಿ ಮತ್ತು ವೃಶ್ಚಿಕ ರಾಶಿಯವರಿಗೆ ವಿಶೇಷ ಲಾಭವಿದೆ.

Horoscope Today : ದಿನಭವಿಷ್ಯ 27 ಡಿಸೆಂಬರ್‌ 2023 ಬುಧವಾರ. ಜ್ಯೋತಿಷ್ಯದ ಪ್ರಕಾರ ಮಿಥುನರಾಶಿಗೆ ಇಂದು ಚಂದ್ರನು ಸಾಗುತ್ತಾನೆ. ಜೊತೆಗೆ ಬ್ರಹ್ಮಯೋಗದಿಂದ ಮೇಷ ರಾಶಿ ಮತ್ತು ವೃಶ್ಚಿಕ ರಾಶಿಯವರಿಗೆ ವಿಶೇಷ ಲಾಭವಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಸಲಹೆ ಪಡೆದು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ. ಕುಟುಂಬ ಸದಸ್ಯರ ಜೊತೆಗೆ ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ವೃಷಭರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ವಿರೋಧಿಗಳಿಗೆ ಸೋಲಾಗಲಿದೆ. ಹೊಸ ವಾಹನ ಖರೀದಿಗೆ ಕುಟುಂಬ ಸದಸ್ಯರ ಸಲಹೆ ಪಡೆಯಬಹುದು. ನಿಮ್ಮ ಇಷ್ಟ ಕಷ್ಟಗಳನ್ನು ಯಾರೊಂದಿಗೂ ಹಂಚಿ ಕೊಳ್ಳಬೇಡಿ. ಕೆಲಸದ ಸ್ಥಳದಲ್ಲಿ ಕೆಲವೊಂದು ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.

ಮಿಥುನರಾಶಿ ದಿನಭವಿಷ್ಯ
ನಿಮ್ಮ ಪ್ರಗತಿಯನ್ನು ಕಂಡು ಕುಟುಂಬಸ್ಥರು ಆಶ್ಚರ್ಯ ಪಡುತ್ತಾರೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ಖರ್ಚು ವೆಚ್ಚಗಳು ಅಧಿಕವಾಗಲಿದೆ. ದೀರ್ಘ ಕಾಲದ ವರೆಗೆ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಸರಕಾರಿ ನೌಕರಿ ದೊರೆಯುವ ಸಾಧ್ಯತೆಯಿದೆ. ಸಂಬಂಧಿಕರಲ್ಲಿ ಸಹಾಯಪನ್ನು ಸುಲಭವಾಗಿ ಪಡೆಯುತ್ತೀರಿ. ಉದ್ಯೋಗಳಿಗೆ ಮೇಲಾಧಿಕಾರಿಗಳ ಬೆಂಬಲ ದೊರೆಯಲಿದೆ. ತಮ್ಮ ಮಾತಿನಿಂದಲೇ ಎಲ್ಲರನ್ನೂ ಮೆಚ್ಚಿಸುತ್ತೀರಿ.

ಸಿಂಹರಾಶಿ ದಿನಭವಿಷ್ಯ
ಹಣವನ್ನು ಹೂಡಿಕೆ ಮಾಡಿದ್ರೆ ಭವಿಷ್ಯದಲ್ಲಿ ನಿಮಗೆ ಸಹಾಯಕ್ಕೆ ಬರಲಿದೆ. ಮನಸ್ಸಿನಲ್ಲಿ ಯಾವುದೇ ನಕಾರಾತ್ಮಕ ಯೋಚನೆಗಳು ಬಾರದಂತೆ ಎಚ್ಚರವಹಿಸಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಜೆಯ ಮೇಲೆ ತೆರಳಬೇಕಾಗುತ್ತದೆ. ದೂರ ಪ್ರಯಾಣ ಲಾಭದಾಯಕ.

Horoscope Today 27 December 2023 Brahma Yoga Zodiac Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಹಣಕಾಸಿನ ವ್ಯವಹಾರವನ್ನು ಮಾಡುವ ಮುನ್ನ ಎಚ್ಚರಿಕೆಯಿಂದಿರಿ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣ ಹೇರಿ. ನಿಮ್ಮ ಆದಾಯವನ್ನು ನೆನಪಿನಲ್ಲಿ ಇಟ್ಟುಕೊಂಡು ಖರ್ಚುಗಳನ್ನು ಮಾಡಿ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ.

ಇದನ್ನೂ ಓದಿ : ಕರ್ನಾಟಕದಲ್ಲಿ 8 ಮಂದಿಗೆ ಕೊರೊನಾ ರೂಪಾಂತರಿ JN1 ಸೋಂಕು ದೃಢ

ತುಲಾರಾಶಿ ದಿನಭವಿಷ್ಯ
ಕುಟುಂಬದಲ್ಲಿ ಹಬ್ಬದ ವಾತಾವರಣ. ತಾಯಿಯ ಕಣ್ಣಿನ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದ್ರೂ ಯಶಸ್ವಿ ಆಗುತ್ತೀರಿ. ಶತ್ರುಗಳು ನಿಮ್ಮ ಬಗ್ಗೆ ಅಸೂಯೆ ಪಡುತ್ತಾರೆ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ.

ವೃಶ್ಚಿಕರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳಲ್ಲಿ ಇಂದು ಧನಾತ್ಮಕ ಫಲಿತಾಂಶವನ್ನು ಪಡೆಯುವಿರಿ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಿದೆ. ತಂದೆ ಸಲಹೆ ಪಡೆದು ಕಾರ್ಯವನ್ನು ಮಾಡಿದ್ರೆ ಯಶಸ್ಸು ಖಚಿತ. ಸಂಬಂಧಿಕರು ನಿಮಗೆ ಗೌರವವನ್ನು ನೀಡಲಿದ್ದಾರೆ.

ಇದನ್ನೂ ಓದಿ : ಯುವನಿಧಿ ಯೋಜನೆ ಇಂದಿನಿಂದ ಜಾರಿ : ಅರ್ಜಿ ಸಲ್ಲಿಸುವುದು ಹೇಗೆ ? ಯಾರೆಲ್ಲ ಅರ್ಹರು ?

ಧನಸ್ಸುರಾಶಿ ದಿನಭವಿಷ್ಯ
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸಾಲವಾಗಿ ನೀಡಿರುವ ಹಣ ಮರಳಿ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅತ್ಯಗತ್ಯ. ಕೆಲವೊಂದು ಶುಭ ಸುದ್ದಿಯನ್ನು ಕೇಳುವಿರಿ. ಕುಟುಂಬ ಸದಸ್ಯರ ಅಗತ್ಯತೆಗಳನ್ನು ಪೂರೈಸುವಿರಿ.

ಮಕರರಾಶಿ ದಿನಭವಿಷ್ಯ
ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ಸ್ನೇಹಿತರ ಜೊತೆಗೆ ಪಾರ್ಟಿ ಮಾಡುವಿರಿ. ಖರ್ಷುಗಳ ಮೇಲೆ ನಿಯಂತ್ರಣವನ್ನು ಹೇರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಾರೆ.

ಕುಂಭರಾಶಿ ದಿನಭವಿಷ್ಯ
ಕುಟುಂಬದ ಸದಸ್ಯರ ಜೊತೆಗೆ ಪ್ರವಾಸಕ್ಕೆ ತೆರಳುವಿರಿ. ವೈವಾಹಿಕ ಜೀವನದಲ್ಲಿ ಧನಾತ್ಮಕ ಫಲಿತಾಂಶ ಪಡೆಯುವಿರಿ. ಸಂಗಾತಿಯ ಮಾತುಗಳನ್ನು ಆಲಿಸುವುದು ಒಳಿತು. ದೂರ ಪ್ರಯಾಣ ನಿಮ್ಮ ಪಾಲಿಗೆ ಶುಭದಾಯಕವಾಗಲಿದೆ. ಸಹೋದ್ಯೋಗಿಗಳ ಜೊತೆಗೆ ಉತ್ತಮವಾಗಿ ವರ್ತಿಸಿ.

ಇದನ್ನೂ ಓದಿ : ಕೋವಿಡ್-19 ಹೊಸ ರೂಪಾಂತರ JN.1: ಕರ್ನಾಟಕದಲ್ಲಿ 24 ಗಂಟೆಯಲ್ಲಿ 2 ಸಾವು 74 ಹೊಸ ಪ್ರಕರಣ ದಾಖಲು

ಮೀನರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಹಣಕಾಸಿನ ಸಮಸ್ಯೆಗೆ ಕೊಂಚ ಮಟ್ಟಿಗೆ ಪರಿಹಾರ ದೊರೆಯಲಿದೆ. ಸಹೋದರಿಯ ನಡುವಿನ ಭಿನ್ನಾಭಿಪ್ರಾಯಗಳು ಪರಿಹಾರವಾಗಲಿದೆ. ಸಂಬಂಧಿಕರಿಂದ ಶುಭ ಸುದ್ದಿಯನ್ನು ಕೇಳುವಿರಿ.

Horoscope Today 27 December 2023 Brahma Yoga Zodiac Sign

Comments are closed.