ಮಂಡಾಡಿ ಹೋರ್ವರ ಮನೆ ಸಾಂಪ್ರದಾಯಿಕ ಕಂಬಳ ಮಹೋತ್ಸವಕ್ಕೆ ಅದ್ದೂರಿ ತೆರೆ

Mandadi Horvaramane Kambala : ಕೆನೆಹಲಗೆ ವಿಭಾಗ, ಹಗ್ಗದ ಹಿರಿಯ ವಿಭಾಗ, ಹಗ್ಗದ ಕಿರಿಯ ವಿಭಾಗ, ಹಗ್ಗದ ಅತೀ ಕಿರಿಯ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಕಂಬಳ ಕೋಣಗಳ ಓಟದ ನಂತರ ಕೆಸರುಗದ್ದೆ ಓಟ ( 16 ವರ್ಷದ ಒಳಗಿನವರು) ಕೆಸರುಗದ್ದ ಓಟ ( ಸಿನಿಯರ್‌ ವಿಭಾಗ ) ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯು ನಡೆಯಿತು.

Mandadi Horvaramane Kambala (ಕುಂದಾಪುರ) : ಕರಾವಳಿಯ ಸಾಂಪ್ರದಾಯಿಕ ಕಂಬಳಕ್ಕೆ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಂಡಾಡಿಯ ಹೋರ್ವರ ಮನೆಯ ಕಂಬಳ ಗದ್ದೆಯಲ್ಲಿ ಕಂಬಳ ಮಹೋತ್ಸವವು ಅದ್ದೂರಿಯಾಗಿ ನಡೆದಿದೆ. ಈ ಮೂಲಕ ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಕಂಬಳ ಮಹೋತ್ಸವಕ್ಕೆ ತೆರೆಬಿದ್ದಿದೆ.

ಮಂಡಾಡಿ ಹೋರ್ವರ ಮನೆ ಕುಟುಂಬಸ್ಥರು ಹಾಗೂ ಮಂಡಾಡಿ ಮಕ್ಕಿಮನೆ ಹಾಗೂ ಹೊಂಬಾಡಿ ಮಂಡಾಡಿ ಗ್ರಾಮಸ್ಥರು ಮಂಡಾಡಿ ಹೋರ್ವರ ಮನೆಯ ಕಂಬಳಗದ್ದೆಯಲ್ಲಿ ಆಯೋಜಿಸಿದ್ದ ಕಂಬಳ ಮಹೋತ್ಸವಕ್ಕೆ ಉಡುಪಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಎರ್ಮಾಳ್‌ ರೋಹಿತ್‌ ಹೆಗ್ಡೆ ಅವರು ಚಾಲನೆ ನೀಡಿದ್ರು.

Mandadi Horvaramane Kambala Grand Celberation At Kundapur Udupi District
Image Credit to Original Source

ಈ ವೇಳೆ ಮಾತನಾಡಿದ ರೋಹಿತ್‌ ಹೆಗ್ಡೆ ಅವರು, ಮಂಡಾಡಿ ಕಂಬಳದ ಮೂಲಕ ಕರಾವಳಿಯ ಸಾಂಪ್ರದಾಯಿಕ ಕಂಬಳ ಮಹೋತ್ಸವ ಸಂಪನ್ನಗೊಂಡಿದೆ. ಸಾಂಪ್ರದಾಯಿಕ ಕಂಬಳ ಜೊತೆಗೆ ಜೋಡು ಕೆರೆ ಕಂಬಳವನ್ನು ಈ ಭಾಗದಲ್ಲಿ ಆಯೋಜನೆ ಮಾಡುವಂತಾಗಬೇಕು. ರಾಜ್ಯ ಸರಕಾರ ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳ ಮಹೋತ್ಸವಕ್ಕೆ ಅನುದಾನ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಅತ್ಯಂತ ಶಿಸ್ತು ಬದ್ದವಾಗಿ ಕಂಬಳ ಆಯೋಜನೆ ಮಾಡಲಾಗಿತ್ತು. ಸುಮಾರು 45 ಕ್ಕೂ ಅಧಿಕ ಜೊತೆ ಕೋಣಗಳು ಕಂಬಳದಲ್ಲಿ ಪಾಲ್ಗೊಂಡಿದ್ದವು. ಹೋರ್ವರ ಮನೆಯ ರತ್ನಾಕರ ಶೆಟ್ಟಿ ಅವರು ಮಾತನಾಡಿ, ಮಂಡಾಡಿ ಹೋರ್ವರ ಮನೆಯ ಕಂಬಳಕ್ಕೆ ಸುಮಾರು ೮೦೦ ವರ್ಷಗಳ ಇತಿಹಾಸವಿದೆ. ಜೊತೆಗೆ ವರ್ಷಂಪ್ರತಿ ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : ಮನೆಯಲ್ಲಿ ಎಷ್ಟು ನಗದು ಇರಿಸಿಕೊಳ್ಳಬಹುದು ? ಹಣ ವರ್ಗಾವಣೆಗೆ ಜಾರಿಯಾಯ್ತು ಹೊಸ ರೂಲ್ಸ್‌

ಕೆನೆಹಲಗೆ ವಿಭಾಗ, ಹಗ್ಗದ ಹಿರಿಯ ವಿಭಾಗ, ಹಗ್ಗದ ಕಿರಿಯ ವಿಭಾಗ, ಹಗ್ಗದ ಅತೀ ಕಿರಿಯ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಕಂಬಳ ಕೋಣಗಳ ಓಟದ ನಂತರ ಕೆಸರುಗದ್ದೆ ಓಟ ( 16 ವರ್ಷದ ಒಳಗಿನವರು) ಕೆಸರುಗದ್ದ ಓಟ ( ಸಿನಿಯರ್‌ ವಿಭಾಗ ) ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯು ನಡೆಯಿತು. ಇನ್ನು ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಕೋಣಗಳ ಮಾಲೀಕರಿಗೆ ಪ್ರೋತ್ಸಾಹ ಧನ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಹೊನಲು ಬೆಳಕಿನಲ್ಲಿ ನಡೆದ ಕಂಬಳವನ್ನು ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ. ಶಿಸ್ತುಬದ್ದವಾಗಿ ನಡೆದ ಕಂಬಳ ಮಹೋತ್ಸವದ ಕುರಿತು ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಬ್ರಹ್ಮಾವರ ವಲಯ ಕಂಬಳ ಸಮಿತಿಯ ಅಧ್ಯಕ್ಷರಾದ ಸುಧಾಕರ ಹೆಗ್ಡೆ ಹೇರಂಜೆ, ಉಡುಪಿ ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ಪ್ರಥ್ವಿರಾಜ್‌ ಶೆಟ್ಟಿ ಬಿಲ್ಲಾಡಿ, ಬೈಂದೂರು ತಾಲೂಕು ಕಂಬಳ ಸಮಿತಿಯ ಅಧ್ಯಕ್ಷ ವೆಂಕಟ ಪೂಜಾರಿ ಬೈಂದೂರು ಸಸಿಹಿತ್ಲು.

ಇದನ್ನೂ ಓದಿ : ರೋಹಿತ್‌ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ನಾಯಕ : 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ 

Mandadi Horvaramane Kambala Grand Celberation At Kundapur Udupi District
image Credit to Original Source

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾರಕೂರು ಶಾಂತರಾಮ ಶಟ್ಟಿ, ರತ್ನಾಕರ ಶೆಟ್ಟಿ ಮಂಡಾಡಿ, ಅಧ್ಯಾಪಕರಾದ ಜಯರಾಮ್‌ ಶೆಟ್ಟಿ ಮಂಡಾಡಿ , ಆದರ್ಶ ಕುಮಾರ್‌ ಶೆಟ್ಟಿ, ಸಂದರ್ಶ್‌ ಕುಮಾರ್‌ ಶೆಟ್ಟಿ, ಸಂತೋಷ್‌ ಕುಮಾರ್‌ ಶೆಟ್ಟಿ, ಲಕ್ಷ್ಮಣ ಶೆಡ್ಟಿ, ಗುರುಚರಣ್‌ ಶೆಟ್ಟಿ, ಸತನ್‌ ಶೆಟ್ಟಿ, ಅರ್ಷಿತ್‌ ಕುಮಾರ್‌ ಶೆಟ್ಟಿ, ಉಪನ್ಯಾಸಕ ಉದಯ ಕುಮಾರ್‌ ಶೆಟ್ಟಿ ,ಯತಿರಾಜ್‌ ಶೆಟ್ಟಿ, ಶಂಕರ ಕೊಠಾರಿ, ಬೆಳ್ಳಾಡಿ ಅಶೋಕ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಮರತೂರ್‌, ವಿವೇಕ್‌ ನಾಯಕ್‌ ಕುಂಭಾಶಿ, ಸುಧಾಕರ ಕೊಠಾರಿ, ಲಕ್ಷ್ಮಣ್ ಶೆಟ್ಟಿ ಮಂಡಾಡಿ ಉಪಸ್ಥಿತರಿದ್ದರು.

ಇದನ್ನೂ ಓದಿ :ಅಯ್ಯಪ್ಪ ಭಕ್ತರಿಗೆ ಗುಡ್‌ನ್ಯೂಸ್‌ : ಶಬರಿಮಲೆಯಲ್ಲಿ ದೇವರ ದರ್ಶನ ಅವಧಿ 1 ಗಂಟೆ ಹೆಚ್ಚಳ, ನೂಕುನುಗ್ಗಲು ನಿಯಂತ್ರಣ

ಕಂಬಳದಲ್ಲಿ ಉದ್ಘೋಷಕರಾಗಿ ಅಭಿಜಿತ್‌ ಪಾಂಡೇಶ್ವರ ಭಾಗಿಯಾಗಿದ್ದರು. ಮಂಡಾಡಿ ಹೋರ್ವರ ಮನೆ ಕುಟುಂಬಿಕರು, ಮಂಡಾಡಿ ಮಕ್ಕಿಮನೆ ಕುಟುಂಬಸ್ಥರು ಹೊಂಬಾಡಿ ಮತ್ತು ಮಂಡಾಡಿ ಗ್ರಾಮಸ್ಥರು ಕಂಬಳೋತ್ಸವದಲ್ಲಿ ಪಾಲ್ಗೊಂಡಿದ್ದರು. ನೇರಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ

Mandadi Horvaramane Kambala Grand Celberation At Kundapur Udupi District

Comments are closed.