ತೌಕ್ಟೇ ಚಂಡ‌ ಮಾರುತದ ಎಫೆಕ್ಟ್ : ಕರ್ನಾಟಕದಲ್ಲಿ ಎರಡು ದಿನ ಸುರಿಯಲಿದೆ ಭಾರೀ ಮಳೆ

ಬೆಂಗಳೂರು: ಅರಬ್ಬಿ ಸಮುದ್ರಕ್ಕೆ ತೌಕ್ಟೇ‌ ಚಂಡ ಮಾರುತ ಅಪ್ಪಳಿಸ ಲಿದ್ದು, ಕರ್ನಾಟಕದಲ್ಲಿ ಮೇ 14 ಮತ್ತು 15 ರಂದು‌ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಮೇ 14ರ ಬೆಳಗ್ಗೆ ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಹಾಗೂ ಪಕ್ಕದ ಲಕ್ಷದ್ವೀಪ ಪ್ರದೇಶದಾದ್ಯಂತ ಉತ್ತರ ಹಾಗೂ ವಾಯವ್ಯ ದಿಕ್ಕಿಗೆ ಚಂಡಮಾರುತ ಚಲಿಸುವ ಸಾಧ್ಯತೆ ಇದೆ. ಚಂಡಮಾರುತದ ಹಿನ್ನೆಲೆ ಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಲಕ್ಷದ್ವೀಪಗಳಲ್ಲಿ ಯೂ ಮಳೆಯಾಗಲಿದೆ‌.

ಮಳೆಯ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆಯನ್ನು ನೀಡಲಾಗಿದೆ. ಅಲ್ಲದೇ ಮೀನುಗಾರಿಕೆಗೆ ತೆರಳಿದವರು ವಾಪಾಸು ಬರುವಂತೆ ತಿಳಿಸಿದೆ.

Comments are closed.