ಬೆಂಗಳೂರು : (Danger road accident) ಸಿಲಿಕಾನ್ ಸಿಟಿಯ ರಸ್ತೆ ಗುಂಡಿಗಳು ಜನರನ್ನುಬಲಿ ಪಡೆಯುತ್ತಲೇ ಇವೆ. ಈ ವರ್ಷ ಈಗಾಗಲೇ 8 ಕ್ಕೂ ಹೆಚ್ಚು ಜನರು ಈ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ. ಆದರೂ ಬಿಬಿಎಂಪಿ ತಲೆಕೆಡಿಸಿಕೊಂಡಿಲ್ಲ. ಈ ಮಧ್ಯೆ ನಗರದ ಮೇಲ್ಸೇತುವೆಯೊಂದರ ಮೇಲೆ ಯುವತಿಯೊರ್ವಳು ರಸ್ತೆ ಗುಂಡಿಯಿಂದಾಗಿ ನಡುರಸ್ತೆಯಲ್ಲೇ ಉರುಳಿ ಬಿದ್ದ ಘಟನೆ ನಡೆದಿದ್ದು, ಈ ಭಯಾನಕ ವಿಡಿಯೋ ಸಖತ್ ವೈರಲ್ ಆಗಿದೆ.
ಕಳೆದ ಎರಡು ದಿನಗಳ ಹಿಂದೆ ಕಸ್ತೂರಿ ನಗರದ ಮೇಲ್ಸೇತುವೆ ಮೇಲೆ ವಾಹನ ಚಲಾಯಿಸುತ್ತಿದ್ದ ಯುವತಿಯೊರ್ವಳು ರಸ್ತೆ ಗುಂಡಿಯಿಂದಾಗಿ ವಾಹನದ ಮೇಲೆ ನಿಯಂತ್ರಣ ಸಾಧ್ಯವಾಗದೇ ರಸ್ತೆಯಲ್ಲೇ ಉರುಳಿ ಬಿದ್ದಿದ್ದಾರೆ. ಅದೃಷ್ಟವಶಾತ ಆಕೆಯ ಹಿಂಭಾಗದಲ್ಲಿ ಯಾವುದೇ ವಾಹನ ಇಲ್ಲದೇ ಇದ್ದಿದ್ದರಿಂದ ಆ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅದರಲ್ಲೂ ಹೆಲ್ಮೆಟ್ ಧರಿಸಿದ್ದರಿಂದ ಆಕೆಯ ತಲೆಗೂ ಏಟಾಗಿಲ್ಲ. ಆದರೆ ಆ ಯುವತಿ ರಸ್ತೆ ಗುಂಡಿಯಿಂದ ಉರುಳಿ ಬಿಳ್ತಿರೋ ವಿಡಿಯೋ ಸಖತ್ ವೈರಲ್ ಆಗಿದ್ದು, ಬೆಂಗಳೂರಿಗರು ಹಾಗೂ ರಾಜ್ಯದ ಮಂದಿ ರಾಜಧಾನಿಯ ಕಳಪೆ ರಸ್ತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಯಾನಕ ದೃಶ್ಯ ಆ ಯುವತಿಯ ಹಿಂಭಾಗದಲ್ಲಿ ಕಾರು ಚಲಾಯಿಸುತ್ತಿದ್ದ ರಿಜೇಶ್ ಎಂಬುವವರಿಗೆ ಸೇರಿದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಆಧರಿಸಿ ಕಾರು ಮಾಲೀಕ ರಿಜೇಶ್ ಟ್ವೀಟ್ ಮಾಡಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಲವರನ್ನು ಟ್ಯಾಗ್ ಮಾಡಿದ್ದರು. ಹೀಗಾಗಿ ಘಟನೆ ಬೆಳಕಿಗೆ ಬಂದಿತ್ತು. ಇನ್ನೂ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಈ ರಸ್ತೆ ಗುಂಡಿ ಅವಾಂತರದ ವಿಡಿಯೋ ವೈರಲ್ ಆಗ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಆ ರಸ್ತೆ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚಿ ತೇಪೆ ಸಾರಿಸುವ ಕೆಲಸ ಮಾಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಬೈಕ್ ಸವಾರರು ಈ ಡೆಡ್ಲಿ ರಸ್ತೆ ಗುಂಡಿಗಳಿಗೆ ಬಲಿಯಾಗುತ್ತಿದ್ದು, ಸಾಕಷ್ಟು ಘಟನೆಗಳು ನಡೆದ ಬಳಿಕವೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಪ್ರತಿ ವರ್ಷ ರಸ್ತೆ ಗುಂಡಿ ದುರಸ್ಥಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ವ್ಯಯಿಸುತ್ತಿದ್ದರೂ ಗುಣಮಟ್ಟದ ಕಾಮಗಾರಿ ಕೊರತೆಯಿಂದ ರಸ್ತೆಗಳು ಬಲಿಗೆ ಬಾಯಿ ತೆರೆದ ಮೃತ್ಯುಕೂಪಗಳಾಗಿ ಪರಿಣಮಿಸುತ್ತಿವೆ.
ಇದನ್ನೂ ಓದಿ : Savarkar book : ಗಣೇಶೋತ್ಸವಕ್ಕೆ ಸಾವರ್ಕರ್ ಮೆರುಗು: ಸಾವಿರ ಸಾವಿರ ಸಂಖ್ಯೆಯಲ್ಲಿ ಸೇಲ್ ಆಗ್ತಿದೆ ಸಾವರ್ಕರ್ ಬುಕ್
Danger road accident Scooty driver falls from road pothole : video goes viral