Datta Jayanti 2022: ಕಾಫಿನಾಡು ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ : ಇಂದು ಶೋಭಾಯಾತ್ರೆ

ಚಿಕ್ಕಮಗಳೂರು: (Datta Jayanti 2022) ಕಾಫಿನಾಡು ಚಿಕ್ಕಮಗಳೂರಲ್ಲೀಗ ದತ್ತಜಯಂತಿಯ ಸಂಭ್ರಮ. ಈ ಹಿನ್ನೆಲೆಯಲ್ಲೀಗ ಚಿಕ್ಕಮಗಳೂರು ನಗರ ಸಂಪೂರ್ಣ ಕೇಸರಿ ಮಯವಾಗಿದೆ. ದತ್ತಾತ್ರೇಯ ಜಯಂತಿಗಾಗಿ ಬಾಬಾಬುಡನ್ ಗಿರಿಯ ದತ್ತಾತ್ರೇಯ ಪೀಠದಲ್ಲಿ ಸಕಲ ಸಿದ್ದತೆಗಳು ಜೋರಾಗಿದೆ. ಸಚಿವ ಸಿ.ಟಿ.ರವಿ ಸೇರಿದಂತೆ ದತ್ತಭಕ್ತರು ಇಂದು ನಗರದಲ್ಲಿ ಭಿಕ್ಷಾಟನೆ ಮಾಡುವ ಮೂಲಕ ಪಡಿ ಸಂಗ್ರಹಿಸಿದ್ದಾರೆ. ಸಂಜೆ ನಡೆಯಲಿರುವ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ.

ಮಾರ್ಗಶಿರ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದೇ ದತ್ತ ಜಯಂತಿ (Datta Jayanti 2022) ಅಥವಾ ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಶುಭದಿನದಂದು ಭಗವಾನ್‌ ದತ್ತಾತ್ರೇಯರ ಜನನ. ಹೀಗಾಗಿ ಇದೇ ದಿನ ದತ್ತ ಜಯಂತಿ ಆಚರಣೆ. ಈ ಸಲ ಇದು ಡಿಸೆಂಬರ್‌ 7ರಂದು ಬಂದಿದೆ. ದತ್ತಾತ್ರೇಯ ಜಯಂತಿ ಎಂದ ಕೂಡಲೇ ಕನ್ನಡಿಗರಿಗೆ ಕೂಡಲೇ ನೆನಪಾಗುವುದು ಚಿಕ್ಕಮಗಳೂರಿನ ದತ್ತಪೀಠ ಮತ್ತು ಕಲಬುರಗಿಯ ಗಾಣಗಾಪುರ. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ದತ್ತಪೀಠದಲ್ಲಿ ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದಲೂ ದತ್ತಭಕ್ತರು ಚಂದ್ರದ್ರೋಣ ಪರ್ವತಕ್ಕೆ ಆಗಮಿಸುತ್ತಿದ್ದಾರೆ.

ದತ್ತಜಯಂತಿ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಗಿದ್ದು, ಡಿಸೆಂಬರ್ 8ರಂದು ಅಂತ್ಯಗೊಳ್ಳಲಿದೆ. ಡಿಸೆಂಬರ್ 6ರಂದು ದತ್ತ ಜಯಂತಿಯ ಪ್ರಯುಕ್ತ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಮಹಿಳೆಯರಿಂದ ಅನುಸೂಯ ಜಯಂತಿ ನಡೆದಿದ್ದು, ಶೋಭಾಯಾತ್ರೆ ಹಾಗೂ ಡಿಸೆಂಬರ್ 8ರಂದು ದತ್ತ ಪಾದುಕೆ ದರ್ಶನ ನಡೆಯಲಿದೆ. ಡಿಸೆಂಬರ್ 7ರಂದು ದತ್ತಭಕ್ತರಿಂದ ಭೀಕ್ಷಾಟನೆ ನಡೆಯಲಿದ್ದು, ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಲಿದೆ.

ಡಿಸೆಂಬರ್‌ 7ರಂದು ಚಿಕ್ಕಮಗಳೂರು ನಗರದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಗರದ ಕಾಮಧೇನು ಗಣಪತಿ ದೇವಸ್ಥಾನದಿಂದ ಆರಂಭಗೊಳ್ಳುವ ಶೋಭಾಯಾತ್ರೆ ಎಂಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಆಜಾದ್‍ ಪಾರ್ಕ್ ವೃತ್ತದಲ್ಲಿ ಕೊನೆಗೊಳ್ಳಲಿದೆ. ಶೋಭಾಯಾತ್ರೆಯಲ್ಲಿ 23ಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಳ್ಳಲಿದ್ದು, ಮೆರವಣಿಗೆಯ ಮೆರುಗನ್ನು ಇನ್ನಷ್ಟು ಹೆಚ್ಚಿಸಲಿವೆ.

ಇದನ್ನೂ ಓದಿ : Hanuma Jayanthi: ಮೂರು ದಿನ ಮದ್ಯ ಮಾರಾಟ ನಿಷೇಧ : 1 ದಿನ ಶಾಲೆ, ಕಾಲೇಜಿಗೆ ರಜೆ

ಡಿಸೆಂಬರ್‌ 8ರಂದು ಗುರುವಾರ ದತ್ತಪೀಠಕ್ಕೆ ತೆರಳುವ ದತ್ತಭಕ್ತರು ದತ್ತಪಾದುಕೆ ಮತ್ತು ಅನಸೂಯ ದೇವಿಯ ದರ್ಶನ ಪಡೆದುಕೊಳ್ಳಲಿದ್ದಾರೆ. ದತ್ತಪೀಠದಲ್ಲಿ ಗಣಪತಿ ಹೋಮ, ದತ್ತಹೋಮ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಹೋಮ ಪೂರ್ಣಾಹುತಿಯೊಂದಿಗೆ ದತ್ತಜಯಂತಿ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ, ಆಡಳಿತ ಸಮಿತಿಯ ನೇಮಕದ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ.

(Datta Jayanti 2022) Datta Jayanti is being celebrated in Chikmagalur, Kaffinad. In this background, the city of Chikkamagaluru is now full of saffron. All preparations are in full swing at the Dattatreya Peetha of Bababudan Giri for Dattatreya Jayanti. Devotees including minister CT Ravi collected padi by begging in the city today. Thousands of people will participate in the evening procession.

Comments are closed.