Pomegranate Peel Tambuli:ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ಮಾಡಿ ನೋಡಿ ರುಚಿ ರುಚಿ ತಂಬುಳಿ

(Pomegranate Peel Tambuli)ದಾಳಿಂಬೆ ಹಣ್ಣು ಆರೋಗ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದಾಳಿಂಬೆ ಹಣ್ಣಿನಲ್ಲಿ ಅಧಿಕವಾಗಿ ಪೌಷ್ಟಿಕಾಂಶ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ದಾಳಿಂಬೆ ಹಣ್ಣು ಮಾತ್ರವಲ್ಲದೆ ಇದರ ಸಿಪ್ಪೆಯಿಂದ ಕೂಡ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ. ಅಷ್ಟೇ ಅಲ್ಲದೆ ಮುಖದ ಸೌಂಧರ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದಾಳಿಂಬೆ ಹಣ್ಣನ್ನು ಮಾತ್ರ ತಿನ್ನುವುದು ಅಷ್ಟೇ ಅಲ್ಲದೆ ಇದರ ಸಿಪ್ಪೆಯಿಂದ ತಂಬುಳಿ ಮಾಡಿ ತಿಂದರೆ ಆರೋಗ್ಯಕ್ಕೆ ಇನ್ನು ಉತ್ತಮ. ದಾಳಿಂಬೆ ಹಣ್ಣಿನ ಸಿಪ್ಪೆಯ ತಂಬುಳಿ ಹೇಗೆ ಮಾಡುವುದು ಎನ್ನುವ ಮಾಹಿತಿಯ ಕುರಿತು ತಿಳಿಯೋಣ.

Pomegranate Peel Tambuliಬೇಕಾಗುವ ಸಾಮಾಗ್ರಿಗಳು:

  • ದಾಳಿಂಬೆ ಸಿಪ್ಪೆ
  • ಜೀರಿಗೆ
  • ಕಾಳು ಮೆಣಸು
  • ತುಪ್ಪ
  • ಕಾಯಿತುರಿ
  • ಮೊಸರು
  • ನೀರು
  • ಉಪ್ಪು
  • ಸಾಸಿವೆ
  • ಒಣಮೆಣಸು

ಮಾಡುವ ವಿಧಾನ
ಬಾಣಲೆಗೆ ಅರ್ಧ ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಬೇಕು ನಂತರ ಹತ್ತರಿಂದ ಹನ್ನೆರಡು ಕಾಳುಮೆಣಸು, ಒಂದು ಚಮಚ ಜೀರಿಗೆ, ದಾಳಿಂಬೆ ಸಿಪ್ಪೆ ಹಾಕಿ ಹುರಿದುಕೊಂಡು ಗ್ಯಾಸ್‌ ಆಫ್‌ ಮಾಡಿ ಕಾಯಿತುರಿಯನ್ನು ಬಾಣಲೆಗೆ ಹಾಕಿ ಹುರಿಯಬೇಕು.ಮಿಕ್ಸಿ ಜಾರಿಯಲ್ಲಿ ಹುರಿದುಕೊಂಡ ಪದಾರ್ಥ, ಅರ್ಧ ಚಮಚ ಉಪ್ಪು, ನೀರನ್ನು ಬೇರೆಸಿ ರುಬ್ಬಿಕೊಳ್ಳಬೇಕು. ನಂತರ ಬೌಲ್ ನಲ್ಲಿ ಮೊಸರು ಹಾಕಿ ಚೆನ್ನಾಗಿ ಕಲಸಿಕೊಂಡು ಇದಕ್ಕೆ ರುಬ್ಬಿಕೊಂಡ ಪದಾರ್ಥ ಹಾಕಿ ಸೌಟನ್ನು ಆಡಿಸಬೇಕು ನಂತರ ತುಪ್ಪ,ಸಾಸಿವೆ, ಮೆಣಸಿನ ಒಗ್ಗರಣೆ ಹಾಕಿದರೆ ರುಚಿಯಾಗಿ ಸವಿಯಲು ತಂಬುಳಿ ರೆಡಿ.

ಇದನ್ನೂ ಓದಿ:Jeera Soda Recipe: ಮನೆಯಲ್ಲಿಯೇ ತಯಾರಿಸಿ ಅಂಗಡಿಯಲ್ಲಿ ಸಿಗುವ ಜೀರಾ ಸೋಡ

ಇದನ್ನೂ ಓದಿ:Get Healthy Thick Hair :ಆರೋಗ್ಯಕರ ದಟ್ಟ ಕೂದಲು ಪಡೆಯಲು ರುಚಿಯಾದ ಜ್ಯೂಸ್‌ ಕುಡಿಯಿರಿ

ದಾಳಿಂಬೆ ಸಿಪ್ಪೆ
ದಾಳಿಂಬೆ ಹಣ್ಣಿನ ಸಿಪ್ಪೆಯಲ್ಲಿ ಆಂಟಿ ಆಕ್ಸಿಡೆಂಟ್‌ ಅಂಶ ಹೇರಳವಾಗಿ ಇರುವುದರಿಂದ ಮುಖದಲ್ಲಿರುವ ಮೊಡವೆ ಮತ್ತು ಚರ್ಮದಲ್ಲಾಗುವ ಕೆಂಪು ಗುಳ್ಳೆಗಳು, ದದ್ದುಗಳು,ತುರಿಕೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿಗೆ ಒಣಗಿಸಿ ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿ ಆ ಪುಡಿಗೆ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಮೊಡವೆಯನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿಗೆ ಒಣಗಿಸಿ ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿ ಡಬ್ಬಿಯಲ್ಲಿ ಶೇಕರಿಸಿ ಇಟ್ಟುಕೊಂಡು ಪ್ರತಿದಿನ ನೀರಿಗೆ ಹಾಕಿ ಮಿಕ್ಸ್‌ ಮಾಡಿಕೊಂಡು ಕುಡಿಯುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ದೂರವಿರಿಸುತ್ತದೆ. ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ನೀರಿಗೆ ಹಾಕಿ ಕಾಯಿಸಿಕೊಂಡು , ಆ ನೀರು ತಣ್ಣಗಾದ ನಂತರ ಅದರಿಂದ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ಕಡಿಮೆ ಆಗುತ್ತದೆ.

Pomegranate Peel Tambuli Try and taste Tambuli made from pomegranate peel

Comments are closed.