Police Arrests Roosters : ಕೋಳಿ ಹುಂಜಗಳನ್ನು ಅರೆಸ್ಟ್ ಮಾಡಿದ ಪೊಲೀಸರು

ಕೊಪ್ಪಳ : Police Arrests Roosters :ಕೋಳಿ ಅಂಕದ ಮೇಲೆ ದಾಳಿ ನಡೆಸಿರುವ ಪೊಲೀಸರು ಕೋಳಿಗಳನ್ನು ಬಂಧಿಸಿರುವ ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜೂಜು ಕೋರರನ್ನು ಬಿಟ್ಟು ಕೋಳಿಗಳನ್ನು ಬಂಧಿಸಿರುವ ಪೊಲೀಸರು, ಕೋಳಿ ಹುಂಜಗಳನ್ನು ಸೆಲ್ ನಲ್ಲಿ ಇರಿಸಿದ್ದಾರೆ. ಪೊಲೀಸರ ಕ್ರಮದ ವಿರುದ್ದ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಪನ್ನಾಪುರ ಸಮೀಪದ ಬಸವಣ್ಣ ಕ್ಯಾಂಪ್ ನಲ್ಲಿ ಸಂಕ್ರಮದ ಪ್ರಯುಕ್ತ ಕೋಳಿ ಅಂಕ ನಡೆದಿತ್ತು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಜೂಜುಕೋರರನ್ನು ಬಿಟ್ಟು, ಕೋಳಿ ಹುಂಜಗಳನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಹಲವು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗೆ ಬಂಧಿಸಿರುವ ಕೋಳಿಗಳನ್ನು ಪೊಲೀಸರು ಸೆಲ್ ನಲ್ಲಿ ಇರಿಸಿದ್ದಾರೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಜೂಜುಕೋರರು ತಪ್ಪಿಸಿಕೊಂಡಿದ್ದಾರೆ. ಹೀಗೆ ತಂದಿರುವ ಕೋಳಿಗಳನ್ನು ಸೆಲ್ ನಲ್ಲಿ ಇರಿಸಿದ್ದಾರೆ. ಇದೀಗ ಜೂಜುಕೋರರನ್ನು ಬಿಟ್ಟು ಕೋಳಿಗಳನ್ನು ಬಂಧಿಸಿರುವ ಕ್ರಮ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ಇದನ್ನೂ ಓದಿ : ಹೋಟೆಲ್‌ನಲ್ಲಿ ಆಹಾರ ಸೇವನೆ : 68 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕೋಳಿ ಕಾಳಗ ನಡೆಯುತ್ತದೆ. ಕೋಳಿ ಕಾಳಗದಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಪಣಕ್ಕೆ ಇಟ್ಟು ಜೂಜು ನಡೆಸುತ್ತಾರೆ. ರಾಜಕೀಯ ಮುಖಂಡರೇ ಆಯೋಜನೆ ಮಾಡುವ ಈ ಕೋಳಿ ಕಾಳಗದಲ್ಲಿ ಸಾವಿರಾರು ಮಂದಿ ಜಮಾವಣೆಯಾಗುತ್ತಾರೆ. ಪೊಲೀಸರು ಜಮಾವಣೆಯಾಗುತ್ತಲೇ ಜೂಜುಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಯಾವೊಬ್ಬ ಜೂಜುಕೋರನನ್ನು ಬಂಧಿಸಿದೆ ಪೊಲೀಸರು ಕೇವಲ ಕೋಳಿಗಳನ್ನು ಬಂಧಿಸಿ ಸೆಲ್ ನಲ್ಲಿ ಇಟ್ಟಿರುವುದು ಸರಿಯಲ್ಲ ಅನ್ನೋ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ಕೋಳಿಗಳ ಬಂಧನದ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ : first covid Patient dies : ಕೋವಿಡ್ ಸೋಂಕಿಗೆ ಕರ್ನಾಟಕದಲ್ಲಿ ಈ ವರ್ಷದ ಮೊದಲ ಬಲಿ

ಇದನ್ನೂ ಓದಿ : Inhuman incident in Bangalore: ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದ ಬೈಕ್ ಸವಾರ

Different and interesting story Police arrests roosters in Koppal

Comments are closed.