ಕುರುಡು ಕಾಂಚಾಣ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಡಬ್ಬಿಂಗ್‌ ಕಲಾವಿದೆ ಅಮೂಲ್ಯ ಗೌಡ

ಕಿರುತೆರೆಯಿಂದ ಬೆಳ್ಳಿತೆರೆಗೆ ಸಾಕಷ್ಟು ನಟ-ನಟಿಯರು ಎಂಟ್ರಿ ಕೊಟ್ಟು, ತಮ್ಮ ಅದ್ಭುತ ನಟನೆಯ ಮೂಲಕ ಸಿನಿಪ್ರೇಕ್ಷಕರ ಮನ ರಂಜಿಸಿದ್ದಾರೆ. ಇದೀಗ ಬಹುಮುಖ ಪ್ರತಿಭೆ, ಡಬ್ಬಿಂಗ್‌ ಕಲಾವಿದೆ, ಆಂಕರ್‌ ಆಗಿರುವ ರೂಪದರ್ಶಿ ನಟಿ ಅಮೂಲ್ಯ ಗೌಡ ಅವರು ಅಪರಂಜಿ, ಅಗ್ನಿಸಾಕ್ಷಿ ಮತ್ತು ನನ್ನ ಅರಸಿ ರಾಧೆಯಂತಹ ಬೆರಳೆಣಿಕೆಯ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಕುರುಡು ಕಾಂಚಾಣ ಸಿನಿಮಾದಲ್ಲಿ (Kurudu Kanchana movie) ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿ ಅಮೂಲ್ಯ ಗೌಡ ಬಣ್ಣದಲೋಕಕ್ಕೆ ಕಾಲಿಟ್ಟಿದ್ದಾರೆ.

ಎಸ್‌ ಪ್ರದೀಪ್‌ ವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಕಲರ್ಸ್‌ ಕನ್ನಡದ ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್‌ ರಾಜ್‌ ಕೂಡ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ಅಮೂಲ್ಯ ಗೌಡ ಹೈಪರ್‌, ಬಬ್ಲಿ ಮತ್ತು ನೇರ ಸ್ವಭಾವದ ಜನ್ನಿ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕರು ಸಿನಿಮಾ ಚಿತ್ರೀಕರಣವನ್ನು ಮುಗಿಸಿದ್ದು, ಈ ತಿಂಗಳ ಕೊನೆಯಲ್ಲಿ ಹಾಡಿನ ಚಿತ್ರೀಕರಣಕ್ಕಾಗಿ ಕೇರಳಕ್ಕೆ ತೆರಳಲಿದ್ದಾರೆ. ನಟಿ ಅಮೂಲ್ಯ ಗೌಡ,” ಶಿವರಾಜ್‌ಕುಮಾರ್‌, ಉಪೇಂದ್ರ, ಮಾಲಾಶ್ರೀ, ರಮ್ಯಾ ಸಂಗೀತ ಶೃಂಗೇರಿ ಮತ್ತು ಭಾರತಿ ವಿಷ್ಣುವರ್ಧನ್‌ ಅವರಂತಹ ತಾರೆಯರನ್ನು ಸಂದರ್ಶನ ಮಾಡಿದ ಕಾರಣ ಅವರು ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದರು. ಹಾಗಾಗಿ ನನ್ನ ಗಮನವನ್ನು ಸಿನಿಮಾದತ್ತ ಕೇಂದ್ರೀಕರಿಸಿದ್ದೇನೆ. ಆರಂಭಿಕ ಪ್ರಾಜೆಕ್ಟ್‌ ಟೇಕಾಫ್‌ ಆಗದ ಕಾರಣ ನಾನು ಕೆವು ತೊಂದರೆಗಳನ್ನು ಎದುರಿಸಿದರೂ, ಅಂತಿಮವಾಗಿ ಕುರುಡು ಕಾಂಚಾಣ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಡಲು ಸಂತೋಷವಾಗಿದೆ” ಎಂದು ಹೇಳಿದರು.

ಇದನ್ನೂ ಓದಿ : “ಭೋಲಾ” ಸಿನಿಮಾದ ಟಬು ಫಸ್ಟ್‌ ಲುಕ್‌ ಹಂಚಿಕೊಂಡ ಅಜಯ್‌ ದೇವಗನ್

ಇದನ್ನೂ ಓದಿ : ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ “ಗಂಧದಗುಡಿ” ಸಿನಿಮಾ ರೀ ರಿಲೀಸ್‌

ಇದನ್ನೂ ಓದಿ : ಮೈಸೂರು ಪಬ್‌ನಲ್ಲಿ ಅಂದು ನಡೆದಿದ್ದೇನು? ದರ್ಶನ್‌ರ ವೈರಲ್ ವಿಡಿಯೋ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ರಚಿತಾ ರಾಮ್

ಇದನ್ನೂ ಓದಿ : ಕಿರಿಕ್‌ ಪಾರ್ಟಿಯ ಸಾನ್ವಿ ಪಾತ್ರ ಅಪಾರ ಪ್ರೀತಿ ,ಮೆಚ್ಚುಗೆ ತಂದುಕೊಟ್ಟಿದೆ ಎಂದ ರಶ್ಮಿಕಾ ಮಂದಣ್ಣ

ಕುರುಡು ಕಾಂಚಾಣ ಸಿನಿಮಾವನ್ನು ವಿ ಟಾಕೀಸ್‌ ಅವರು ನಿರ್ಮಾಣ ಹೊಣೆಯನ್ನು ಹೊತ್ತಿದ್ದಾರೆ. ಈ ಸಿನಿಮಾಕ್ಕೆ ಗೀತಾ ಕೈವರ್‌ ಅವರು ಹಿನ್ನಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಇನ್ನು ಈ ಸಿನಿಮಾಕ್ಕೆ ಪ್ರವೀಣ್‌ ಶೆಟ್ಟಿಯವರ ಛಾಯಾಗ್ರಹಣವನ್ನು ನೀಡಿದ್ದಾರೆ. ಇನ್ನು ನಟನೆ ಬಗ್ಗೆ ಒಲವಿರುವ ಅಮೂಲ್ಯ ಗೌಡ ಅವರ ನಟನೆಯನ್ನು ಈ ಸಿನಿಮಾ ಮೂಲಕ ನೋಡಬಹುದಾಗಿದೆ.

Kurudu Kanchana movie : Dubbing artist Amulya Gowda entered the silver screen through Kurudu Kanchana.

Comments are closed.