Divya Hagargi : ಕಾಂಗ್ರೆಸ್ ಗೆ ಮುಜುಗರ!! ಪಿಎಸ್ ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ಡಿ.ಕೆ.ಶಿ ಜೊತೆ ಇರುವ ಫೋಟೋ ವೈರಲ್

ಪಿಎಸ್ಐ ಪರೀಕ್ಷೆಯ ಅಕ್ರಮ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ ಪ್ರಿಯಾಂಕ ಖರ್ಗೆ, ಈ ಪ್ರಕರಣದ ಕಿಂಗ್ ಪಿನ್ ಎಂದು ಬಿಂಬಿಸಿರುವ ದಿವ್ಯಾ ಹಾಗರಗಿ(Divya Hagargi) ನಮ್ಮ ಪಕ್ಷದವರ ಜೊತೆ ಅಲ್ಲ ಫೋಟೋಗಳನ್ನು ತೆಗೆಸಿಕೊಂಡಿರುವುದು. ಬಿಜೆಪಿಯ ಪ್ರಮುಖ ನಾಯಕರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಆ ನಾಯಕರನ್ನೇಕೆ ಸರ್ಕಾರ ಇನ್ನೂ ಬಂಧಿಸಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದರು.

ಇವತ್ತು ದಿವ್ಯಾ ಹಾಗರಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆ ನಿಂತಿರುವ ಫೋಟೋ ವೈರಲ್ ಆಗಿದೆ. ಇದನ್ನು ಬಿಜೆಪಿ ಪಕ್ಷ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿ, ‘ಸರ್ಕಾರದ ವಿರುದ್ಧ ಷಡ್ಯಂತರ ನಡೆಸುತ್ತಿರುವ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲೆಗಳು ಲಭಿಸುತ್ತಿವೆ. ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತರಕ್ಕೆ ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರದ ಬಂಗಲೆಯೇ ಅಡ್ಡ’ ಎಂದು ಬರೆದುಕೊಂಡಿದೆ.

ದಿವ್ಯಾ ಮತ್ತು ಡಿಕೆಶಿ ನಿಂತಿರುವ ಫೋಟೋ ಹಲವಾರು ಚರ್ಚೆಗಳಿಗೆ ಕಾರಣವಾಗುತ್ತಿದೆ. ವೈರಲ್ ಆಗಿರುವ ಫೋಟೋ ಬಗ್ಗೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ, ‘ಫೋಟೋ ತೆಗೆಸಿಕೊಂಡ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಗೃಹಸಚಿವರಾಗಿರಲಿಲ್ಲ. ಡಿಕೆಶಿ ಇದ್ದ ಕಾಲದಲ್ಲಿ ಇಂಥ ಹಗರಣಗಳೇನು ನಡೆದಿರಲಿಲ್ಲ. ಬಿಜೆಪಿಗೆ ರಾಜ್ಯದಲ್ಲಿ ಏನೇ ಆದರು ಅದಕ್ಕೆ ಕಾಂಗ್ರೆಸ್, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ತಲೆಯ ಮೇಲೆ ಹಾಕುವುದು ಸಂಪ್ರದಾಯವಾಗಿದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಿಸಿಐ ಪರೀಕ್ಷಾ ಹಗರಣದ ರುವಾರಿ ಎನ್ನಲಾದ ದಿವ್ಯಾ ಹಾಗರಗಿ ಈ ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದಾರೆ. ಆಕೆ, ಬಿಜೆಪಿ ನಾಯಕರ ಜೊತೆ ನಿಂತಿರುವ ಫೋಟೋ ಆಗ ವೈರಲ್ ಆಗಿತ್ತು. ತಕ್ಷಣ ಬಿಜೆಪಿ ಪಕ್ಷವು ದಿವ್ಯಾ ಹಾಗರಗಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಪಕ್ಷದ ಸದಸ್ಯೆಯೂ ಅಲ್ಲ. ಪಿಎಸ್ ಐ ಹಗರಣದಲ್ಲಿ ಯಾರೇ ಭಾಗಿಯಾಗಿರಲಿ, ಅವರ ವಿರುದ್ಧ ಕಠಿಣ ಕ್ರಮಜರುಗಿಸುತ್ತೇವೆ ಎಂದು ಪತ್ರಿಕಾಪ್ರಕಟಣೆ ನೀಡಿತ್ತು. ಈಗ ಡಿ.ಕೆ.ಶಿವಕುಮಾರ್ ಅವರೊಂದಿಗಿನ ದಿವ್ಯಾ ಹಾಗರಗಿ ಅವರ ಫೋಟೋ ವೈರಲ್ ಆಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಜುಗರ ಉಂಟುಮಾಡಿದೆ.

ಇಂಧನ ಸಚಿವರು ಸುನೀಲ್ ಕುಮಾರ್ ಇತ್ತೀಚೆಗಷ್ಟೇ, ಕಾಂಗ್ರೆಸ್ ಪಕ್ಷದ ಮುಖಂಡ ಪ್ರಿಯಾಂಕ ಖರ್ಗೆ ಅವರನ್ನು ತನಿಖೆಗೆ ಒಳಪಡಿಸಿದರೆ ಎಲ್ಲ ವಿಚಾರವೂ ಬಹಿರಂಗವಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಕಾಕತಾಳೀಯ ಎಂಬಂತೆ ಪ್ರಿಯಾಂಕ ಖರ್ಗೆ ತನಿಖೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ಜಾರಿ ಮಾಡಿತ್ತು.

ಇದನ್ನೂ ಓದಿ :Prashant Kishor : ಕಾಂಗ್ರೆಸ್​ ಪಕ್ಷಕ್ಕೆ ಸೇರುವ ಆಹ್ವಾನ ತಿರಸ್ಕರಿಸಿದ ಪ್ರಶಾಂತ್​ ಕಿಶೋರ್​

ಇದನ್ನೂ ಓದಿ : Priyank Kharge : ಸುನೀಲ್ ಕುಮಾರ್ ಅವರೇ ಸ್ವಲ್ಪ ಕಾಮನ್ ಸೆನ್ಸ್ ಯೂಸ್ ಮಾಡಿ ಸ್ವಾಮಿ : ಪ್ರಿಯಾಂಕ ಖರ್ಗೆ

(Divya Hagargi PSI recruitment scam Accused divya with DK Shivakumar phot viral)

Comments are closed.