Ram Gopal Verma : ಬಾಲಿವುಡ್ ಗೆ ಆಗಲೇ ಹಬ್ಬಿದೆ, ಸೌತ್ ಇಂಡಿಯನ್ ಅನ್ನೋ ಕೊರೋನಾ: ರಾಮ್ ಗೋಪಾಲ್ ವರ್ಮಾ

ಕೊರೋನ ನಾಲ್ಕನೆ ಅಲೆಯದ್ದು ಎಲ್ಲಕಡೆ ಸುದ್ದಿ. ಇದು ಯಾವ ರೀತಿ ಹಬ್ಬುತ್ತದೆ ಅನ್ನೋ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಈಗಾಗಲೇ ಕೊರೋನಾ ಬಾಲಿವುಡ್(Bollywood) ಸಿನಿಮಾ ರಂಗವನ್ನು ಪ್ರವೇಶಿಸಿದೆಯಂತೆ. ಇದರಿಂದ ಹೊರಬರಲು ಒದ್ದಾಡುತ್ತಿದೆ ಎಂದು ಹೇಳುವ ಮೂಲಕ ನಿರ್ದೇಶಕ ರಾಮ್ ಗೋಪಾಲ್ ವರ್ಮ (Ram Gopal Verma)ಹೊಸಬಾಂಬ್ ಸಿಡಿಸಿದ್ದಾರೆ. ಇಲ್ಲಿ ಕೊರೋನಾ ಅಂದರೆ ಮತ್ತೇನು ಅಲ್ಲ. ಕೆಜಿಎಫ್ ಮತ್ತು ಆರ್ ಆರ್ ಆರ್ ಸಿನಿಮಾ ಅಂತ.

ಹೌದು, ರಾಮ್ ಗೋಪಾಲ್ ವರ್ಮ್ ಬಾಲಿವುಡ್ ಪಾಲಿಗೆ ದಕ್ಷಿಣಭಾರತದ ಕನ್ನಡ ಮತ್ತು ತೆಲುಗು ಸಿನಿಮಾಗಳ ಇತ್ತೀಚಿನ ಗೆಲುವು ಕೊರೋನ ವೈರಸ್ ನಂತೆ ಆಗಿದೆ. ಆದಷ್ಟು ಬೇಗ, ಈ ವರೈಸ್ ನಿಂದ ಬಿಡುಗಡೆಗೊಂಡು ಹೊರಬರಬೇಕಿದೆ ಎಂದು ಟ್ವೀಟ್ ಮಾಡುವ ಮೂಲಕ ಮತ್ತೊಂದು ವಿವಾದ ಸೃಷ್ಟಿಮಾಡಿದ್ದಾರೆ.

ಇದನ್ನೂ ಓದಿ : Acharya : ಮೆಗಾಸ್ಟಾರ್‌ ಚಿರಂಜೀವಿ ಅವರ ಆಚಾರ್ಯ್‌ ಏಪ್ರಿಲ್‌ 28ಕ್ಕೆ ತೆರೆಗೆ : ಪಾನ್‌ ಇಂಡಿಯಾ ಸಿನಿಮಾಗಳಿಗೆ ಸವಾಲು ಹಾಕಬಹುದೇ?

ಮೊನ್ನೆಯಷ್ಟೇ ಸಂದರ್ಶನವೊಂದರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ದಕ್ಷಿಣ ಭಾರತದ ಸಿನಿಮಾಗಳನ್ನು ಹೊಗಳಿದ್ದರು. ಭಾಷೆಯ ವೈವಿಧ್ಯತೆ ಇದ್ದರು ಕೂಡ ನಾವೆಲ್ಲ ಒಂದೇ ಕುಟುಂಬದಂತೆ ಎಂದು ಹೆಮ್ಮೆಯಿಂದ ಹೇಳಿದ್ದರು. ಇದಾಗಿ, ಎರಡೇ ದಿನಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮ ಈ ರೀತಿ ಟ್ವೀಟ್ ಮಾಡಿದ್ದಾರೆ.

ನಟ ಸಲ್ಮಾನ್ ಖಾನ್ ದಕ್ಷಿಣಭಾರತದ ಸಿನಿಮಾಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಅಲ್ಲಿ ಯಾವಾಗಲು ಹೀರೋಯಿಸಂಗೆ ಒತ್ತು ಕೊಡುತ್ತಾರೆ. ಅವರೆಲ್ಲರಿಗೂ ದೊಡ್ಡ ಅಭಿಮಾನಿಗಳ ಬಳಗೆ ಇದೆ. ನಾವು ಆ ರೀತಿ ಮಾಡಲು ಆಗದು ಎಂದಿದ್ದರು. ವರ್ಮ ಅವರ ಟ್ವೀಟ್ ಸಲ್ಮಾನ್ ಖಾನ್ ಅವರಿಗೆ ತಿರುಗೇಟು ನೀಡಿದಂತಿದೆ.

ಬಾಲಿವುಡ್ ಆಯಾಕಟ್ಟಿನ ಪ್ರದೇಶಗಳಲ್ಲೇ ಕೆಜಿಎಫ್-2 ಸುಮಾರು 300 ಕೋಟಿಗೂ ಅಧಿಕ ಮೊತ್ತಗಳಿಸಿದೆ. ಇದರ ಹವಾ ಎಷ್ಟರ ಮಟ್ಟಿಗೆ ಇದೆ ಅಂದರೆ, ಶಿಲ್ಪಾಶೆಟ್ಟಿ ಕೂಡ ಕೆಜಿಎಫ್-2 ಡೈಲಾಗ್ ಹೊಡೆದ ವೀಡಿಯೋ ವೈರಲ್ ಆಗಿತ್ತು. ಇನ್ನು ಆರ್ ಆರ್ ಆರ್ ಸಿನಿಮಾ ಇಡೀ ಬಾಲಿವುಡ್ ಗೆ ಬಾಲಿವುಡ್ಡೇ ತಿರುಗಿ ನೋಡುವಂತೆ ಮಾಡಿದೆ. ಎಲ್ಲದರ ಹಿನ್ನೆಲೆಯಲ್ಲಿ ರಾಮ್ ಗೋಪಾಲ್ ವರ್ಮ ಈ ರೀತಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Abhishek Bachchan : ಕೆಜಿಎಫ್, ಪುಷ್ಪಾ, ಆರ್ ಆರ್ ಆರ್ ಚೆನ್ನಾಗಿ ಓಡ್ತಾ ಇದೆ ಅಂತ, ಬಾಲಿವುಡ್ ನಲ್ಲಿ ಕಂಟೆಂಟ್ ಇಲ್ಲ ಅಂತಲ್ಲ: ಅಭಿಷೇಕ್ ಬಚ್ಚನ್

(Ram Gopal Verma said Bollywood has been suffering from south Indian coronavirus)

Comments are closed.