Mental Health Tips : ನಿಮ್ಮ ಮನಸ್ಸು ಶುದ್ಧಿಕರಿಸಲು ಈ 5 ಸರಳ ದಾರಿಗಳನ್ನು ಅಳವಡಿಸಿಕೊಳ್ಳಿ!!

ಅತಿಯಾದ ಅಲೋಚನೆಗಳು ಅಥವಾ ಚಿಂತೆಗಳು ನಿಮ್ಮ ಮನಸ್ಸಿನ ಶಾಂತಿಗೆ ಅಡ್ಡಿಯಾಗಬಹುದು (Mental Health Tips) ಮತ್ತು ಅದು ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರಬಹುದು. ನಿಮ್ಮ ದಿನವನ್ನು ಹೊಸತನದಿಂದ ಪ್ರಾರಂಭಿಸಲು ಗೊಂದಲಗಳನ್ನು ದೂರಮಾಡಿಕೊಳ್ಳುವುದು ಅವಶ್ಯಕವಾಗಿದೆ. ನಿಮ್ಮ ಮಿದುಳಿಗೆ ತ್ವರಿತ ಚಾಲನೆ ನೀಡಲು ಇಲ್ಲಿ ಹೇಳಿರುವ 5 ಮಾರ್ಗಗಳನ್ನು ಅನುಸರಿಸಿ. ಮನಸ್ಸನ್ನು ಶುದ್ಧೀಕರಿಸಿಕೊಳ್ಳಿ.

  • ಧ್ಯಾನ :
    ಚಂಚಲ ಮನಸ್ಸನ್ನು ಶಾಂತಗೊಳಿಸಲು ಧ್ಯಾನ ಒಂದು ಪರಿಣಾಮಕಾರಿ ಮಾರ್ಗ. ಒಂದು ನಿರ್ದಿಷ್ಟ ಸಮಯ ಗೊತ್ತುಪಡಿಸಿಕೊಂಡು ಅಭ್ಯಾಸ ಮಾಡಿ ಮತ್ತು ಪರಿಹಾರ ಕಂಡುಕೊಳ್ಳಿ.
  • ಸ್ಮಾರ್ಟ್‌ಫೋನ್‌ ದಿಂದ ದೂರವಿರಿ :
    ಸ್ಮಾರ್ಟ್‌ಫೊನ್ನ ಅತಿಯಾದ ಹಂಬಲದಿಂದ ದೂರವಿರಿ. ಅದರಲ್ಲಿ ಸೋಶಿಯಲ್‌ ಮೀಡಿಯಾ, ಚಾಟ್‌, ಫೊನ್‌ ಕಾಲ್‌ ಮತ್ತು ಇ–ಮೇಲ್‌ ಗಳನ್ನು ಪದೇ ಪದೇ ನೋಡುವುದನ್ನು ತಪ್ಪಿಸಿ. ಅದರ ಬದಲಿಗೆ ನಿಮ್ಮಿಷ್ಟದ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ.
  • ಜರ್ನಲ್‌ ಬರೆಯಿರಿ :
    30 ನಿಮಿಷಗಳ ಟೈಮರ್‌ ಇರಿಸಿಕೊಂಡು ನೀವು ದೂರು ನೀಡಲು ಬಯಸುವ ಎಲ್ಲಾ ವಿಷಯಗಳನ್ನು ಮಿದುಳಿನಂದ ತೆಗೆದುಹಾಕಲು ಅಭ್ಯಸ ಮಾಡಿ.
  • ನಿಮ್ಮೊಂದಿಗೆ ಪ್ರಾಮಾಣಿಕವಾಗಿರಿ :
    ನಿಮ್ಮ ಜೀವನದಲ್ಲಿ ಬರುವ ತೊಂದರೆಗಳನ್ನು ಗುರುತಿಸಲು ಕಲಿಯಿರಿ. ಧೈರ್ಯವಾಗಿ ಎದುರಿಸಿ. ನಿಮ್ಮೊಂದಿಗೆ ನೀವು ಪ್ರಮಾಣಿಕವಾಗಿರಿ.
  • ಪ್ರತಿಬಿಂಬಿಸಿ :
    ಜೀವನದಲ್ಲಿ ನಿಮ್ಮ ಜವಾಬ್ದಾರಿ ಮತ್ತು ಗುರಿಗಳ ಬಗ್ಗೆ ಯೋಚಿಸಿ. ನಿಮ್ಮ ಗುರಿಗಳನ್ನು ಸಾಧಿಸಲು ಏನು ಅಥವಾ ಯಾವ ದಾರಿಯಿರಬಹುದು ಎಂದು ತಿಳಿದುಕೊಳ್ಳಿ.

ಇದನ್ನೂ ಓದಿ : Childhood Mental Health : ಮಕ್ಕಳ ಮಾನಸಿಕ ಆರೋಗ್ಯ ನಿರ್ಲಕ್ಷಿಸಬಾರದು

ಇದನ್ನೂ ಓದಿ : Chikoo Benefits : ಚಿಕ್ಕೂ ಹಣ್ಣಿನ ಈ ಎಲ್ಲಾ ಆರೋಗ್ಯ ಪ್ರಯೋಜನಗಳನ್ನ ತಿಳಿದರೆ ನೀವು ತಿನ್ನದೇ ಇರಲು ಸಾಧ್ಯಾನೇ ಇಲ್ಲ!

(Mental Health Tips 5 ways to detox your mind)

Comments are closed.