Diwali 2022 Guildlines : ದೀಪಾವಳಿಗೆ ಮಾಲಿನ್ಯ ಮಂಡಳಿ ಹೊಸ ರೂಲ್ಸ್ : ರಾತ್ರಿ 8 ರಿಂದ 10ರ ವರೆಗೆ ಹಸಿರು ಪಟಾಕಿಗೆ ಅವಕಾಶ

ಬೆಂಗಳೂರು : Diwali 2022 Guildlines : ಕೊರೊನಾದಿಂದ ಕಳೆಗುಂದಿದ್ದ ಜನಜೀವನ ಹಾಗೂ ಹಬ್ಬಹರಿದಿನಗಳು ಈಗ ಕೊರೋನಾ ಪ್ರಭಾವ ಕಡಿಮೆಯಾದ ಬಳಿಕ ಮತ್ತೆ ರಂಗೇರಲಾರಂಭಿಸಿದೆ. ಈ ಮಧ್ಯೆ ದೀಪಾವಳಿ ಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ದೀಪಾವಳಿ ಹಬ್ಬಕ್ಕಾಗಿ ವಿಶೇಷ ಗೈಡ್ ಲೈನ್ಸ್ (Pollution Board new rules) ಬಿಡುಗಡೆ ಮಾಡಿದೆ. ಗೈಡ್ ಲೈನ್ಸ್ ಪ್ರಕಾರ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಸೂಚನೆ ನೀಡಿದೆ.

ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಬೆನ್ನಲ್ಲೇ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘಿಸಿದ್ರೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲ್ಯೂಶನ್ ಕಂಟ್ರೋಲ್ ಬೋರ್ಡ್ ಎಚ್ಚರಿಸಿದೆ. ಮಾಲಿನ್ಯ ಹೆಚ್ಚಾಗದಂತೆ ಪರಿಸರ ಮಾಲಿನ್ಯ ಮಂಡಳಿಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ‌ ಮಂಡಳಿ ಎಚ್ಚರಿಸಿದೆ. ಈ ಬಗ್ಗೆ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಗಳಿಗೆ, ಪೋಲಿಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಶಿಕ್ಷಣ ಇಲಾಖೆ, ಬಿಬಿಎಂಪಿಗೆ ಸೂಚನೆ ಕಳುಹಿಸಿದೆ.

Diwali 2022 Guildlines Pollution Board new rules Green fireworks allowed from 8 to 10 pm 1

ವಾಯು ಮಾಲಿನ್ಯ ಮಂಡಳಿ ನಿಯಮಗಳ ಪ್ರಕಾರ, ಈ ವರ್ಷವು ಹಸಿರು ಪಟಾಕಿಯನ್ನಷ್ಟೇ ಸುಡುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ ಹಸಿರು ಪಟಾಕಿಯನ್ನು ಹೊರತು ಪಡಿಸಿ ಬೇರೆ ಪಟಾಕಿ ಮಾರಾಟ ಮಾಡಿದಲ್ಲಿ ಸೀಜ್ ಮಾಡಲು ಸೂಚಿಸಲಾಗಿದೆ. ಇನ್ನು ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಮಾತ್ರ ಪಾಟಾಕಿ ಹೊಡೆಯಲು ಅವಕಾಶವಿದ್ದು,ಪರಿಸರ ಸ್ನೇಹಿ ಪಟಾಕಿಗಳನ್ನ ಮಾತ್ರ ಹೊಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ‌ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ.

Diwali 2022 Guildlines Pollution Board new rules Green fireworks allowed from 8 to 10 pm 1

ಇನ್ನು ದೀಪಾವಳಿ ಹಬ್ಬಕ್ಕೂ ಮುಂಚೆ ಹಾಗೂ ನಂತರ ರಾಜಾಧಾನಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟೆಷ್ಟು ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಆಗಲಿದೆ ಎನ್ನುವುದನ್ನ ಪತ್ತೆ ಮಾಡಲು ಮಾಪನ ಅಳವಡಿಸಲು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿದೆ. ಅಲ್ಲದೇ ಮಕ್ಕಳಿಗೆ ಪಟಾಕಿ ಕುರಿತು ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.ಪಟಾಕಿ ಸ್ಟಾಲ್ ಗಳ ಮೇಲೆ ಹದ್ದಿನ ಕಣ್ಣಿಡಬೇಕು. ಪಟಾಕಿಯಿಂದಾಗುವ ತ್ಯಾಜ್ಯವನ್ನ ಹೊರಹಾಕಲು ಘನತ್ಯಾಜ್ಯ ವಾಹನಗಳ ನೇಮಕಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಬೇಕು.

Diwali 2022 Guildlines Pollution Board new rules Green fireworks allowed from 8 to 10 pm 1

ಪಟಾಕಿಗಳಿಂದಾಗುವ ಹಾನಿಯನ್ನ ತಪ್ಪಿಸಲು ಅಗ್ನಿಶಾಮಕ ಇಲಾಖೆಯೊಂದಿಗೂ ಸಮಾಲೋಚನೆ ನಡೆಸಿ ಅವರು ಸಿದ್ಧರಿರಬೇಕು ಎಂದು ವಾಯು ಮಾಲಿನ್ಯ ಮಂಡಳಿ ಸೂಚಿಸಿದೆ. ಒಟ್ಟಿನಲ್ಲಿ ದೀಪಾವಳಿಯನ್ನು ವಾಯುಮಾಲಿನ್ಯ ಹೆಚ್ಚಾಗದಂತೆ ಆಚರಿಸಲು ಮಂಡಳಿ ಮನವಿ ಮಾಡಿದೆ.

ಇದನ್ನೂ ಓದಿ : India Post Department : ಅಂಚೆ ಕಚೇರಿಯಲ್ಲಿ 399 ರೂ.ಪಾವತಿಸಿದ್ರೆ ಸಿಗುತ್ತೆ ರೂ 10 ಲಕ್ಷ

ಇದನ್ನೂ ಓದಿ : Kantara Movie : ಕಾಂತಾರ ಸಕ್ಸಸ್ ಮೂಲಕ ನನಸಾಯ್ತು ನಟ ಯಶ್ ಕಂಡಿದ್ದ ಕನಸು

Diwali 2022 Guildlines Pollution Board new rules Green fireworks allowed from 8 to 10 pm

Comments are closed.