AAI Recruitment 2022 : AAI ನೇಮಕಾತಿ 2022 : ಜೂನಿಯರ್‌ ಮತ್ತು ಸೀನಿಯರ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಏರ್‌ಪೋರ್ಟ್ಸ್‌ ಆಥೋರಿಟಿ ಆಫ್ ಇಂಡಿಯಾ (AAI Recruitment 2022), ಜೂನಿಯರ್‌ ಮತ್ತು ಸೀನಿಯರ್‌ ಅಸಿಸ್ಟೆಂಟ್‌ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್‌ 14, 2022 ರವರೆಗೆ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು AAI ನ ಅಧಿಕೃತ ವೆಬ್‌ಸೈಟ್‌ www.aai.aero ಗೆ ಭೇಟಿ ಕೊಡಿ.

ನೇಮಕಾತಿ ಪ್ರಕ್ರಿಯೆಯು ಒಟ್ಟು 55 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಹೊಂದಿದೆ. ಅದರಲ್ಲಿ 6 ಹಿರಿಯ ಸಹಾಯಕ ಹುದ್ದೆಗಳು, 7 ಜೂನಿಯರ್‌ ಸಹಾಯಕ, 4 ಹಿರಿಯ ಸಹಾಯಕ, 3 ಹಿರಿಯ ಸಹಾಯಕ ಹುದ್ದೆಗಳು ಮತ್ತು 23 ಜೂನಿಯರ್‌ ಸಹಾಯಕ (ಅಗ್ನಿಶಾಮಕ ಸೇವೆಗಳು) ಒಳಗೊಂಡಿದೆ.

ವಯೋಮಿತಿ : 18 ರಿಂದ 30 ವರ್ಷಗಳು.

ವಿದ್ಯಾರ್ಹತೆ :
ಹಿರಿಯ ಸಹಾಯಕ ಹುದ್ದೆಗಳು: ಅರ್ಜಿಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾಸ್ಟರ್ಸ್‌ನಲ್ಲಿ ಇಂಗ್ಲೀಷ್‌ ಮತ್ತು ಪದವಿಯಲ್ಲಿ ಹಿಂದಿ ಅಥವಾ ಮಾಸ್ಟರ್ಸ್‌ನಲ್ಲಿ ಹಿಂದಿ ಮತ್ತು ಪದವಿಯಲ್ಲಿ ಇಂಗ್ಲೀಷ್‌ ಮಾಡಿರಬೇಕು.

ಕಿರಿಯ ಸಹಾಯಕ ಹುದ್ದೆಗಳು :ಪದವಿಯ ಜೊತೆಗೆ ಇಂಗ್ಲೀಷ್‌ ಅಥವಾ ಹಿಂದಿಯಲ್ಲಿ 30/25 WPM ಟೈಪಿಂಗ್‌ ಸ್ಪೀಡ್‌ ಇರಬೇಕು.

ಹಿರಿಯ ಸಹಾಯಕ : 30.09.2022 ಕ್ಕೆ ಮಾನ್ಯವಾಗಿರುವ ಲಘು ಮೋಟಾರು ವಾಹನ ಪರವಾನಿಗೆಯನ್ನು ಹೊಂದಿರುವ ಪದವೀಧರರಾಗಿರಬೇಕು. ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್‌ ಮಾಡಿದವರಿಗೆ ಆದ್ಯತೆ ನೀಡಲಾಗುವುದು.

ಹಿರಿಯ ಸಹಾಯಕ : ಎಲೆಕ್ಟ್ರಾನಿಕ್ಸ್ / ಟೆಲಿಕಮ್ಯುನಿಕೇಶನ್ / ರೇಡಿಯೋ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.

ಹಿರಿಯ ಸಹಾಯಕ (ಹಣಕಾಸು): 3 ರಿಂದ 6 ತಿಂಗಳ ಕಂಪ್ಯೂಟರ್ ತರಬೇತಿ ಕೋರ್ಸ್‌ನೊಂದಿಗೆ ಬಿ.ಕಾಂ ಪದವಿ ಹೊಂದಿರಬೇಕು.

ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆಗಳು): ಕನಿಷ್ಠ 50% ಅಂಕಗಳೊಂದಿಗೆ ಮೆಕ್ಯಾನಿಕಲ್/ಆಟೋಮೊಬೈಲ್/ಫೈರ್‌ನಲ್ಲಿ 10+3 ವರ್ಷಗಳ ಡಿಪ್ಲೊಮಾ ಅಥವಾ 50% ಅಂಕಗಳೊಂದಿಗೆ 12 ನೇ ಪಾಸ್ ಆಗಿರಬೇಕು.

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ/ಇಡಬ್ಲ್ಯ ಎಸ್‌ ನವರಿಗೆ ಅರ್ಜಿ ಶುಲ್ಕವು 1000 ರೂ. ಮಹಿಳೆ/ಎಸ್‌ಸಿ/ಎಸ್‌ಟಿ/ಪಿಡಬ್ಲ್ಯಡಿ/ಎಕ್ಸ್‌ಸರ್ವಿಸ್‌ಮೆನ್‌/ಅಪ್ರೈಂಟಿಸ್‌ಗಳಿಗೆ ಯಾವುದೇ ಅರ್ಜಿ ಶುಲ್ಕಗಳಿರುವುದಿಲ್ಲ.

ಅರ್ಜಿ ಸಲ್ಲಿಕೆ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು AAI ನ ಅಧಿಕೃತ ವೆಬ್‌ಸೈಟ್ www.aai.aero ಭೇಟಿ ಕೊಡುವುದರ ಮೂಲಕ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ : India Post Department : ಅಂಚೆ ಕಚೇರಿಯಲ್ಲಿ 399 ರೂ.ಪಾವತಿಸಿದ್ರೆ ಸಿಗುತ್ತೆ ರೂ 10 ಲಕ್ಷ

ಇದನ್ನೂ ಓದಿ : KPSC Recruitment 2022 : KPSC ನೇಮಕಾತಿ 2022 : ಸ್ಟ್ಯಾಟಿಸ್ಟಿಕಲ್ ಇನ್‌ಸ್ಪೆಕ್ಟರ್‌ ಹುದ್ದೆಗೆ ಅರ್ಜಿ ಆಹ್ವಾನ

(AAI Recruitment 2022 application invited for 55 jr and sr assistant posts)

Comments are closed.