Diwali festival 2022: ಉತ್ತರ ಕನ್ನಡ ಕವಡೀಕೆರೆಯಲ್ಲಿ ಗಂಗಾಷ್ಠಮಿ ಪೂಜೆ : ದೀಪಾವಳಿಯಂದು ನಡೆಯುತ್ತೆ ವಿಶಿಷ್ಟ ಆಚರಣೆ

(Diwali festival 2022)ದೀಪಾವಳಿಯಲ್ಲಿ ಒಂದೊಂದು ಕಡೆ ಒಂದು ರೀತಿಯಾಗಿ ಆಚರಣೆ ಮಾಡುತ್ತಾರೆ. ಕೆಲವೊಂದು ಕಡೆಗಳಲ್ಲಿ ದೇವಿಗೆ ವಿಶೇಷ ಅಲಂಕಾರವನ್ನು ಮಾಡಿ ಪೂಜೆ ಸಲ್ಲಿಸಿದ್ರೆ, ಇನ್ನೂ ಕೆಲವೊಂದು ಕಡೆ ಭೂಮಿ ಪೂಜೆ ನಡೆಯುತ್ತೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿಯ ಕವಡೀಕೆರೆಯ ದುರ್ಗಾದೇವಿಯ ದೇವಸ್ಥಾನದಲ್ಲಿ ಗಂಗಾಷ್ಠಮಿ ವಿಶೇಷ ಪೂಜೆ ನೆರವೇರುತ್ತೆ. ಏನಿದು ಗಂಗಾಷ್ಟಮಿ ಪೂಜೆ, ದೀಪಾವಳಿಯ ದಿನದಂದು ನಡೆಯುವ ವಿಶೇಷ ಆಚರಣೆಯ ಮಹತ್ವವೇನು ಅನ್ನೋ ಮಾಹಿತಿ ಇಲ್ಲಿದೆ.

(Diwali festival 2022)ಕವಡೀಕೆರೆಯ ದುರ್ಗಾದೇವಿಯ ದೇವಸ್ಥಾನಕ್ಕೆ ಪೌರಾಣಿಕ ಹಿನ್ನೆಲೆಯಿದೆ. ದೀಪಾವಳಿಯ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಆಚರಣೆಗಳು ನೆರವೇರುತ್ತದೆ. ಅದ್ರಲ್ಲೂ ಗಂಗಾಷ್ಟಮಿಯ ಪೂಜೆಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಮೂಲೆಗಳಿಂದಲೂ ಭಕ್ತರ ದಂಡೇ ಇಲ್ಲಿಗೆ ಹರಿದು ಬರುತ್ತಿದೆ. ಹೀಗೆ ಬರುವ ಭಕ್ತರಿಗೆ ಅನ್ನದಾನವನ್ನು ಏರ್ಪಡಿಸಲಾಗುತ್ತದೆ. ದುರ್ಗಾದೇವಿ ದೇವಸ್ಥಾನಕ್ಕೂ ಪಾಂಡವರಿಗೂ ನಂಟಿದೆ. ಪಾಂಡವರು ವನವಾಸದ ಸಂದರ್ಭದಲ್ಲಿ ಇದೇ ಸ್ಥಳದಲ್ಲಿ ನೆಲೆಸಿದ್ದರು ಎಂದು ಹೇಳಲಾಗುತ್ತಿದೆ. ಗಂಗಾಷ್ಟಮಿಯ ದಿನದಂದು ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತೆ. ತಾಯಿಗೆ ಉಡಿತುಂಬಿ, ಮುತ್ತೈದೆಯರು ಬಾಗಿನ ನೀಡಿ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ.

ಪಾಂಡವರ ವನವಾಸದ ಹೊತ್ತಲೇ ಭೀಮಸೇನ ದುರ್ಗಾದೇವಿಯ ಪ್ರತಿಷ್ಠಾಪನೆ ಮಾಡಿದ್ದ. ಅಲ್ಲದೇ ದೇವಸ್ಥಾನದ ಬಳಿಯಲ್ಲಿರುವ ಕವಡೀ ಕೆರೆಯನ್ನು ಕೂಡ ಭೀಮನೆ ನಿರ್ಮಾಣ ಮಾಡಿದ್ದ ಎಂದು ಹೇಳಲಾಗುತ್ತಿದೆ. ಪಾಂಡವರು ವನವಾಸದಲ್ಲಿದ್ದಾಗ ಭೀಮಸೇನ ಹಸಿವನ್ನು ನಿಗಿಸಿಕೊಳ್ಳಲು ಹಣ್ಣುಹಂಪಲನ್ನು ಹುಡುಕುತ್ತಾ ಹೋಗುವಂತಹ ಸಂದರ್ಭದಲ್ಲಿ ದೂರದ ಗುಹೆಯಿಂದ ಇಂಪಾದ ಧ್ವನಿಯೊಂದು ಕೇಳುತ್ತದೆ. ಆಗ ಆ ಧ್ವನಿಯನ್ನು ಹಿಂಬಾಲಿಸುತ್ತಾ ಗುಹೆಯನ್ನು ತಲುಪಿದಾಗ ದುರ್ಗಾದೇವಿ ಪ್ರತ್ಯಕ್ಷಳಾಗುತ್ತಾಳೆ. ಪ್ರತ್ಯಕ್ಷಳಾದ ದುರ್ಗಾದೇವಿ ಭೀಮನಿಗೆ ಒಂದು ಆದೇಶವನ್ನು ಮಾಡುತ್ತಾಳೆ. ಸಕಲ ಜೀವಿಗಳಿಗೆ ದಾಹ ನೀಗಲು ಅನುಕೂಲವಾಗುವಂತೆ ಒಂದು ಕೆರೆಯನ್ನು ನಿರ್ಮಿಸುವಂತೆ ಹೇಳುತ್ತಾಳೆ. ಆ ತಾಯಿಯ ಆದೇಶದಂತೆ ಭೀಮಸೇನ ಕವಡೆಯಿಂದ ನೀರನ್ನು ತಂದು ಒಂದು ಕೆರೆಯನ್ನು ನಿರ್ಮಾಣ ಮಾಡುತ್ತಾನೆ. ನಂತರ ಕೆರೆಯ ದಡದಲ್ಲಿ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾನೆ. ಅಂದಿನಿಂದ ಆ ಕೆರೆಯನ್ನು ಮತ್ತು ಪ್ರದೇಶವನ್ನು “ಕವಡೀಕೆರೆ” ಎಂಬ ಹೆಸರಿನಿಂದ ಕರೆಯುತ್ತಾರೆ.

ಯಾವುದೇ ಸ್ಥಳಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಪುರಾಣಗಳಿಗೆ ಸಂಬಂಧ ಪಟ್ಟಟ್ಟಂತಹ ಕುರುಹುಗಳು ಸಿಗುತ್ತಾ ಹೊಗುತ್ತದೆ. ಹೆಚ್ಚಾಗಿ ದೇವಾಲಯ ಇರುವಂತಹ ಸ್ಥಳಗಳಲ್ಲಿ ಪಾಂಡವರು ನೆಲಸಿದ್ದರು ಎಂಬುದಕ್ಕೆ ಸಾಕಷ್ಟು ಕುರುಹುಗಳು ಸಿಗುತ್ತದೆ. ಪಾಂಡವರು ವನವಾಸದಲ್ಲಿದ್ದಾಗ ಹಲವಾರು ಸ್ಥಳಗಳಲ್ಲಿ ತಂಗಿದ್ದರು ಎಂಬುದಕ್ಕೆ ನಿದರ್ಶನವಾಗಿ ಆ ಸ್ಥಳಗಳಲ್ಲಿ ಸಾಕಷ್ಟು ಘಟನೆಗಳು ಅಥವಾ ಅದಕ್ಕೆ ಸಂಬಂಧ ಪಟ್ಟ ಕುರುಹುಗಳು ಕಾಣಸಿಗುತ್ತದೆ. ಅಂತೆಯೇ ಕವಡೀಕೆರೆಯಲ್ಲಿಯೂ ಪಾಂಡವರಿಗೆ ಸಂಬಂದಿಸಿದ ಸಾಕಷ್ಟು ಪುರಾವೆಗಳು ಇಲ್ಲಿ ಕಾಣಸಿಗುತ್ತವೆ.

ಇದನ್ನೂ ಓದಿ:Diwali Tour Plan : ದೀಪಾವಳಿಯ ವಾರಾಂತ್ಯದ ರಜೆಯಲ್ಲಿ ಬೆಂಗಳೂರಿನಿಂದ ಪ್ರವಾಸ ಹೋಗಲು ಪ್ಲಾನ್‌ ಮಾಡ್ತಿದ್ರೆ ಇಲ್ಲಿ ಹೇಳಿರುವ ಸ್ಥಳಗಳನ್ನೊಮ್ಮೆ ಗಮನಿಸಿ…

ಇದನ್ನೂ ಓದಿ:Chinese Loan App : ಚೈನೀಸ್‌ ಲೋನ್‌ ಆಪ್‌ಗಳ ವಿರುದ್ಧ ಬೆಂಗಳೂರು ಪೊಲೀಸ್‌ ಸಮರ

ಕವಡೀಕೆರೆಯ ದುರ್ಗಾದೇವಿ ದೇವಸ್ಥಾನ ಯಲ್ಲಾಪುರದಿಂದ ಸುಮಾರು 8 ಕಿ.ಲೋ ದೂರದಲ್ಲಿದೆ. ಈ ದೇವಸ್ಥಾನಕ್ಕೆಂದೆ ಬರಲು ಪ್ರತ್ಯೇಕ ಬಸ್ಸಿನ ವ್ಯವಸ್ಥೆ ಇಲ್ಲ. ಆದರೆ ಪ್ರವಾಸಿಗರು ಇಲ್ಲಿ ಬರುವಾಗ ವಾಹನದ ವ್ಯವಸ್ಥೆ ಇದ್ದರೆ ಅನೂಕೂಲವಾಗುತ್ತದೆ. ಎಷ್ಟೋ ಬಾರಿ ಕೆಲವು ಸ್ಥಳಗಳಿಗೆ ಭೇಟಿ ಕೊಟ್ಟಾಗ ಆ ಸ್ಥಳದ ಹೆಸರು ವಿಭಿನ್ನವಾಗಿರುತ್ತದೆ. ಆ ಸ್ಥಳದ ಹೆಸರು ಹಿಗ್ಯಾಕೆ ಎಂಬಂತೆ ಮನಸ್ಸಿನಲ್ಲಿ ಪ್ರಶ್ನೆ ಮೂಡುತ್ತದೆ. ಅದರ ಹಿನ್ನಲೆಯ ಕತೆಯನ್ನು ಕೇಳಿದಾಗ ಮೈನವಿರೇಳುವುದು ಖಂಡಿತ.

Uttara Kannada Kavadikere temple unique ritual is held on Diwali

Comments are closed.