DKS Crying: ಮಗುವಿನ ಮಾತು ಕೇಳಿ ಕಣ್ಣೀರಿಟ್ಟ ಡಿಕೆಶಿ

ಚಾಮರಾಜನಗರ : DKS Crying ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗದ್ಗದಿತರಾಗಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಡಿಕೆಶಿ ಭಾವುಕರಾಗಿದ್ದರು.  

ಕರ್ನಾಟಕದಲ್ಲಿ ನಿನ್ನೆಯಿಂದ ಆರಂಭವಾಗಿರೋ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಕೇರಳದಿಂದ ಚಾಮರಾಜನಗರದ ಗುಂಡ್ಲುಪೇಟೆಗೆ ಆಗಮಿಸಿದ ರಾಹುಲ್ ಗಾಂಧಿ ಮೊದಲಿಗೆ ಸಮಾವೇಶದಲ್ಲಿ ಭಾಗವಹಿಸಿದ್ರು. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಕೈಗಳನ್ನ ಹಿಡಿದು ಡೋಲು ಬಾರಿಸೋ ಮೂಲಕ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿದ್ರು.

ಬಳಿಕ ಗುಂಡ್ಲುಪೇಟೆಯಿಂದ ಬೆಂಡಗಳ್ಳಿ ಮಾರ್ಗವಾಗಿ ಸಂಜೆ 7 ಗಂಟೆಗೆ ಬೇಗೂರಿನಲ್ಲಿ ಮೊದಲ ದಿನದ ಪಾದಯಾತ್ರೆ ಮುಕ್ತಾಯವಾಗಿತ್ತು. ಇದಕ್ಕೂ ಮೊದಲು ಗುಂಡ್ಲುಪೇಟೆಯ ವೀರಾಪುರ ಕ್ರಾಸ್ ನಲ್ಲಿ ಸೋಲಿಗರು ಮತ್ತು ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರ ಜೊತೆ ಸಂವಾದ ನಡೆಸಿದ್ರು. ಈ ವೇಳೆ ಆಕ್ಸಿಜನ್ ದುರಂತದಲ್ಲಿ ತಂದೆಯನ್ನ ಕಳೆದುಕೊಂಡ ಮಗುವೊಂದು ದುಃಖಿಸುತ್ತಾ ತಮ್ಮ ಕಷ್ಟವನ್ನ ರಾಹುಲ್ ಗಾಂಧಿ ಅವರಿಗೆ ಹೇಳಿತ್ತು. ನಮ್ಮ ಅಪ್ಪ ಇದ್ದಾಗ ನಾನು ಏನೇ ಕೇಳಿದ್ರೂ ತಂದು ಕೊಡುತ್ತಿದ್ದರು. ಆಕ್ಸಿಜನ್ ದುರಂತದಲ್ಲಿ ನಮ್ಮ ಅಪ್ಪ ತೀರಿ ಹೋದರು. ಈಗ ನಮ್ಮ ತಾಯಿಗೆ ನಾವು ಏನೇ ಕೇಳಿದ್ರೂ ಅದನ್ನ ಕೊಡುವ ಶಕ್ತಿ ಇಲ್ಲ. ನಮ್ಮ ತಾಯಿಗೆ ಒಂದು ಸರ್ಕಾರಿ ಕೆಲಸ ಕೊಡಿಸಿ . ನಾನು ಚೆನ್ನಾಗಿ ಓದಿ ಮುಂದೆ ಡಾಕ್ಟರ್ ಆಗ್ತೀನಿ. ನಮ್ಮ ತಂದೆಯನ್ನ ಡಾಕ್ಟರ್ ಗಳೇ ಸಾಯಿಸಿದ್ರು. ಆದ್ರೆ ನಾನು ಡಾಕ್ಟರ್ ಆಗಿ ಜನರ ಸೇವೆ ಮಾಡ್ತೀನಿ ಅಂತಾ ಹೇಳಿತ್ತು. ಕನ್ನಡದಲ್ಲಿ ಮಾತನಾಡಿದ್ದ ಮಗುವಿನ ಮಾತನ್ನ ಇಂಗ್ಲೀಷ್ ನಲ್ಲಿ ಭಾಷಾಂತರಿಸಿ ರಾಹುಲ್ ಗಾಂಧಿಗೆ ವಿವರಿಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ಕ್ಷಣ ಭಾವುಕಾರದ್ರು. ಬಳಿಕ ಸಂತ್ರಸ್ತರಿಗೆ ನಾವು ನಿಮ್ಮ ಜೊತೆ ಇದ್ದೀವಿ, ನಾವು ನಿಮ್ಮ ದುಃಖವನ್ನ ಕೇಳೋಕೆ ಬಂದಿದ್ದೀವಿ ಅಂತಾ ಮಾತಾಡುತ್ತಾ ದುಖಿಸುತ್ತಾ ಗದ್ಗದಿತರಾದ್ರು.  

ಸಂವಾದದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ ಉದ್ಯೋಗ ನೀಡಬೇಕು. ಸೂಕ್ತ ಪರಿಹಾರ ಕೊಡಬೇಕು ಅಂತಾ ಒತ್ತಾಯಿಸಿದ್ರು. ಅಲ್ದೆ ಮುಂದೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಉದ್ಯೋಗದ ಭರವಸೆ ನೀಡಿದ್ರು.

ಇದನ್ನೂ ಓದಿ: 5G Services : ಭಾರತದಲ್ಲಿ ಇಂದಿನಿಂದ 5G ಕ್ರಾಂತಿ ಶುರು

ಇದನ್ನೂ ಓದಿ: Bharat Jodo Yatra : ಹಲವು ಘಟನೆಗಳಿಗೆ ಸಾಕ್ಷಿಯಾಯಿತು ಕರ್ನಾಟಕದ ಮೊದಲ ದಿನದ ಭಾರತ್ ಜೋಡೊ ಯಾತ್ರೆ

ಇದನ್ನೂ ಓದಿ: Mysore Dussehra : ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ

DKS Crying DK Shivakumar burst into tears during Rahul Gandhi’s Bharat Jodo Yatra dialogue program

Comments are closed.