Dolly Dhananjay : ರೆಟ್ರೋ ಲುಕ್, ಅಂಬಾಸಿಡರ್ ನಲ್ಲಿ ಪ್ರವಾಸ: ವಿದೇಶ ಪ್ರವಾಸದಲ್ಲೂ ಡಾಲಿ ಸಿನಿಮಾ ಪ್ರಮೋಶನ್


ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ನಟ (Dolly Dhananjay) ಡಾಲಿ ಧನಂಜಯ್. ಹಲವು ಸಿನಿಮಾಗಳ ಯಶಸ್ಸಿನ ಬಳಿಕ ಹೆಡ್ ಬುಷ್ (Head bush) ಸಿನಿಮಾದಲ್ಲಿ ಅಂಡರ್ ವರ್ಲ್ಡ್ ಕತೆ ಹೇಳೋಕೆ ಹೊರಟಿರೋ ಡಾಲಿ ಈಗ ಸಿನಿಮಾ ಶೂಟಿಂಗ್ ಮುಗಿಸಿ ಪ್ರಮೋಶನ್ ಗೆ ಸಜ್ಜಾಗುತ್ತಿದ್ದಾರೆ. ಸಿನಿಮಾ ಪ್ರಮೋಶ್‌ಗೂ ಮುನ್ನ ರಿಲ್ಯಾಕ್ಸ್ ಮೂಡನಲ್ಲಿರೋ ಡಾಲಿ ಸದ್ಯ ವಿದೇಶಕ್ಕೆ ಹಾರಿದ್ದಾರೆ.

ಹೌದು ಸದ್ಯ ನಟರಾಕ್ಷಸ ಡಾಲಿ ಧನಂಜಯ್ ಓಸ್ಲೋ ಮತ್ತು ನಾರ್ವೇ ಪ್ರವಾಸದಲ್ಲಿದ್ದಾರೆ. ಓಸ್ಲೋ ಹಾಗೂ ನಾರ್ವೇ ದೇಶದ ಬೀದಿಗಳಲ್ಲಿ ಡಾಲಿ ಧನಂಜಯ್ ಸುತ್ತಾಡುತ್ತಿದ್ದು, ಅದರಲ್ಲೂ ಹೆಡ್ ಬುಷ್ ಸಿನಿಮಾದ ಜಯರಾಜ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೆಡ್ ಬುಷ್ (Head bush) ಸಿನಿಮಾದಲ್ಲಿ ಪಾತ್ರದ ಅಗತ್ಯಕ್ಕೆ ತಕ್ಕಂತೆ ಡಾಲಿ ಧನಂಜಯ್ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಈಗ ಸಿನಿಮಾ ಪ್ರಚಾರ ಹಾಗೂ ಪ್ರವಾಸಕ್ಕಾಗಿ ನಾರ್ವೇ ಪ್ರವಾಸದಲ್ಲಿರೋ ಡಾಲಿ ಅಲ್ಲಿಯೂ ಬೆಲ್ ಬಾಟಂ ಪ್ಯಾಂಟ್ ಹಾಗೂ ಓಲ್ಡ್ ಸ್ಟೈಲ್ ಶರ್ಟ್ ತೊಟ್ಟು ಮಿಂಚಿದ್ದಾರೆ. ಓಸ್ಲೋ ಹಾಗೂ ನಾರ್ವೇ ಬೀದಿಗಳಲ್ಲಿ ಭಾರತೀಯರು ಸೇರಿದಂತೆ ಜನರು ಡಾಲಿ ಧನಂಜಯ್ ಗುರುತಿಸಿ ಅವರ ಜೊತೆ ಸೆಲ್ಪಿ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಇದೇ ಅಕ್ಟೋಬರ್ 21 ರಂದು ಡಾಲಿ ಧನಂಜಯ್ ಬಹು ನೀರಿಕ್ಷಿತ ಸಿನಿಮಾ ಹೆಡ್ ಬುಷ್ (Head bush)ತೆರೆ ಕಾಣಲಿದೆ. ಈ ಸಿನಿಮಾ ಪ್ರಚಾರಕ್ಕೆ ಈಗಾಗಲೇ ರೆಟ್ರೋ ಲುಕ್ ನಲ್ಲೇ ಕಾಣಿಸಿಕೊಂಡಿರೋ ಧನಂಜಯ್, ಪ್ರಚಾರದ ವಾಹನದಲ್ಲೂ ರೆಟ್ರೋ ಲುಕ್ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರಂತೆ. ಅದಕ್ಕಾಗಿ ಡಾಲಿ, ಅಂಬಾಸಿಡರ್ ಕಾರುಗಳನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಹಳೆಯ ಬ್ರ್ಯಾಂಡ್ ಎನ್ನಿಸಿದ್ದ ಅಂಬಾಸಿಡರ್ ಕಾರಿನಲ್ಲೇ ಸಿನಿಮಾ ಪ್ರಚಾರ ಮಾಡಲು ನಿರ್ಧರಿಸಿರೋ ಡಾಲಿ, ಅದಕ್ಕಾಗಿ ಹೆಡ್ ಬುಷ್ ಪೋಸ್ಟರ್ ನ್ನು ಅಂಬಾಸಿಡರ್ ಗೆ ಅಂಟಿಸಿ ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ : ಕಾಂತಾರ ವೀಕ್ಷಿಸಿ ಹುಚ್ಚೆದ್ದು ಕುಣಿದ ರಕ್ಷಿತ್​ ಶೆಟ್ಟಿ : ಇಂತಹ ಕ್ಲೈಮಾಕ್ಸ್​​ ಹಿಂದೆಂದೂ ಕಂಡೇ ಇಲ್ಲ ಎಂದ ಸಿಂಪಲ್​ಸ್ಟಾರ್​

ಇದನ್ನೂ ಓದಿ : ಅಭಿಮಾನಿಗಳ ಮನ ಗೆದ್ದ ರಿಷಬ್‌ ಶೆಟ್ಟಿ “ಕಾಂತಾರ”

ಇದನ್ನೂ ಓದಿ : ಕಿರೀಟಿ ಮೊದಲ ಚಿತ್ರದ ಟೈಟಲ್ ರಿವೀಲ್ -‘ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ

1970 ರ ದಶಕದಲ್ಲಿ ಬೆಂಗಳೂರು ಭೂಗತ ಲೋಕವನ್ನು ಆಳಿದ್ದ ಡಾನ್ ಜಯರಾಜ್ ಕತೆಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಿಸಲಾಗಿದ್ದು ಈ ಸಿನಿಮಾಕ್ಕೆ ಅಗ್ನಿ ಶ್ರೀಧರ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾ ಈಗಾಗಲೇ ವಿವಾದಕ್ಕೆ ಕಾರಣವಾಗಿದ್ದು ನನ್ನ ತಂದೆಯನ್ನು ಈ ಸಿನಿಮಾದಲ್ಲಿ ಕೆಟ್ಟ ರೌಡಿಯಂತೆ ಬಿಂಬಿಸಲಾಗಿದೆ ಎಂದು ಡಾನ್ ಜಯರಾಜ್ ಪುತ್ರ ಅಜಿತ್ ಜಯರಾಜ್ ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಹ ನೀಡಿದ್ದಾರೆ.

Dolly Cinema Promotion in retro look, tour abroad in Ambassador

Comments are closed.