Dog School : ಗೋ ಶಾಲೆ ಮಾದರಿಯಲ್ಲಿ ಶ್ವಾನ ಶಾಲೆ: ಸರ್ಕಾರಕ್ಕೆ ಸಲ್ಲಿಕೆಯಾಯ್ತು ಮನವಿ

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರು ಖ್ಯಾತಿ ಗಳಿಸದಷ್ಟೇ ಅಪಖ್ಯಾತಿಗಳು ಕೂಡ ಇವೆ. ಹೀಗಿರುವ ಬೆಂಗಳೂರಿನಲ್ಲಿ ಬಗೆಹರಿಯದ ಸಮಸ್ಯೆಗಳಲ್ಲಿ ಬೀದಿ ನಾಯಿ ಗಳ ಸಮಸ್ಯೆ ಕೂಡಾ ಒಂದು. ಸಂತಾನ ಹರಣದಿಂದ ಆರಂಭಿಸಿ ಯಾವುದೇ ಪ್ಲ್ಯಾನ್ ಮಾಡಿದ್ರೂ ನಗರದಲ್ಲಿ ಬೀದಿನಾಯಿ ಹಾವಳಿ ನಿಯಂತ್ರಿಸೋಕೆ ನಗರಾಢಳಿತಕ್ಕೆ ಸಾಧ್ಯವಾಗಿಲ್ಲ. ಹೀಗೆ ಬಗೆ ಹರಿಯದ ಸಮಸ್ಯೆಯಾಗಿರೋ ಸ್ಟ್ರೀಟ್ ಡಾಗ್ (Dog School) ಗೆ ಶಾಸಕರೊಬ್ಬರು ಪರಿಹಾರ ಕಂಡುಹಿಡಿಯಲು ಮುಂದಾಗಿದ್ದಾರೆ.

ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಓಡಾಡುವ ಬೀದಿ ನಾಯಿಗಳು ಮನುಷ್ಯರ ಮೇಲೆ ದಾಳಿ‌ ಮಾಡೋದಲ್ಲದೇ ವಾಹನ ಸವಾರರ ಸಾವಿಗೂ ಕಾರಣವಾಗುತ್ತಿವೆ. ಹೀಗಾಗಿ ಈ ಸಮಸ್ಯೆಗೆ‌ ಒಂದು ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಶಾಸಕ ರವಿ ಸುಬ್ರಹ್ಮಣ್ಯ ಸರಕಾರಕ್ಕೆ ಮನವಿ ನೀಡಿದ್ದಾರೆ. ಮಾತ್ರವಲ್ಲ ಇದಕ್ಕೊಂದು ಪರಿಹಾರದ ಯೋಜನೆ ತಯಾರಿಸಿ (Dog School) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಗೋ ಶಾಲೆಗಳ ರೀತಿಯಲ್ಲಿ ನಾಯಿಗಳಿಗೂ ಕೂಡಾ ಶೆಲ್ಟರ್ ನಿರ್ಮಿಸಿಕೊಡಲು ಸರ್ಕಾರಕ್ಕೆ ಶಾಸಕ ರವಿ ಸುಬ್ರಹ್ಮಣ್ಯ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಜಾಗ ನೀಡಿ ಎಲ್ಲಾ ಬೀದಿ ನಾಯಿಗಳನ್ನು ಶಿಫ್ಟ್ ಮಾಡುವಂತೆ ಶಾಸಕ ರವಿ ಸುಬ್ರಹ್ಮಣ್ಯ ಮನವಿ ಮಾಡಿದ್ದಾರೆ. ಜೊತೆಗೆ ನಾಯಿಗಳ ಬರ್ತ್ ಕಂಟ್ರೋಲ್ ಮಾಡಬೇಕಾದ ಪಾಲಿಕೆ ಈ ಕೆಲಸವನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಬೆಂಗಳೂರಿನಲ್ಲಿ 15 ಕ್ಕೂ ಹೆಚ್ಚು ಪ್ರಾಣಿ ದಯಾ ಸಂಘಗಳು ಇದೆ. ಪ್ರತಿ ಸಂಘದಿಂದ ತಿಂಗಳಿಗೆ 150 ಶ್ವಾನಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗ್ತಿದೆ. ಪ್ರತಿ ನಾಯಿಗೂ 1500 ವೆಚ್ಚ ತಗಲುತ್ತಿದ್ದು ಇದು ಸರಿಯಾದ ರೀತಿಯಲ್ಲಿ ಆಗ್ತಿಲ್ಲ. ಹಾಗೇ ಸಿಟಿಯಲ್ಲಿರುವ ಅನೇಕ ನಾಯಿಗಳಿಗೆ ಊಟ ಇಲ್ಲ. ಹೀಗಾಗಿ 4-5  ಎಕರೆ ಜಾಗ ನೀಡಿ ಶೆಲ್ಟರ್ ನಿರ್ಮಿಸಿ‌ಕೊಡಿ ಎಂದಿದ್ದಾರೆ

ಈಗಾಗಲೇ ನಗರದ ಅನೇಕ ಪ್ರಾಣಿ ದಯಾ ಸಂಘಗಳ ಜೊತೆ ಮಾತುಕತೆಯಾಗಿದೆ. ಒಂದೊಮ್ಮೆ ಸರ್ಕಾರ ಜಾಗ ಕೊಟ್ಟರೆ ಅವರು ನಾಯಿಗಳನ್ನು ನೋಡಿಕೊಳ್ಳಲು ತಯಾರಿದ್ದಾರೆ ಎಂದು ಶಾಸಕ ರವಿ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ. ಸರ್ಕಾರದಿಂದ ನಮಗೆ ಭರವಸೆ ಸಿಕ್ಕಿದೆ. ನಾಯಿಗಳಿಗೆ ಶೆಲ್ಟರ್ ಮಾಡಿಕೊಡೋದಾಗಿ ಭರವಸೆ ನೀಡಿದೆ. ಆದಷ್ಟು ಬೇಗ ಕಾನೂನಿನ ಅಡಿಯಲ್ಲಿ ಅನುಮತಿ ಸಿಕ್ಕರೆ, ನಾಯಿಗಳ ಹಾವಳಿಗೆ ಮುಕ್ತಿ ಸಿಗಲಿದೆ.ನಾಯಿಗಳಿಗೂ ಒಂದು ಬದುಕು ಸಿಗಲಿದೆ.ನಮ್ಮ ಕ್ಷೇತ್ರದಲ್ಲೇ ಅನೇಕರು ಬೀದಿ ನಾಯಿಗಳ ದೂರು ತರ್ತಾರೆ, ಹೀಗಾಗಿ ಈ ಕಾರ್ಯ ಮಾಡಲೇಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :  ಚಿನ್ನಾಭರಣ ಸಾಲ ಮನ್ನಾ : ಗುಡ್‌ನ್ಯೂಸ್‌ ಕೊಟ್ಟ ರಾಜ್ಯ ಸರಕಾರ

ಇದನ್ನೂ ಓದಿ : ರಾತ್ರಿ ವೇಳೆ ಕೈಕೊಟ್ಟ ಗೂಗಲ್‌ ಮ್ಯಾಪ್‌ : ಪರದಾಡಿದ ಪ್ರಯಾಣಿಕರು

(Dog School Demand Basavanagudi MLA Ravi Subramanya)

Comments are closed.