108 employees warn strike : ದಸರಾ ಆಯ್ತು ದೀಪಾವಳಿ ಬಂದ್ರೂ ಸಂಬಳವಿಲ್ಲ: ಮುಷ್ಕರದ ಎಚ್ಚರಿಕೆ ಕೊಟ್ಟ 108 ಸಿಬ್ಬಂದಿ

ಬೆಂಗಳೂರು : 108 employees warn strike : ಇತ್ತೀಚಿಗಷ್ಟೇ ತಣ್ಣಗಾಗಿದ್ದ ರಾಜ್ಯದ ಜೀವ ರಕ್ಷಕ ವಾಹನ 108 ಸಿಬ್ಬಂದಿಗಳ ಮುಷ್ಕರ ಪ್ರಸ್ತಾಪ ಮತ್ತೆ ಮುನ್ನಲೆಗೆ ಬರಲು ಸಿದ್ಧವಾಗಿದೆ. ದಸರಾ ವೇಳೆಗೆ ಸಂಬಳ‌ ನೀಡೋದಾಗಿ ಹೇಳಿದ್ದ ಭರವಸೆಗಳು ಕೇವಲ ಭರವಸೆಯಾಗಿಯೇ ಉಳಿದಿದ್ದು, ದೀಪಾವಳಿ ಬಂದರೂ ಸಿಗದ ಸಂಬಳದಿಂದಾಗಿ 108 ಸಿಬ್ಬಂದಿ ಮತ್ತೆ ಮುಷ್ಕರಕ್ಕೆ ಸಜ್ಜಾಗಿದ್ದಾರೆ. ಹೌದು ಕೆಲದಿನಗಳ ಹಿಂದೆಯಷ್ಟೇ ಮೂರು ತಿಂಗಳ ಸಂಬಳ ಸಿಗದ ಕಾರಣಕ್ಕೆ 108 ಸಿಬ್ಬಂದಿ ಮುಷ್ಕರಕ್ಕೆ ಸಜ್ಜಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ್ದ ಆರೋಗ್ಯ ಇಲಾಖೆ ಹಾಗೂ ಸಚಿವರು ಜಿವಿಕೆ ಹಾಗೂ ವಾಹನ ಚಾಲಕರ ಜೊತೆ ಸಭೆ ನಡೆಸಿತ್ತು.

ಅಂದಾಜು ಮೂರೂವರೆ ಸಾವಿರ ಆರೋಗ್ಯ ರಕ್ಷಕ ವಾಹನದ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ಸರ್ಕಾರದ ಸಭೆ ವೇಳೆ ಸಂಬಳ ಕೊಡಲು ಒಪ್ಪಿಕೊಂಡಿದ್ದ ಜಿವಿಕೆ ಮತ್ತೆ ಮಾತು ತಪ್ಪಿದೆ. ಸರ್ಕಾರ ಮಾತುಕೊಟ್ಟಂತೆ ಈಗಾಗಲೇ ಜಿವಿಕೆಗೆ ಬಾಕಿ ಇರುವ 28 ಕೋಟಿ ರೂಪಾಯಿ ಪೈಕಿ ಮೊದಲು ಕಂತು 8 ಕೋಟಿ ರೂಪಾಯಿ ಪಾವತಿಸಿದೆ. ಆದರೆ ಜಿವಿಕೆ ಮಾತ್ರ ಹಳೆ ಸಂಬಳ ಪಾವತಿಸದೇ ಕಣ್ಮುಚ್ಚಿ ಕುಳಿತಿದೆ.

ಕಳೆದ ಮೂರು ವರ್ಷದಿಂದ ಗ್ರ್ಯಾಚ್ಯುಟಿ ಹಾಗೂ ಪರಿಷ್ಕೃತ ವೇತನಕ್ಕಾಗಿ ಹೋರಾಟ ಮಾಡಲಾಗುತ್ತಿತ್ತು. ಈಗ ಹಳೇ ಸಂಬಳವನ್ನು ನೀಡಲು ಜಿವಿಕೆ ಸಿದ್ಧವಿಲ್ಲ. ಹೀಗಾಗಿ ದಸರಾ ಹಬ್ಬಕ್ಕೂ ಸಂಬಳವಿಲ್ಲದೇ ಕಳೆದ 108 ಸಿಬ್ಬಂದಿ ದೀಪಾವಳಿ ಹಬ್ಬಕ್ಕೂ ಸಂಬಳದ ಮುಖ ನೋಡಲಾಗದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಈಗ ಮತ್ತೊಮ್ಮೆ 108 ಚಾಲಕರು ಹಾಗೂ ಸಿಬ್ಬಂದಿ ಮುಷ್ಕರದ ಎಚ್ಚರಿಕೆ ನೀಡಿದ್ದು, ಸಾಮೂಹಿಕವಾಗಿ ರಜೆ ಹಾಕಿ ಕರ್ತವ್ಯದಿಂದ ದೂರ ಉಳಿಯುವುದಾಗಿ ಎಚ್ಚರಿಸಿದ್ದಾರೆ.

ಅಲ್ಲದೇ ತಕ್ಷಣ ಸರ್ಕಾರ ಮಧ್ಯಪ್ರವೇಶಿಸಿ ಜಿವಿಕೆಗೆ ಸಂಬಳ ಕೊಡಲು ಸೂಚಿಸುವಂತೆಯೂ ಮನವಿ ಮಾಡ್ತಿದ್ದಾರೆ. ಇಲ್ಲದಿದ್ದಲ್ಲಿ ಅನಿವಾರ್ಯವಾಗಿ ನಾವು ಮತ್ತೊಮ್ಮೆ ಮುಷ್ಕರಕ್ಕೆ ಮುಂದಾಗೋದಾಗಿ ಎಚ್ಚರಿಸಿದ್ದಾರೆ. ಜಿವಿಕೆ ಸರ್ಕಾರ ಮಧ್ಯಪ್ರವೇಶಿಸಿದ ವೇಳೆ ಸಂಬಳ ನೀಡಲು ಒಪ್ಪಿಕೊಂಡಿತ್ತು. ಆದರೆ ಸರ್ಕಾರ ಆದೇಶಿಸಿದ ಬಳಿಕ ಮತ್ತೆ ಮಾತು ತಪ್ಪಿದೆ. ಒಂದೊಮ್ಮೆ ರಾಜ್ಯದಲ್ಲಿ ಮತ್ತೆ 108 ಸಿಬ್ಬಂದಿ ಮುಷ್ಕರಕ್ಕೆ ಮುಂದಾದಲ್ಲಿ, ಗ್ರಾಮೀಣ ಪ್ರದೇಶದ ಜನರೂ ಸೇರಿದಂತೆ ಎಲ್ಲರಿಗೂ ಆರೋಗ್ಯ ತುರ್ತು ಪರಿಸ್ಥಿತಿ ಅನುಭವವಾಗೋದಂತು ನಿಜ.

ಇದನ್ನೂ ಓದಿ : Rozgar Mela:10 ಲಕ್ಷ ಮಂದಿಗೆ ಉದ್ಯೋಗ: ಅ.22ರಂದು ಬೃಹತ್ ರೋಜ್‍ಗಾರ್ ಮೇಳಕ್ಕೆ ಪ್ರಧಾನಿ ಚಾಲನೆ

ಇದನ್ನೂ ಓದಿ : BBMP Target teachers : ಶಿಕ್ಷಕರಿಗೆ ಬಿಬಿಎಂಪಿ ಶಾಕ್ : ರಿಸಲ್ಟ್ ಹೆಚ್ಚಿಸದಿದ್ದರೇ ಕೆಲಸಕ್ಕೆ ಬೀಳಲಿದೆ ಕತ್ತರಿ

Dussehra is here and Diwali ends without salary 108 employees warn of strike

Comments are closed.