Janani Suraksha Yojana : ಗರ್ಭಿಣಿ ಮಹಿಳೆಯರಿಗೂ ಸಿಗುತ್ತೆ ಸರ್ಕಾರದಿಂದ 6,000 ರೂಪಾಯಿಗಳು

ಕೇಂದ್ರ ಸರ್ಕಾರವು (Cental Government) ಎಲ್ಲ ವರ್ಗದವರ ಹಿತವನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಿರಿಯ ನಾಗರಿಕರಿಂದ ಹಿಡಿದು ನವಜಾತ ಶಿಶುಗಳವರೆಗು ಯೋಜನೆಗಳನ್ನು ಆರಂಭಿಸಲಾಗಿದೆ. ಈ ಯೋಜನೆಗಳ ಅಡಿಯಲ್ಲಿ, ಜನರಿಗೆ ನೇರ ರೀತಿಯಲ್ಲಿ ಅಥವಾ ಬಡ್ಡಿಯ ರೂಪದಲ್ಲಿ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುವುದು. ಈಗ ಇದೇ ಹಾದಿಯಲ್ಲಿ ಸರ್ಕಾರವು ಗರ್ಭಿಣಿ ಮಹಿಳೆಯರಿಗಾಗಿ (Women Scheme) ಮತ್ತು ನವಜಾತ ಶಿಶುಗಳ ಆರೋಗ್ಯಕ್ಕಾಗಿ ಯೋಜನೆಯನ್ನು ಪ್ರಾರಂಭಿಸಿದೆ. ಅದರ ಅಡಿಯಲ್ಲಿ ಗರ್ಭಿಣಿ ಮಹಿಳೆಯರ ಬ್ಯಾಂಕ್‌ ಖಾತೆಗೆ 6,000 ರೂ. ಗಳನ್ನು ಕಳುಹಿಸಲಾಗುತ್ತದೆ (Janani Suraksha Yojana). ಈ ಯೋಜನೆಯ ಉದ್ದೇಶವು ಶಿಶುಗಳ ಆರ್ಥಿಕ ಭದ್ರತೆ ಮತ್ತು ಸರಿಯಾದ ಪೋಷಕಾಂಶಗಳನ್ನು ಒದಗಿಸುದಾಗಿದೆ. ಈ ಯೋಜನೆಯಡಿಯಲ್ಲಿ ಹೆರಿಗೆಯ ನಂತರ ಗರ್ಭಿಣಿಯರಿಗೆ ಆರ್ಥಿಕ ನೆರವು ನೀಡಲಾಗುವುದು.

ಜನನಿ ಸುರಕ್ಷತಾ ಯೋಜನೆ ಎಂದರೇನು?
ಕೇಂದ್ರ ಸರ್ಕಾರವು ಆರಂಭಿಸಿರುವ ಜನನಿ ಸುರಕ್ಷತಾ ಯೋಜನೆಯಲ್ಲಿ ಬಡ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಸರ್ಕಾರಿ ಆರೋಗ್ಯ ಸಂಸ್ಥೆಗಳು ಮತ್ತು ಸರ್ಕಾರದಿಂದ ಪ್ರಮಾಣೀಕರಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳು ಒಳಗೊಂಡಿದೆ. ಇದನ್ನು ಬಿಟ್ಟು ಇತರ ಯಾವುದೇ ಆಸ್ಪತ್ರೆಯಲ್ಲಿ ಹೆರಿಗೆ ನಡೆದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಇದನ್ನು ಪ್ರತಿ ತಿಂಗಳು 1 ರಿಂದ 9 ರ ನಡುವೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದ ಹೆರಿಗೆ ತಪಾಸಣೆ ಮಾಡಬಹುದು. ಇದನ್ನು ಪ್ರಧಾನ ಮಂತ್ರಿ ಸರಕ್ಷಿತ್‌ ಮಾತೃತ್ವ ಅಭಿಯಾನದ ಅಡಿಯಲ್ಲಿ ನಡೆಸಲಾಗುವುದು.

ಜನನಿ ಸುರಕ್ಷಾ ಯೋಜನೆಯ ಲಾಭ ಪಡೆಯಲು ಯಾವ ದಾಖಲೆಗಳು ಬೇಕು?
ಜನನಿ ಸುರಕ್ಷಾ ಯೋಜನೆಯ ಲಾಭ ಪಡೆಯಲು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಸರ್ಕಾರಿ ಆಸ್ಪತ್ರೆಯಿಂದ ನೀಡಿದ ಹೆರಿಗೆ ಪ್ರಮಾಣಪತ್ರ ಮತ್ತು ಮಹಿಳೆಯ ಬ್ಯಾಂಕ್ ಖಾತೆ ಸಂಖ್ಯೆಯ ಅವಶ್ಯಕತೆ ಇರುತ್ತದೆ. ಅರ್ಹರು ಯೋಜನೆಯ ಅರ್ಜಿ ನಮೂನೆಯೊಂದಿಗೆ ಈ ದಾಖಲೆಗಳನ್ನು ಸಲ್ಲಿಸಬೇಕು. ಈ ಅರ್ಜಿಯನ್ನು ಅನುಮೋದಿಸಿದ ನಂತರ, ಯೋಜನೆಯ ಲಾಭವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಯ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆಶಾ ಕಾರ್ಯಕರ್ತರ ಸಹಾಯದಿಂದ ಮಾಡಲಾಗುವುದು. ಆಶಾ ಕಾರ್ಯಕರ್ತೆಯರು ಎಲ್ಲಾ ಮಾಹಿತಿಯನ್ನು ನೋಂದಾಯಿಸುವ ಮತ್ತು ನವೀಕರಿಸು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದನ್ನು ಎಲ್ಲಾ ಗರ್ಭಿಣಿಯರಿಗೆ ತಿಳಿಸುತ್ತಾರೆ. ಈ ಯೋಜನೆಯಡಿ ಲಾಭ ಪಡೆದುಕೊಳ್ಳಲು ಯಾವುದೇ ಗರ್ಭಿಣಿ ಮಹಿಳೆಯು ತನ್ನ ಗ್ರಾಮ ಪಂಚಾಯತಿಯಲ್ಲಿರುವ ಆಶಾ ಕಾರ್ಯಕರ್ತೆಯನ್ನು ಭೇಟಿ ಮಾಡಬೇಕಾಗುತ್ತದೆ. ಒಂದುವೇಳೆ ಆಶಾ ಕಾರ್ಯಕರ್ತೆಯರ ಅನುಪಸ್ಥಿತಿಯಲ್ಲಿ ಗ್ರಾಮದ ಮುಖ್ಯಸ್ಥರನ್ನು ಸಹ ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ : Mutual Funds : ನಿಮಗೆ SIP ಬಗ್ಗೆ ಗೊತ್ತಾ? ಇದರ ಮೂಲಕವು ಲಕ್ಷಗಟ್ಟಲೇ ಹಣ ಗಳಿಸಬಹುದು.

ಇದನ್ನೂ ಓದಿ : PM Awas Yojana : 2022-23ನೇ ಸಾಲಿನ ಪಿಎಂ ಆವಾಸ್ ಯೋಜನೆ ಬಗ್ಗೆ ನಿಮಗೆ ಗೊತ್ತಾ ? ಯೋಜನೆಯಲ್ಲಿ ಸಿಗುವ ಸಬ್ಸಿಡಿ ಬಗ್ಗೆ ಮಾಹಿತಿ ಇಲ್ಲಿದೆ

(Janani Suraksha Yojana pregnant women can get rs 6,000 benefits from the government)

Comments are closed.