ಶಕ್ತಿ ಯೋಜನೆ ರದ್ದು ಕೋರಿ ಅರ್ಜಿ : ಮಹಿಳೆಯರ ಉಚಿತ ಪ್ರಯಾಣದ ಬಗ್ಗೆ ಹೈಕೋರ್ಟ್‌ ಖಡಕ್‌ ವಾರ್ನಿಂಗ್‌ !

ಶಕ್ತಿ ಯೋಜನೆಯಿಂದಾಗಿ (shakthi yojana karnataka) ತೆರಿಗೆದಾರರ 100 ಕೋಟಿ ರೂಪಾಯಿ ಹಣ ಯೋಜನೆಗೆ ಬಳಕೆಯಾಗಿದೆ. ಅಲ್ಲದೇ ಒಂದು ವರ್ಷಕ್ಕೆ ಸರಕಾರದ ಯೋಜನೆಯಿಂದಾಗಿ 3,200 ಕೋಟಿ ರೂಪಾಯಿಯಿಂದ 3,400 ಕೋಟಿಯಷ್ಟು ನಷ್ಟ ಉಂಟಾಗಲಿದ ಎಂದು ಪಿಐಎಲ್ ಅರ್ಜಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರು : ರಾಜ್ಯ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮಹಿಳೆಯರಿಗಾಗಿ ಉಚಿತ ಪ್ರಯಾಣ (Free Bus Travel For Women Scheme) ಶಕ್ತಿ ಯೋಜನೆಯನ್ನು (shakthi yojana karnataka) ಪರಿಚಯಿಸಿದೆ. ಶಕ್ತಿ ಯೋಜನೆ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯದ ಸರಕಾರಿ ಬಸ್ಸುಗಳಿಗೆ ಭರ್ಜರಿಗೆ ಬೇಡಿಗೆ ಬಂದಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, (KSRTC) ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC )  ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ  (NEKRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಒಂದಿಷ್ಟು ಅವ್ಯವಸ್ಥೆಯು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಈ ಕುರಿತು ವಿಚಾರಣೆಯನ್ನು ನಡೆಸಿರುವ ಹೈಕೋರ್ಟ್‌ ಪಿಐಎಲ್‌ ವಿರುದ್ದ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಪ್ರಮುಖವಾಗಿ ವಿದ್ಯಾರ್ಥಿಗಳು ತಾವು ಸಲ್ಲಿಸಿದ್ದ ಅರ್ಜಿಯಲ್ಲಿ, ಶಕ್ತಿ ಯೋಜನೆಯಿಂದಾಗಿ ತೆರಿಗೆದಾರರ 100 ಕೋಟಿ ರೂಪಾಯಿ ಹಣ ಯೋಜನೆಗೆ ಬಳಕೆಯಾಗಿದೆ. ಅಲ್ಲದೇ ಒಂದು ವರ್ಷಕ್ಕೆ ಸರಕಾರದ ಯೋಜನೆಯಿಂದಾಗಿ 3,200 ಕೋಟಿ ರೂಪಾಯಿಯಿಂದ 3,400 ಕೋಟಿಯಷ್ಟು ನಷ್ಟ ಉಂಟಾಗಲಿದೆ. ಶೇ.50 ರಷ್ಟು ಸೀಟುಗಳನ್ನು ಮೀಸಲು ಇಡಬೇಕಾಗಿರುವುದರಿಂದಾಗಿ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ನಿಂತುಕೊಂಡೇ ಪ್ರಯಾಣಿಸಬೇಕಾಗಿದೆ. ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಬಸ್ಸುಗಳಲ್ಲಿ ಹೊಡೆದಾಟಗಳು ನಡೆಯುತ್ತಿವೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಬಸ್ಸುಗಳನ್ನು ಹತ್ತುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳು, ವೃದ್ದರಿಗಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

Free Bus Travel For Women Scheme Shakti Yojana Aginst PIL Cancel Karnataka High court
Image Credit : original Source

ಆದರೆ ಅರ್ಜಿಯನ್ನು ಪರಿಶೀಲಿಸಿದ ಸಿಜೆ ಪ್ರಸನ್ನ ಬಿ.ವರಾಳೆ ಮತ್ತು ನ್ಯಾ.ಎಂ.ಜಿ.ಎಸ್.ಕಮಲ್‌ ಅವರಿದ್ದ ಪೀಠ ಸಾರಿಗೆ ನಿಯಮದ ಅಧ್ಯಯನ ನಡೆಸದೇ ಪಿಐಎಲ್‌ ಸಲ್ಲಿಕೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೇ ವೇಳೆಯಲ್ಲಿ ಅರ್ಜಿ ಸಲ್ಲಿಸುವ ಮೊದಲು ನೀವು ಈ ಕುರಿತು ಅಧ್ಯಯನ ನಡೆಸಿದ್ದೀರಾ ? ಸಾರ್ವಜನಿಕ ಬಸ್ಸುಗಳಲ್ಲಿ ಇಷ್ಟೇ ಜನರು ಪ್ರಯಾಣಿಸಬೇಕು ಅನ್ನೋ ನಿಯಮವಿದೆಯಾ ? ಮುಂಬೈ ಲೋಕಲ್‌ ಟ್ರೈಮ್‌ ದಟ್ಟಣೆಯ ಬಗ್ಗೆ ನಿಮಗೆ ಅರಿವಿದೆಯಾ ? ಯೋಜನೆಯ ಮೂಲಕ ದುರ್ಬಲ ವರ್ಗದವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ದೊರಕಿದೆ. ನೀವು ಯೋಜನೆಯನ್ನು ಪ್ರಶ್ನಿಸುತ್ತೀದ್ದೀರಾ ? ಅಥವಾ ಬಸ್‌ಗಳಲ್ಲಿ ಜನಸಂದಣಿಗೆ ಪರಿಹಾರೋಪಾಯವನ್ನು ಬಯಸುತ್ತಿದ್ದೀರಾ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು. ನೀವು ಸಲ್ಲಿಸಿದ ಅರ್ಜಿಯಲ್ಲಿಯೇ ಗೊಂದಲವಿದೆ ಎಂದಿದ್ದಾರೆ. ಇದನ್ನೂಓದಿ: ನಿಮ್ಮ ಮನೆ ಬಿಪಿಎಲ್ ಕಾರ್ಡ್ ನಲ್ಲಿ ಗಂಡಸರ ಹೆಸರಿದ್ಯಾ ? ಹಾಗಿದ್ದರೇ ನಿಮಗೆ ಸಿಗಲ್ಲ ಗೃಹಲಕ್ಷ್ಮೀ ಯೋಜನೆಯ 2000 ರೂ.

Free Bus Travel For Women Scheme Shakti Yojana Aginst PIL Cancel Karnataka High court

ಅಂತಿಮವಾಗಿ ಅರ್ಜಿದಾರರು ತಮ್ಮ ಪಿಐಎಲ್‌ ಅನ್ನು ವಾಪಾಸ್‌ ಪಡೆಯಲು ಅನುಮತಿ ಕೇಳಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹತಾಸಕ್ತಿ ಅರ್ಜಿಯನ್ನು ವಾಪಾಸ್‌ ಪಡೆಯಲು ಅನುಮತಿಯನ್ನು ನೀಡಿದೆ. ಹೈಕೋರ್ಟ್‌ಗೆ ಶಕ್ತಿ ಯೋಜನೆಯ ಕುರಿತು ಅರ್ಜಿ ಸಲ್ಲಿಕೆಯಾಗುತ್ತಿದ್ದಂತೆಯೇ ಹೈಕೋರ್ಟ್‌ ಯೋಜನೆಯನ್ನೇ ರದ್ದುಗೊಳಿಸುತ್ತೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದರೆ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಎದ್ದಿದ್ದ ಎಲ್ಲಾ ಗೊಂದಲಗಳಿಗೆ ಇದೀಗ ಹೈಕೋರ್ಟ್‌ ತೆರೆ ಎಳೆದಿದೆ. ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಈ ಮಹಿಳೆಯರಿಗಿಲ್ಲ ! ನಿಮ್ಮ ಖಾತೆಗೆ ಜಮೆ ಆಗುತ್ತಾ 2000 ರೂ. ?

ಏನಿದು ಶಕ್ತಿ ಯೋಜನೆ (shakthi yojana karnataka) ?

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶಕ್ತಿ ಯೋಜನೆಯನ್ನು ರಾಜ್ಯದ ಜನತೆಗೆ ಪರಿಚಯಿಸಿತ್ತು. ಈ ಯೋಜನೆಯ ಮೂಲಕ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದಲ್ಲಿನ ಎಲ್ಲಾ ರಸ್ತೆ ಸಾರಿಗೆ ನಿಗಮದ ಸಾಮಾನ್ಯ ಬಸ್ಸುಗಳಲ್ಲಿ ಮಹಿಳೆಯರು ಸರಕಾರ ನೀಡಿರುವ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣಿಸಲು ಅನುಮತಿಯನ್ನು ನೀಡಲಾಗಿದೆ. ಕಳೆದ ಎರಡು ತಿಂಗಳುಗಳಿಂದಲೂ ಮಹಿಳೆಯರು, ಯುವತಿಯರು ಸರಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ಹಿಂದೆ ಖಾಲಿ ಹೊಡೆಯುತ್ತಿದ್ದ ಸರಕಾರಿ ಬಸ್ಸುಗಳು ಇದೀಗ ಶಕ್ತಿ ಯೋಜನೆಯಿಂದಾಗಿ ತುಂಬಿ ತುಳುಕುತ್ತಿವೆ.Free Bus Travel For Women Scheme Shakti Yojana Aginst PIL Cancel Karnataka High court

ಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಪರಿಚಯಿಸಿದ ಬೆನ್ನಲ್ಲೇ ಧಾರ್ಮಿಕ ಕ್ಷೇತ್ರಗಳಿಗೂ ಭಕ್ತರ ದಂಡೇ ಹರಿದು ಬರುತ್ತಿದೆ. ಒಂದು ಕಾಲದಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ನಷ್ಟದ ಹಾದಿ ಹಿಡಿದಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಎಲ್ಲಾ ನಿಗಮಗಳು ಇದೀಗ ಲಾಭದತ್ತ ಮುಖ ಮಾಡಿವೆ. ಈಗಾಗಲೇ ರಾಜ್ಯ ಸರಕಾರ ಸಾರಿಗೆ ಸಂಸ್ಥೆಗಳಿಗೆ ಶಕ್ತಿಯೋಜನೆಯಿಂದಾಗಿ ನೀಡಬೇಕಾಗಿದ್ದ ಹಣವನ್ನು ಪಾವತಿ ಮಾಡಿದೆ. ಇನ್ನು ಸರಕಾರಿ ಬಸ್ಸುಗಳಲ್ಲಿ ಪುರುಷರಿಗೆ ಶೇ.೫೦ ರಷ್ಟು ಸೀಟುಗಳಿಗೆ ಮೀಸಲಾತಿಯನ್ನು ನೀಡಲಾಗಿದೆ.

Comments are closed.