ನಿಮ್ಮ ಮನೆ ಬಿಪಿಎಲ್ ಕಾರ್ಡ್ ನಲ್ಲಿ ಗಂಡಸರ ಹೆಸರಿದ್ಯಾ ? ಹಾಗಿದ್ದರೇ ನಿಮಗೆ ಸಿಗಲ್ಲ ಗೃಹಲಕ್ಷ್ಮೀ ಯೋಜನೆಯ 2000 ರೂ.

ರಾಜ್ಯದಲ್ಲಿ ಕೋಟ್ಯಾಂತರ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ಅರ್ಹರಿದ್ದಾರೆ. ಆದರೆ ಈ ಪೈಕಿ ಅಂದಾಜು 6 ಲಕ್ಷಕ್ಕೂ ಅಧಿಕ‌ಮಹಿಳೆಯರು ಕೇವಲ ಬಿಪಿಎಲ್ ಕಾರ್ಡ್ ನ ಕಾರಣದಿಂದಲೇ ಈ ಸೌಲಭ್ಯದಿಂದಲೇ ವಂಚಿತರಾಗಿದ್ದಾರೆ. ಯಾಕೆಂದರೆ ರಾಜ್ಯದ ಬಿಪಿಎಲ್ ಕಾರ್ಡ್ ಗಳಲ್ಲಿ ಪುರುಷರು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿದ್ದಾರೆ.If you have husbands name on your BPL card you will not get 2000 rupees of Grulahakshmi Yojana

ಬೆಂಗಳೂರು : ರಾಜ್ಯದಲ್ಲಿ ಕೋಟ್ಯಾಂತರ ಹೆಣ್ಣುಮಕ್ಕಳಿಗೆ ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ರೂಪಾಯಿ ಸಹಾಯಧನ ನೀಡಲಾರಂಭಿಸಿದೆ. ಆದರೆ ಇನ್ನೂ ಲಕ್ಷಾಂತರ ಗೃಹಿಣಿಯರು, ಮನೆಯೊಡತಿಯರು ಸರ್ಕಾರದ ಸಹಾಯಧನದಿಂದ ವಂಚಿತರಾಗೋ ಸ್ಥಿತಿ ಇದೆ. ಇದಕ್ಕೆ ಕಾರಣವೇನು? ಪರಿಹಾರವೇನು? ಇಲ್ಲಿದೆ ಎಕ್ಸಕ್ಲೂಸಿವ್ (Exclusive)ಡಿಟೇಲ್ಸ್.

ಕರ್ನಾಟಕ ರಾಜ್ಯದಲ್ಲಿ ಕೋಟ್ಯಾಂತರ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ಅರ್ಹರಿದ್ದಾರೆ. ಆದರೆ ಈ ಪೈಕಿ ಅಂದಾಜು 6 ಲಕ್ಷಕ್ಕೂ ಅಧಿಕ‌ಮಹಿಳೆಯರು ಕೇವಲ ಬಿಪಿಎಲ್ ಕಾರ್ಡ್ ನ ಕಾರಣದಿಂದಲೇ ಈ ಸೌಲಭ್ಯದಿಂದಲೇ ವಂಚಿತರಾಗಿದ್ದಾರೆ. ಯಾಕೆಂದರೆ ರಾಜ್ಯದ ಬಿಪಿಎಲ್ ಕಾರ್ಡ್ ಗಳಲ್ಲಿ ಪುರುಷರು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿದ್ದಾರೆ. ಮನೆಯ ಮುಖ್ಯಸ್ಥರ ಹೆಸರಿನಲ್ಲಿ ಪುರುಷರ ಹೆಸರಿದ್ದರೇ, ಅಂತಹ ಕುಟುಂಬಗಳಿಗೆ ಗೃಹಲಕ್ಷ್ಮೀ ಸೌಲಭ್ಯ ಸಿಗೋದಿಲ್ಲ. ಮಾತ್ರವಲ್ಲ ಒಂದೊಮ್ಮೆ ಪುರುಷರು ಮನೆಯ ಮುಖ್ಯಸ್ಥರ ಸ್ಥಾನದಲ್ಲಿದ್ದು, ಅದೇ ಕುಟುಂಬದಲ್ಲಿ 18 ವರ್ಷಕ್ಕೆ ಮೇಲ್ಪಟ್ಟ ಮಹಿಳೆಯರಿದ್ದರೇ ಅಂತಹ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮೀ ಸೌಲಭ್ಯ ಸಿಗೋದಿಲ್ಲ.

If you have husbands name on your BPL card you will not get 2000 rupees of Grulahakshmi Yojana
Image credit Original Source

ಕೇವಲ ಗೃಹಲಕ್ಷ್ಮೀ ಸೌಲಭ್ಯದ ಎರಡು ಸಾವಿರ ರೂಪಾಯಿ ಮಾತ್ರವಲ್ಲ ಬಿಪಿಎಲ್ ಕಾರ್ಡ್ ನ ಮುಖ್ಯಸ್ಥರು ಗಂಡಸರಾಗಿದ್ದರೇ ಅನ್ನಭಾಗ್ಯದ ಸ್ಕೀಂ ಅಡಿಯಲ್ಲಿಯೂ ಕೂಡ ಸೌಲಭ್ಯ ಸಿಗೋದಿಲ್ಲ. ಒಂದೊಮ್ಮೆ ಬಿಪಿಎಲ್ ಕಾರ್ಡ್ ನಲ್ಲಿ ಪುರುಷರು ಮನೆಯ ಮುಖ್ಯಸ್ಥರಾಗಿದ್ದರೇ, ಅಂತಹ ಮನೆಯ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಹೀಗಾಗಿ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಈ ಮಹಿಳೆಯರಿಗಿಲ್ಲ ! ನಿಮ್ಮ ಖಾತೆಗೆ ಜಮೆ ಆಗುತ್ತಾ 2000 ರೂ. ?

ಹೀಗಾಗಿ ರಾಜ್ಯದಾದ್ಯಂತ ಮಹಿಳೆಯರಿಂದ ಆಕ್ರೋಶ ವ್ಯಕ್ತವಾಗಿತ್ತು. ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರು ಇರಬೇಕು ಎಂಬ ಮಾಹಿತಿ ಸರಿಯಾಗಿ ಎಲ್ಲರಿಗೂ ಅರಿವಿರಲಿಲ್ಲ. ಹೀಗಾಗಿ ಸಹಜವಾಗಿಯೇ ಪುರುಷರು ಮನೆಯ ಮುಖ್ಯಸ್ಥರ ಸ್ಥಾನದಲ್ಲಿದ್ದರು. ಇದರಿಂದ ನಾವು ಯೋಜನೆಗೆ ಅರ್ಹರಿದ್ದು ಎರಡು ಸಾವಿರ ರೂಪಾಯಿಯಿಂದ ವಂಚಿತರಾಗುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

If you have husbands name on your BPL card you will not get 2000 rupees of Grulahakshmi Yojana
Image Credit Original Source

ಹೀಗಾಗಿ ಈಗ ಬಿಪಿಎಲ್ ಕಾರ್ಡ್ ನಲ್ಲಿ ಪುರುಷ ಮುಖ್ಯಸ್ಥರನ್ನು ಹೊಂದಿರುವ ಕುಟುಂಬಗಳಿಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವನ್ನು ಸರ್ಕಾರ ನೀಡಿದೆ. ಸೆ‌.1 ರಿಂದ ಸೆ.10 ರವರೆಗೆ ತಿದ್ದುಪಡಿ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದ್ದು, ಮಹಿಳೆಯರು ಸೂಕ್ತ ದಾಖಲೆಯೊಂದಿಗೆ ಮನೆಯ ಬಿಪಿಎಲ್ ಕಾರ್ಡ್ ನಲ್ಲಿ ತಮ್ಮನ್ನು ತಾವು ಮನೆಯ ಯಜಮಾನಿ ಎಂದು ಘೋಷಣೆ ಮಾಡಿಕೊಳ್ಳಬಹುದಾಗಿದೆ‌. ಇದನ್ನೂ ಓದಿ : ಆಧಾರ್ ಕಾರ್ಡ್ ಉಚಿತ ಅಪ್ ಡೇಟ್ ಗೆ ಸೆಪ್ಟೆಂಬರ್ 30 ಕೊನೆಯ ದಿನ

ಬಿಪಿಎಲ್ ಕಾರ್ಡ್ ಕರೆಕ್ಷನ್ ಮಾಡಿಕೊಂಡ ಬಳಿಕ ಈ‌ ಮಹಿಳೆಯರು ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅಪ್ಲಿಕೇಶನ್ ಹಾಕಬಹುದಾಗಿದೆ. ಹೀಗಾಗಿ ರಾಜ್ಯದ ಗೃಹಲಕ್ಷ್ಮೀ ಸಹಾಯಧನ ವಂಚಿತ ಮಹಿಳೆಯರು ತಕ್ಷಣವೇ ತಮ್ಮ ಬಿಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಸಿ ಹಣ ಪಡೆಯೋಕೆ ಪ್ರಯತ್ನಿಸಬೇಕಿದೆ.

Comments are closed.