Chamarajpet Idgah : ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆ ಸ್ವತ್ತು: ಬಿಬಿಎಂಪಿ ಆದೇಶ

ಬೆಂಗಳೂರು : ಹಿಜಾಬ್ , ಹಲಾಲ್ ಕಟ್ ಹಾಗೂ ಧರ್ಮ ವ್ಯಾಪಾರ ದಂಗಲ್ ಬಳಿಕ ಬೆಂಗಳೂರಿನಲ್ಲಿ ಸೃಷ್ಟಿಯಾಗಿದ್ದ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ (Chamarajpet Idgah) ಮಾಲಿಕತ್ವ ವಿವಾದ ಅಂತ್ಯಗೊಂಡಿದ್ದು, ಈದ್ಗಾ ಮೈದಾನ ಸರ್ಕಾರದ ಕಂದಾಯ ಇಲಾಖೆ ಆಸ್ತಿ ಎಂದು ಘೋಷಿಸಿರುವ ಬಿಬಿಎಂಪಿ ವಕ್ಪ್ ಬೋರ್ಡ್ ನ ಅರ್ಜಿಯನ್ನು ವಜಾಗೊಳಿಸಿದೆ. ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನವನ್ನು ದಶಕಗಳಿಂದ ಮುಸ್ಲಿಂರು ತಮ್ಮ ಪ್ರಾರ್ಥನೆ ಹಾಗೂ ಹಬ್ಬಗಳ ಆಚರಣೆಗೆ ಸೀಮಿತಗೊಳಿಸಿಕೊಂಡಿದ್ದರು.

ಕೆಲ ತಿಂಗಳ ಹಿಂದೆ ಚಾಮರಾಜಪೇಟೆಯ ಈದ್ಗಾ ಮೈದಾನ ಕೇವಲ ಮುಸ್ಲಿಂ ರ ಆಸ್ತಿಯಲ್ಲ ಮೈದಾನವನ್ನು ಇತರ ಧರ್ಮಿಯರ ಹಬ್ಬಗಳ ಆಚರಣೆಗೂ ಬಳಸಲು ನೀಡಬೇಕೆಂದು ವಾದಿಸಿತ್ತು. ಅಲ್ಲದೇ ಗಣೇಶ ಚತುರ್ಥಿ, ದೀಪಾವಳಿ,ನವರಾತ್ರಿ ಹಬ್ಬಗಳನ್ನು ಆಚರಿಸಲು ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿತ್ತು. ಆದರೆ ಇದಕ್ಕೆ ಮುಸ್ಲಿಂ ಸಂಘಟನೆಗಳು ಹಾಗೂ ವಕ್ಪ್ ಮಂಡಳಿ ಈ ಆಸ್ತಿ ನಮಗೆ ಸೇರಿದ್ದೆಂದು ವಾದಿಸಿತ್ತು. ಈ ಎಲ್ಲ ವಾದ ಪ್ರತಿವಾದಗಳನ್ನು ಕೇಳಿದ ಬಿಬಿಎಂಪಿ ವಕ್ಪ್ ಮಂಡಳಿಗೆ ಮೈದಾನದ ಮಾಲೀಕತ್ವದ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು.

ತಿಂಗಳುಗಳಿಂದ ಈದ್ಗಾ ಮೈದಾನದ ಮಾಲೀಕತ್ವಕ್ಕಾಗಿ ನಡೆದ ಫೈಟ್ ಕೊನೆಗೂ ಅಂತ್ಯ ಕಂಡಿದ್ದು, ಬಿಬಿಎಂಪಿ ಕೊನೆಗೂ ಸ್ಪಷ್ಟ ಆದೇಶ ಹೊರಡಿಸಿದೆ. ಬಿಬಿಎಂಪಿ ಕಾಯ್ದೆ 2020 ರ ಕಲಂ 149 ರಂತೆ ಪ್ರಾಪ್ತವಾದ ಅಧಿಕಾರವನ್ನು ಬಳಸಿಕೊಂಡು ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯು 21-6-2022 ರಂದು ಸರ್ವೇ ಸಂಖ್ಯೆ 40 ಅಳತೆ 2 ಎಕರೆ 5 ಗುಂಟೆ ಸ್ವತ್ತನ್ನು ಕರ್ನಾಟಕ ರಾಜ್ಯ ವಕ್ಪ್ ಮಂಡಳಿಯ ಹೆಸರಿಗೆ ಖಾತೆ ಮಾಡಲು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಗಿರುತ್ತದೆ.

ಸದರಿ ಆಸ್ತಿಯು ಸರ್ಕಾರದ ಕಂದಾಯ ಇಲಾಖೆಗೆ ಸೇರಿದೆ ಎಂದು ಪರಿಗಣಿಸಿರುವುದರಿಂದ ಬಿಬಿಎಂಪಿ ದಾಖಲೆಗಳಲ್ಲಿ ಸದರಿ ಆಸ್ತಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಎಂದು ನಮೂದಿಸಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ಬಿಬಿಎಂಪಿ ಸ್ಪಷ್ಟಪಡಿಸಿದೆ. ಈ ಮೈದಾನದ ಮಾಲಿಕತ್ವಕ್ಕಾಗಿ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಹೋರಾಟಕ್ಕೆ ಇಳಿದಿದ್ದು, ಉಗ್ರ ಪ್ರತಿಭಟನೆ, ಶಾಸಕ ಜಮೀರ್ ಅಹ್ಮದ್ ಖಾನ್‌ ನೇತೃತ್ವದಲ್ಲಿ ಸಂಧಾನ ಸಭೆ ಕೂಡ ನಡೆದಿತ್ತು. ಒಟ್ಟಿನಲ್ಲಿ ಹಲವು ವಿವಾದ ಪ್ರತಿಭಟನೆ ಹಾಗೂ ದಾಖಲೆಗಳ ಚರ್ಚೆ ಬಳಿಕ ವಿವಾದಕ್ಕೆ ಬಿಬಿಎಂಪಿ ಅಂತ್ಯ ಹಾಡಿದ್ದು, ಮಾಲೀಕತ್ವ ಕಂದಾಯ ಇಲಾಖೆಯದ್ದು ಎಂದಿದೆ.

ಇದನ್ನೂ ಓದಿ : people test HIV positive : ಕಡಿಮೆ ಖರ್ಚಿನಲ್ಲಿ ಟ್ಯಾಟೂ ಹಾಕಿಸಲು ಹೋಗಿ ಯಡವಟ್ಟು : ಇಬ್ಬರಿಗೆ ಹೆಚ್​ಐವಿ ಸೋಂಕು ದೃಢ

ಇದನ್ನೂ ಓದಿ : Vice President Jagdeep Dhankhar : ವಕೀಲ ವೃತ್ತಿಯಿಂದ ಉಪರಾಷ್ಟ್ರಪತಿ : ಜಗದೀಪ್ ಧಂಕರ್ ಹಿನ್ನೆಲೆ ನಿಮಗೆ ಗೊತ್ತಾ ?

Chamarajpet Idgah Maidan Revenue Department Asset BBMP Order

Comments are closed.