ನವೀನ್ ಸಾವಿನ ಎಫೆಕ್ಟ್ : ಮೆಡಿಕಲ್ ಕಾಲೇಜಿನ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕುತ್ತಾ ಸರ್ಕಾರ

ರಷ್ಯಾ ಮತ್ತು ‌ಉಕ್ರೇನ್ ಯುದ್ಧ, ಈ ಯುದ್ಧದಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಸಾವು ಕರ್ನಾಟಕದ ಶಿಕ್ಷಣ ವ್ಯವಸ್ಥೆಯ ಮೇಲೆ ಆಕ್ರೋಶ ಹಾಗೂ ನೊರೆಂಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಷ್ಟೇ ಅಲ್ಲ ಇಲ್ಲಿನ ಮೆಡಿಕಲ್ ಕಾಲೇಜುಗಳ ದುಬಾರಿ ಶುಲ್ಕದ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯಿಂದ ಎಚ್ಚೆತ್ತ ಶಿಕ್ಷಣ ಇಲಾಖೆ ಈಗ ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ (medical college) ಶಾಕ್ ನೀಡಲು ಸಿದ್ಧವಾಗಿದೆ.

ರಾಜ್ಯದ ಖಾಸಗಿ ಕಾಲೇಜುಗಳು (medical college) ಇಷ್ಟು ದಿನ ಮನಬಂದಂತೆ ಶುಲ್ಕ ವಿಧಿಸುತ್ತಿದ್ದವು. ಇದೀಗ ಈ ಶುಲ್ಕ ನೀತಿಗೆ ಕಡಿವಾಣ ಹಾಕಿ ಶಿಕ್ಷಣ ಸಂಸ್ಥೆಗಳಿಗೆ ಮೂಗುದಾರ ಹಾಕಲು ಸಿದ್ಧವಾಗಿದೆ.ಮುಂದಿನ ಶೈಕ್ಷಣಿಕ ವರ್ಷದಿಂದ MBBS ನ ಎಲ್ಲ ಶುಲ್ಕದ ಮಾಹಿತಿಯನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ ನಲ್ಲಿ ಡಿಸ್ಲ್ಪೈ ಮಾಡುವಂತೆ ಆದೇಶ ನೀಡಿ ಅಂತ ಕೆಇಎ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದೆ. ಮೌಕಿಕವಾಗಿ ಒಪ್ಪಿಗೆ ಸೂಚಿಸಿರುವ ಸರ್ಕಾರ, ಶೀಘ್ರವೇ ಅಧಿಕೃತ ಆದೇಶ ಹೊರಡಿಸಲಿದೆ.

ಪ್ರತಿ ವರ್ಷವೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಗೊಳಿಸೋದು ಒಂದು ಶುಲ್ಕ.ಆದರೆ ಖಾಸಗಿ ಮೆಡಿಕಲ್ ಕಾಲೇಜುಗಳು ಸ್ವೀಕರಿಸೋದು ಒಂದು ಮೊತ್ತದ ಶುಲ್ಕ ಎಂಬಂತೆ ಆಗಿತ್ತು. ಇದರಿಂದ ಕಂಗೆಟ್ಟ ಪೋಷಕರು ಕಡಿಮೆ ಶುಲ್ಕದ ಮೆಡಿಕಲ್ ಸೀಟ್ ಗಾಗಿ‌ ಮಕ್ಕಳನ್ನು ದೂರದ ದೇಶಕ್ಕೆ ಕಳಿಸುವ ಸ್ಥಿತಿ ಎದುರಾಗಿತ್ತು. ಈಗ ಸರ್ಕಾರ, ಖಾಸಗಿ ಕಾಲೇಜುಗಳಲ್ಲಿ ಯಾವ್ಯಾವುದಕ್ಕೆ ಎಷ್ಟು ಶುಲ್ಕ ಇದೆ ಎಂಬುದನ್ನ ಪ್ರದರ್ಶಿಸಲು ಸೂಚನೆ ನೀಡಿದೆ. ಅಲ್ಲದೇ ಈ ಬಗ್ಗೆ ಮಾಹಿತಿ ಸಿದ್ದಪಡಿಸಿಕೊಳ್ಳಿ ಎಂದು ಕೆಇಎ ಕೂಡ ಖಾಸಗಿ ಮೆಡಿಕಲ್ (medical college) ಕಾಲೇಜುಗಳಿಗೆ ಸೂಚಿಸಿದೆ.

ಕರ್ನಾಟಕದ medical college ನಲ್ಲಿರುವ ಶುಲ್ಕದ ವಿವರ

  • ಒಂದು ವರ್ಷಕ್ಕೆ ಸರ್ಕಾರಿ ಕಾಲೇಜಿನಲ್ಲಿ ಸರ್ಕಾರಿ ಕೋಟಾದ ಸೀಟಿಗೆ Rs. 59,850 ರೂಪಾಯಿ
  • ಒಂದು ವರ್ಷಕ್ಕೆ ಖಾಸಗಿ ಕಾಲೇಜಿನ ಸರ್ಕಾರಿ ಕೋಟಾದ ಸೀಟಿಗೆ Rs. 1,41,196 ರೂಪಾಯಿ
  • ಒಂದು ವರ್ಷಕ್ಕೆ ಖಾಸಗಿ ಕಾಲೇಜಿನ ಮ್ಯಾನೆಜ್‌ಮೆಂಟ್‌ ಕೋಟಾದ ಸೀಟ್ Rs. 9,94,406
  • ಇದನ್ನು ಹೊರ ದೇಶಕ್ಕೆ ಹೋಲಿಸಿದ್ರೇ,ವಿದ್ಯಾರ್ಥಿಗಳಿಗೆ 30 ರಿಂದ 60 ಲಕ್ಷ ಒಂದು ವರ್ಷಕ್ಕೆ ತಗುಲುತ್ತದೆ.

ಖಾಸಗಿ ಕಾಲೇಜುಗಳಲ್ಲಿ ಕೇವಲ ಬಸ್ ಮತ್ತು ಮೆಸ್ ವ್ಯವಸ್ಥೆಗೆ ಪ್ರತ್ಯೇಕ ಶುಲ್ಕ ಪಡೆದುಕೊಳ್ಳಬೇಕು. ಇತರೆ ಶುಲ್ಕ ತೆಗೆದುಕೊಳ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿಯೇ ಎಲ್ಲ ಶುಲ್ಕವನ್ನ ನಮ್ಮ ವೆಬ್ ಸೈಟ್ ನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಸ್ತುತಪಡಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯ ಸೂಚಿಸಿ ನೀಡಿದ್ದಾರೆ. ಒಟ್ಟಿನಲ್ಲಿ ಬೇಕಾಬಿಟ್ಟಿ ಶುಲ್ಕ ವಸೂಲಿಗೆ ಇಳಿದಿದ್ದ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಕೆಇಎ ಮೂಗುದಾರ ಹಾಕಲು ಸಿದ್ಧವಾಗಿದೆ.

ಇದನ್ನೂ ಓದಿ : ಅಕ್ರಮ ಗ್ರಾನೈಟ್‌ ಸಾಗಾಟ : ಮೂರು ಲಾರಿ ವಶ, ಒಬ್ಬಂಟಿ ಕಾರ್ಯಾಚರಣೆ ನಡೆಸಿದ ಭೂ ವಿಜ್ಞಾನಿ ಸಂತೋಷ್

ಇದನ್ನೂ ಓದಿ : ಬಿಎಂಟಿಸಿ ಪ್ರಯಾಣಕ್ಕೆ ಪಾಸ್ ಬೇಡ, ಟಿಕೇಟ್ ಬೇಡ : ಮೊಬೈಲ್ ಜೊತೆಗಿದ್ದರೆ ಸಾಕು

(government cutting expensive fees of a medical college)

Comments are closed.