Shilpa Shetty : ತಂದೆ ಸಾಲಕ್ಕೆ ಪುತ್ರಿ ಹೊಣೆ : ಸಂಕಷ್ಟಕ್ಕೆ ಸಿಲುಕಿದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ

ಬಾಲಿವುಡ್ ನಲ್ಲಿ‌ (Bollywood ) ಮಿಂಚುತ್ತಿರೋ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಮೇಲೆ ದೇವರು ಮುನಿಸಿಕೊಂಡಂತಿದ್ದು ಒಂದಾದ‌ ಮೇಲೊಂದರಂತೆ ಸಂಕಷ್ಟ ಗಳು ಧಕ್ ಧಕ್ ಬೆಡಗಿಯನ್ನು ಕಾಡುತ್ತಲೇ ಇದೆ. ಈ ಹಿಂದೆ ಫಿಟನೆಸ್ ಸಂಸ್ಥೆಯೊಂದು ಶಿಲ್ಪಾ ಶೆಟ್ಟಿ (Shilpa Shetty) ವಿರುದ್ದ ವಂಚನೆ ಪ್ರಕರಣ ದಾಖಲಿಸಿತ್ತು. ಈಗ ಅಟೋಮೊಬೈಲ್ ಡೀಲರ್ ಶಿಲ್ಪಾ ವಿರುದ್ಧ ಸಮರ ಸಾರಿದ್ದಾರೆ.

ಶಿಲ್ಪಾ ಶೆಟ್ಟಿ ಕುಟುಂಬವು ಪಡೆದಿದ್ದ 21 ಲಕ್ಷ ರೂ ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಆಟೋಮೊಬೈಲ್ ಡೀಲರ್ ಪರ್ಷದ್ ಪಿರೋಜ್ ಅಮ್ರಾ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ, ಅವರ ಸಹೋದರಿ ಶಮಿತಾ ಶೆಟ್ಟಿ ಮತ್ತು ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಂಚನೆ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಇದೀಗ ನಟಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ದಿಂಡೋಶಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಟಿಯ ದೂರನ್ನು ಪರಿಗಣಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ.ಝಡ್.ಖಾನ್ ಅವರು ಡೀಲರ್ ಪರ್ಷದ್ ಫಿರೋಜ್ ಅಮ್ರಾ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಮತ್ತು ಮುಂದಿನ ವಿಚಾರಣೆಯನ್ನು ಮಾರ್ಚ್ 14 ಕ್ಕೆ ಮುಂದೂಡಲಾಗಿದೆ.

ಶಿಲ್ಪಾ ಶೆಟ್ಟಿ ತಂದೆ ಸುರೇಂದ್ರ ಶೆಟ್ಟಿ ಪಡೆದ ಸಾಲವನ್ನು ಹಿಂತಿರುಗಿಸಿಲ್ಲ ಎಂದು ಆಪಾದಿಸಿರುವ ಆಟೋಮೊಬೈಲ್ ಸಂಸ್ಥೆಯೊಂದರ ಮಾಲೀಕರಾದ ಫಿರೋಜ್ ಆಮ್ರಾ ತಮ್ಮ ಕಾನೂನು ಸಂಸ್ಥೆಯಾದ M/s Y & A Legal ಮೂಲಕ ಶಿಲ್ಪಾ ಸೇರಿ ಮೂವರ ವಿರುದ್ಧ ಮೊದಲಿಗೆ ದೂರು ದಾಖಲಿಸಿದ್ದಾರೆ. ಉದ್ಯಮಿ ನೀಡಿದ್ದ ದೂರಿನ ಪ್ರಕಾರ, ಶಿಲ್ಪಾ ಅವರ ತಂದೆ ದಿವಂಗತ ಸುರೇಂದ್ರ ಶೆಟ್ಟಿ 21 ಲಕ್ಷ ರೂ ಸಾಲವನ್ನು ಪಡೆದಿದ್ದರು. ಅದನ್ನು 2017ರ ಜನವರಿಯಲ್ಲಿ ಬಡ್ಡಿಯೊಂದಿಗೆ ಪಾವತಿಸಬೇಕಾಗಿತ್ತು. ಆದರೆ, ಸಾಲವನ್ನು ಮರುಪಾವತಿಸಲು ಶಿಲ್ಪಾ, ಶಮಿತಾ ಮತ್ತು ಸುನಂದಾ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಶಿಲ್ಪಾ ತಂದೆ ಸುರೇಂದ್ರ ಅವರು ವರ್ಷಕ್ಕೆ 18% ಬಡ್ಡಿದರದಲ್ಲಿ ಸಾಲ ಪಡೆದಿದ್ದರು.‌ಆದರೆ ಸಾಲ‌ತೀರಿಸುವ ಮುನ್ನವೇ ಸುರೇಂದ್ರ ಅವರು ನಿಧನರಾಗಿದ್ದರು. ಹೀಗಾಗಿ ಈ ಸಾಲಕ್ಕೆ ಪತ್ನಿ ಹಾಗೂ ಪುತ್ರಿಯರು ಹೊಣೆ ಹೊರಬೇಕು ಎಂದು ದೂರುದಾರರು ಆರೋಪಿಸಿದ್ದಾರೆ. ಆದರೆ ಶಿಲ್ಪಾ ಶೆಟ್ಟಿ ಈ ಸಾಲವನ್ನು ತೀರಿಸಲು ನಿರಾಕರಿಸಿದ್ದು, ತಂದೆ ಸಾಲವನ್ನು ಪಡೆದಿಲ್ಲ ಎಂದು ವಾದಿಸುತ್ತ ಬಂದಿದೆ.

ಇದನ್ನೂ ಓದಿ : ಕಿಕ್ ಏರಿಸಲು ಹೊರಟ ಸಮಂತಾಗೆ ಅಭಿಮಾನಿಗಳ ಕಿರಿಕ್

ಇದನ್ನೂ ಓದಿ : ಪುನೀತ್ ಹಾಡಿಗೆ ಸುದೀಪ್‌ಮೆಚ್ಚುಗೆ : ನೆಚ್ಚಿನ ಹೀರೋ ಬಗ್ಗೆ ಕಿಚ್ಚ ಏನಂದ್ರು ಗೊತ್ತಾ

( Shilpa Shetty , a Bollywood actress who was in trouble for her father)

Comments are closed.