ಬೆಂಗಳೂರು : ಕೋವಿಡ್ ಸೋಂಕಿತ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಕೋವಿಡ್ ಚಿಕಿತ್ಸಾ ವೆಚ್ಚ ಮರುಪಾವತಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಪ್ಯಾಕೇಜ್ ದರ ಘೋಷಣೆ ಮಾಡಿ ಆದೇಶಿಸಿದೆ.

ಕೋವಿಡ್ ಚಿಕಿತ್ಸಾ ಪ್ಯಾಕೇಜ್ ದರದಲ್ಲಿ ಸರ್ಕಾರಿ ನೌಕರರು, ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚ ಮರು ಪಾವತಿ ಯನ್ನು ಸರಕಾರ ಮಾಡಲಿದೆ. ಸರ್ಕಾರ ನಿಗದಿಪಡಿಸಿದ ಪ್ಯಾಕೆಜ್ ದರಕ್ಕಿಂತ ಆಸ್ಪತ್ರೆಯ ವೆಚ್ಚ ಕಡಿಮೆ ಇದ್ದರೆ, ಕಡಿಮೆಯಾಗಿ ರುವ ದರದ ಆಧಾರದ ಮೇಲೆ ಚಿಕಿತ್ಸೆ ವೆಚ್ಚ ಮರುಪಾತಿಸುವಂತೆಯೂ ರಾಜ್ಯ ಸರ್ಕಾರ ತಿಳಿಸಿದೆ.

ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಸಾಮಾನ್ಯ ವಾರ್ಡ್ ಗೆ ದಿನಕ್ಕೆ 10 ಸಾವಿರ ರೂ. ಹೆಚ್ಚು ಅವಲಂಬಿತ ಘಟಕಕ್ಕೆ 12 ಸಾವಿರ ರೂ. ವೆಂಟಿಲೇಟರ್ ರಹಿತ ಐಸಿಯು ವಾರ್ಡ್ ಗೆ 15 ಸಾವಿರ ರೂ. ವೆಂಟಿಲೇಟರ್ ಸಹಿತ ಐಸಿಯು ವಾರ್ಡ್ ಗೆ 25 ಸಾವಿರ ರೂ. ನಿಗದಿ ಮಾಡಿ ಆದೇಶ ಹೊರಡಿಸಿದೆ.
