Rohini Sindhuri : ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ತನಿಖೆಗೆ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು : ಶಾಸಕ ಸಾರಾ ಮಹೇಶ್‌ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವೈಮನಸ್ಸು ತಾರ್ತಿಕ ಹಂತಕ್ಕೆ ಬಂದು ನಿಂತಿದೆ. ಸಾರಾ ಮಹೇಶ್ ನೊರೆಂಟು ಆರೋಪಗಳ ಬಳಿಕ ಸರ್ಕಾರ ಕೊನೆಗೂ ದಕ್ಷ ಐಎಎಸ್ ಅಧಿಕಾರಿ ಖ್ಯಾತಿಯ ರೋಹಿಣಿ ಸಿಂಧೂರಿ (Rohini Sindhuri ) ವಿರುದ್ಧ ತನಿಖೆಗೆ ಆದೇಶಿಸಿದೆ.

ರೋಹಿಣಿ ಸಿಂಧೂರಿ ಕೊರೊನಾ ಸಂದರ್ಭವೂ ಸೇರಿದಂತೆ ಹಲವು ಕಾಲ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಈ ವೇಳೆ ನಡೆದಿದೆ ಎನ್ನಲಾದ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಗೆ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಡಿಸಿಯಾಗಿದ್ದ ವೇಳೆ ಕೇಳಿಬಂದಿದ್ದ 4 ಪ್ರಕರಣಗಳ ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಯಲಿದ್ದು, ತನಿಖಾಧಿಕಾರಿಯಾಗಿ ಬಿಡಬ್ಲ್ಯೂ ಎಸ್ ಎಸ್ ಬಿ ಅಧ್ಯಕ್ಷ ಎ‌ನ್. ಜಯರಾಮ್ ನೇಮಕ. 30 ದಿನಗಳ‌ ಒಳಗೆ ವರದಿ‌ ಸಲ್ಲಿಸುವಂತೆ ತನಿಖಾ ತಂಡಕ್ಕೆ ಸರ್ಕಾರ ಆದೇಶ ಹೊರಡಿಸಿದೆ.

ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಕಡಿಮೆ ಬೆಲೆಯಲ್ಲಿ ಸಿಗುವ ಬಟ್ಟೆ ಬ್ಯಾಗ್ ಗೆ ಹೆಚ್ಚಿನ ದರ ನೀಡಿ ಖರೀದಿಸಲು ಅನುಮತಿ ನೀಡುವ ಮೂಲಕ ರೋಹಿಣಿ ಸಿಂಧೂರಿ (Rohini Sindhuri ) ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದು, ಟೆಂಡರ್ ದಾರರಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ದಾಖಲೆಗಳನ್ನು ಬಿಡುಗಡೆಗೊಳಿಸಿ ಆರೋಪಿಸಿದ್ದರು.

ಅಲ್ಲದೇ ಡಿಸಿ ನಿವಾಸದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಅನಧಿಕೃತ ಈಜುಕೊಳ ಮತ್ತು ಜಿಮ್ ನಿರ್ಮಾಣ ಮಾಡಲಾಗಿದೆ. ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ಮುಚ್ಚಿಟ್ಟಿರುವುದು ಮತ್ತು ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಕಾರಣವಾದ ನಿರ್ಲಕ್ಷ್ಯ ಆರೋಪಗಳ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ. ಸಿಂಧೂರಿ (Rohini Sindhuri ) ವಿರುದ್ಧ ಕೇವಲ ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಮಾತ್ರವಲ್ಲದೇ, ಮೈಸೂರು ಮಹಾನಗರ ಪಾಲಿಕೆ ಮಾಜಿ ಡೆಪ್ಯುಟಿ ಮೇಯರ್ ಶೈಲೇಂದ್ರ ಭೀಮ್ ರಾವ್ ಕೂಡ ತನಿಖೆಗೆ ಆಗ್ರಹಿಸಿದ್ದರು. ಸಾ.ರಾ. ಮಹೇಶ್ ಮತ್ತು ಶೈಲೇಂದ್ರ ಭೀಮ್ ರಾವ್ ಪತ್ರದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ ರೋಹಿಣಿ ಸಿಂಧೂರಿಯವರು ಧಾರ್ಮಿಕ ಮತ್ತು ದತ್ತಿ‌ ಇಲಾಖೆ ಆಯುಕ್ತರಾಗಿ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : Navjot Singh Sidhu Surrender : ನವಜೋತ್ ಸಿಂಗ್ ಸಿಧು 1 ವರ್ಷ ಜೈಲು : ನ್ಯಾಯಾಲಯಕ್ಕೆ ಶರಣಾದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ : ಶಾಸಕರು ಗೋಣಿಚೀಲದಲ್ಲಿ ಹಣ ತರ್ತಾರೆ ! ಹರೀಶ್‌ ಪೂಂಜಾಗೆ ಮುಳುವಾಗುತ್ತಾ ಇಡಿ(ED)ಯ ಪಿಎಂಎಲ್‌ಎ ಕಾಯ್ಡೆ ?

The government has ordered an inquiry against IAS officer Rohini Sindhuri

Comments are closed.