Canadian MP Speaks Kannada : ಕೆನಡಾ ಸಂಸತ್‌ನಲ್ಲಿ ಕನ್ನಡದ ಕಂಪು ಬೀರಿದ ಆರ್ಯ

ಕೆನಡದ ಸಂಸತ್ತಿನಲ್ಲಿ ತುಮಕೂರು ಜಿಲ್ಲೆಯ ಚಂದ್ರ ಆರ್ಯ ಕನ್ನಡದಲ್ಲಿ (Canadian MP Speaks Kannada) ಮಾತನಾಡುವ  ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚಂದ್ರ ಆರ್ಯ ಅವರು ತಮ್ಮ “ಮಾತೃಭಾಷೆ” ಕನ್ನಡದಲ್ಲಿ ಮಾತನಾಡುವ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.  ಅದರಲ್ಲಿ “ನಾನು ಕೆನಡಾದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ (Kannada)  ಕನ್ನಡದಲ್ಲಿ ಮಾತನಾಡಿದ್ದೇನೆ. ಈ ಸುಂದರ ಭಾಷೆ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಸುಮಾರು 50 ಮಿಲಿಯನ್ ಜನರು ಮಾತನಾಡುತ್ತಾರೆ. ಭಾರತದ ಹೊರಗಿನ ವಿಶ್ವದ ಯಾವುದೇ ಸಂಸತ್ತಿನಲ್ಲಿ  ನಾನು ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು” ಎಂದು ತಮ್ಮ ಸಂತಸವನ್ನು  ಟ್ವೀಟ್ ರಲ್ಲಿ ವ್ಯಕ್ತಪಡಿಸಿದ್ದಾರೆ. ಇನ್ನೂ ಸಂಸತ್ತಿನಲ್ಲಿ ತಮ್ಮ ಭಾಷಣದ ವೇಳೆ  ಅವರು ಕೆನಡಾ ಸಂಸತ್ತಿನಲ್ಲಿ ತಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿ ಮಾತನಾಡಲು ಸಾಧ್ಯವಾಗುತ್ತಿರುವುದು. ಸಂತೋಷ ತಂದಿದೆ ಮತ್ತು ಇದು ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.

“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು”

ರಾಷ್ಟ್ರಕವಿ ಕುವೆಂಪು ಬರೆದಿರುವ ಹಾಗೂ ನಟ ಸಾರ್ವಭೌಮ ಡಾ. ರಾಜ್​ಕುಮಾರ್ ಹಾಡಿರುವ ಭಾವಗೀತೆಯ(Kannada) ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ ಎಂದ ಅವರು, “ಎಲ್ಲಾದರೂ ಇರು, ಎಂತಾದರೂ ಇರು.. ಎಂದೆಂದಿಗೂ ನೀ ಕನ್ನಡವಾಗಿರು” ಎಂದು ಹಾಡಿ ಸಭಾಪತಿಗೆ ಧನ್ಯವಾದ ಅರ್ಪಿಸಿ ತಮ್ಮ ಮಾತುಗಳನ್ನು ಮುಗಿಸುತ್ತಾರೆ.

ಅನೇಕ ಗಣ್ಯಾತಿಗಣ್ಯರು ಪ್ರಶಂಸೆ

ಅದರಲ್ಲೂ ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥನಾರಾಯಣ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದಕ್ಕಾಗಿ ಚಂದ್ರ ಆರ್ಯ ಅವರನ್ನು ಅಭಿನಂದಿಸಿದ್ದಾರೆ. “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು -ಕೆನಡಾದ ಸಂಸತ್ತಿನಲ್ಲಿ ಕನ್ನಡದ ಕಂಪು ಮೊಳಗಿಸಿದ ಅಲ್ಲಿನ ಸಂಸದರಾಗಿರುವ ಹೆಮ್ಮೆಯ ಕನ್ನಡಿಗ ಶ್ರೀ ಚಂದ್ರ ಆರ್ಯ ಅವರ ಮೂಲಕ ಪ್ರತಿಧ್ವನಿಸಿದ ಈ ಕವಿವಾಣಿ ಎಂದೆಂದಿಗೂ ಪ್ರಸ್ತುತ! ಕನ್ನಡ ಕಸ್ತೂರಿಯ ಪರಿಮಳವನ್ನು ಪಸರಿಸಿದ ತಮಗೆ ಮನಃಪೂರ್ವಕ ಅಭಿನಂದನೆಗಳು” ಎಂದು ಟ್ವೀಟ್​ ಮಾಡಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರಶಂಸಿಸಿದ್ದಾರೆ.” ತುಮಕೂರು ಜಿಲ್ಲೆಯ, ಶಿರಾ ತಾಲೂಕಿನ ದ್ವಾರಾಳು ಗ್ರಾಮದ ಕನ್ನಡಿಗ ಚಂದ್ರ ಆರ್ಯ ಕೆನಡಾ ದೇಶದ ಸಂಸತ್ತಿನ ಪ್ರತಿನಿಧಿಯಾಗಿ, ತಮ್ಮ ಮೊದಲ ಭಾಷಣವನ್ನು ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡದ (Kannada)ಸೊಗಡನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊಳಗಿಸಿದ್ದಾರೆ. ಮನುಷ್ಯ ತಾನು ಎಷ್ಟೇ ಎತ್ತರಕ್ಕೆ ಹೋದರೂ” ಎಂದು ಟ್ವಿಟ್ಟರಲ್ಲಿ  ಟ್ವೀಟ್ ಮಾಡಿದ್ದಾರೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ಆರ್ ನಿರಾಣಿ ಮಾತನಾಡಿ, ಕೆನಡಾ ಸಂಸತ್ತಿನಲ್ಲಿ ನಮ್ಮ ನೆಲದ ಭಾಷೆ, ಕನ್ನಡ ಮಾತನಾಡುತ್ತಿರುವುದು ನಮ್ಮೆಲ್ಲರಿಗೂ ಅಪಾರ ಹೆಮ್ಮೆ ತಂದಿದೆ ಎಂದು ಹೇಳಿದರು. ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಕೆನಡಾ ಸಂಸತ್ತಿನಲ್ಲಿ ನಮ್ಮ ಶ್ರೇಷ್ಠ ಕನ್ನಡ ಭಾಷೆಯನ್ನು ಮಾತನಾಡುತ್ತಿರುವುದು ನನಗೆ ಸಂತೋಷ ತಂದಿದೆ. ಶ್ರೀ ಚಂದ್ರ ಆರ್ಯ ಅವರ ಒಂದು ಉತ್ತಮ ಕಲ್ಪನೆ. ಪ್ರಪಂಚದಾದ್ಯಂತದ ಕನ್ನಡಿಗರು ನಮ್ಮ ಮಾತೃಭಾಷೆಯ ಧ್ವಜವನ್ನು ಹಾರಿಸಬೇಕು.

ಸುದ್ದಿ ವರದಿಗಳ ಪ್ರಕಾರ, ಚಂದ್ರ ಆರ್ಯ ಅವರು 2015 ರಲ್ಲಿ ಮೊದಲ ಬಾರಿಗೆ ಮತ್ತು 2019 ರಲ್ಲಿ ಎರಡನೇ ಬಾರಿಗೆ ಕೆನಡಾದ ಸಂಸತ್ತಿಗೆ ಆಯ್ಕೆಯಾದರು. ಆರ್ಯ ಇತ್ತೀಚೆಗೆ ಕೆನಡಾದ ಜನರು ಮತ್ತು ಸರ್ಕಾರವನ್ನು ಒತ್ತಾಯಿಸಿದರು, ಹಿಂದೂಗಳಿಗೆ ಪುರಾತನ ಮತ್ತು ಮಂಗಳಕರ ಸಂಕೇತವಾದ ‘ಸ್ವಸ್ತಿಕ’ ಮತ್ತು 20 ನೇ ಶತಮಾನದ ನಾಜಿ ಚಿಹ್ನೆ ‘ಹಕೆನ್‌ಕ್ರೂಜ್’ ನಡುವಿನ ವ್ಯತ್ಯಾಸವನ್ನು ಗುರುತಿಸಲು, ಇವೆರಡರ ನಡುವೆ ಯಾವುದೇ ಸಾಮ್ಯತೆ ಇಲ್ಲ ಎಂದು ಸೂಚಿಸಿದರು.

ಇದನ್ನೂ ಓದಿ :WhatsApp :ವಾಟ್ಸಾಪ್‌ನಲ್ಲಾದ ಇತ್ತೀಚಿನ ಬದಲಾವಣೆಗಳು ನಿಮಗೆ ತಿಳಿದಿದೆಯಾ?

ಇದನ್ನೂ ಓದಿ :Health Benefits of White Onion : ಬಿಳಿ ಈರುಳ್ಳಿಯ ಆರೋಗ್ಯ ಪ್ರಯೋಜನಗಳು ಏನು ಎಂಬುದು ನಿಮಗೆ ಗೊತ್ತಾ?

Canadian MP Speaks Kannada In Parliament

Comments are closed.