ಬೇಡಿಕೆಗೆ ಸ್ಪಂದಿಸದೇ ಇದ್ರೆ, ಸರಕಾರಿ ನೌಕರರ ಮುಷ್ಕರ ಮುಂದುವರಿಕೆ : ಷಢಕ್ಷರಿ

ಬೆಂಗಳೂರು : Government employees strike : ಏಳನೇ ವೇತನ ಆಯೋಗದ ವರದಿ ಹಾಗೂ ಹಳೆಯ ಪಿಂಚಣಿ ವ್ಯವಸ್ಥೆಯ ಮರು ಜಾರಿಗೆ ಆಗ್ರಹಿಸಿ ರಾಜ್ಯದಲ್ಲಿ ಸರಕಾರಿ ನೌಕರರು ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಮಾತುಕತೆ ನಡೆಸಿದ್ದೇವೆ. ರಾಜ್ಯ ಸರಕಾರ ಎರಡು ಗಂಟೆಯ ಒಳಗೆ ಸಕಾರಾತ್ಮಕ ಸ್ಪಂದನೆಯನ್ನು ನೀಡದೇ ಇದ್ರೆ ಮುಷ್ಕರವನ್ನು ಮುಂದುವರಿಕೆ ಮಾಡುವುದಾಗಿ ಕರ್ನಾಟಕ ರಾಜ್ಯ ಸರಕಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಢಕ್ಷರಿ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರಿ ನೌಕರರ ಪ್ರಮುಖ ಬೇಡಿಕೆಗಳ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಅವರು ನಿನ್ನೆ ನಡೆದಿರುವ ಪದಾಧಿಕಾರಿಗಳ ಸಭೆಯಲ್ಲಿ ಆಲಿಸಿದ್ದಾರೆ. ಅಲ್ಲದೇ ಸಭೆಯ ನಿರ್ಧಾರದ ಕುರಿತು ಮುಖ್ಯಮಂತ್ರಿಗಳಿಗೆ ತಿಳಿಸುವ ಕಾರ್ಯವನ್ನು ಮಾಡಿದ್ದೇನೆ. ಸಿಎಂ ಬೊಮ್ಮಾಯಿ ಅವರು ಅಧಿಕಾರಿಗಳ ಜೊತೆಗೆ ಚರ್ಚಿಸಿ ಮಧ್ಯಾಹ್ನ ಎರಡು ಗಂಟೆಯ ಒಳಗೆ ತಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ರಾಜ್ಯ ಸರಕಾರ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೆ ತರಬೇಕು. ಅಲ್ಲದೇ ಏಳನೇ ವೇತನ ಆಯೋಗದ ವರದಿಯನ್ನು ಆಧರಿಸಿ ಮಧ್ಯಂತರ ಪರಿಹಾರವನ್ನು ಕೂಡಲೇ ಪ್ರಕಟಿಸಬೇಕು. ರಾಜ್ಯ ಸರಕಾರ ಎರಡು ಪ್ರಮುಖ ಬೇಡಿಕೆಯ ಕುರಿತು ಸರಕಾರಿ ಆದೇಶ ಹೊರಡಿಸಬೇಕು. ತಮ್ಮ ಬೇಡಿಕೆಯ ಕುರಿತು ಸರಕಾರ ಒಂದು ಹಂತ ನಿರ್ಧಾರಕ್ಕೆ ಬರಲಿದೆ ಅನ್ನೋ ವಿಶ್ವಾಸವಿದೆ. ಈಗಾಗಲೇ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದ್ದು, ಸರಕಾರಿ ಅಧಿಕಾರಿಗಳ ಜೊತೆಗೆ ಕೂಡ ಸಭೆಯನ್ನು ನಡೆಸಲಿದ್ದೇವೆ ಎಂದಿದ್ದಾರೆ.

ರಾಜ್ಯ ಸರಕಾರ ಮಧ್ಯಂತರ ಪರಿಹಾರವನ್ನು ಯಾವುದೇ ಕ್ಷಣದಲ್ಲಿಯೂ ಪ್ರಕಟಿಸಲು ಅವಕಾಶವಿದೆ. ಆದರೆ ಏಳನೇ ವೇತನ ಆಯೋಗದ ವರದಿಯನ್ನು ಜಾರಿಗೆ ತರಲು ಮಾತ್ರವೇ ಆಯೋಗದ ವರದಿಯನ್ನು ಪಡೆಯಬೇಕಾಗಿದೆ. ತಮ್ಮ ಬೇಡಿಕೆ ಈಡೇರಿಕೆ ಆಗದೇ ಇದ್ರೆ ಯಾವುದೇ ಕಾರಣಕ್ಕೂ ಮುಷ್ಕರವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಸರಕಾರ ಸಕಾರಾತ್ಮಕ ವಾಗಿ ಸ್ಪಂಧಿಸದೇ ಇದ್ರೆ ಮುಷ್ಕರವನ್ನು (Government employees strike) ಮುಂದುವರಿಕೆ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ : Govt employees strike: ಸರಕಾರಿ ನೌಕರರ ಮುಷ್ಕರ: ಶಾಲೆ, ಸರಕಾರಿ ಸೇವೆಗಳು ಬಂದ್, ಚಿಕಿತ್ಸೆಗಾಗಿ ರೋಗಿಗಳ ಪರದಾಟ

ಇದನ್ನೂ ಓದಿ : ಹಳೆ ಪಿಂಚಣಿ ಮರು ಜಾರಿ ಸಾಧ್ಯವಿಲ್ಲ, ಕರ್ತವ್ಯಕ್ಕೆ ಹಾಜರಾಗಿ : ಸರಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಸೂಚನೆ

Comments are closed.