ಶೇ.17 ರಷ್ಟು ವೇತನ ಹೆಚ್ಚಳಕ್ಕೆ ಸರಕಾರದ ಒಪ್ಪಿಗೆ: ಸಿಎಂ ಮಾತಿಗೂ ಬಗ್ಗದ ಸರಕಾರಿ ನೌಕರರು

ಬೆಂಗಳೂರು: (Govt employees salary hike) 7ನೇ ವೇತನ ಆಯೋಗ ವರದಿ ಅನ್ವಯ ಸರಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ. ಇಂದಿನಿಂದ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಏಳನೇ ವೇತನ ಆಯೋಗದ ವರದಿ ಜಾರಿ ಕುರಿತು ಮಾತುಕತೆ ನಡೆಸಿದ್ದು ಸರಕಾರಿ ನೌಕರರಿಗೆ ರಾಜ್ಯ ಸರಕಾರ ಬಿಗ್‌ ಗಿಫ್ಟ್‌ ನೀಡಿದೆ. ಶೇ. 17 ರಷ್ಟು ವೇತನ ಹೆಚ್ಚಳಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಒಪ್ಪಿಗೆ ನೀಡಿದ್ದು, ವೇತನ ಹೆಚ್ಚಳದ ಆದೇಶ ಹೊರಡಿಸಲಿ ಎಂದು ಸರಕಾರಿ ನೌಕರ ಸಂಘದ ಅಧ್ಯಕ್ಷ ಪಟ್ಟು ಹಿಡಿದಿದ್ದಾರೆ.

7 ವೇತನದ ವರದಿ ಜಾರಿಗೆ ಅಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘ ಇಂದಿನಿಂದ ಮುಷ್ಕರ ಪ್ರಾರಂಭಿಸಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದರೂ ಕೂಡ ಸರಕಾರಿ ನೌಕರರು ತಮ್ಮ ನಿರ್ಧಾರವನ್ನ ಹಿಂಪಡೆದಿಲ್ಲ. ನಿನ್ನೆ ಮಧ್ಯಾಹ್ನದಿಂದಲೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿದ್ದರೂ ಕೂಡ ಸಂದಾಯ ಯಶಸ್ವಿಯಾಗಿಲ್ಲ. ಅಲ್ಲದೇ ಸಂಜೆಯ ತುರ್ತು ಸಭೆಯೂ ಕೂಡ ಫಲಕೊಡಲಿಲ್ಲ. ಇಂದಿನಿಂದ ನೌಕರರು ಮುಷ್ಕರಕ್ಕೆ ಮುಂದಾಗಿದ್ದು, ಸಿಎಂ ಬೊಮ್ಮಾಯಿ ವೇತನ ಹೆಚ್ಚಳ ಮಾಡುವುದಾಗಿ ಇದೀಗ ಘೋಷಣೆ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ಮಾತಿಗೂ ಬಗ್ಗದ ನೌಕರರು
ಆದರೆ ಸರಕಾರದ ಈ ಭರವಸೆಗಳಿಗೆ ನಾವು ಒಪ್ಪುವುದಿಲ್ಲ. ಶೇ. 17 ರಷ್ಟು ವೆತನ ಹೆಚ್ಚಳದ (Govt employees salary hike) ಆದೇಶ ಹೊರಡಿಸಲಿ. ಆದೇಶ ಬರುವವರೆಗೂ ಮುಷ್ಕರವನ್ನು ನಾವು ಹಿಂದಕ್ಕೆ ಪಡೆಯುವುದಿಲ್ಲ ಎಂದು ಸರಕಾರಿ ಸಂಘದ ಅಧ್ಯಕ್ಷ ಷಢಕ್ಷರಿ ಬಿಗಿಪಟ್ಟು ಹಿಡಿದು ನಿಂತಿದ್ದಾರೆ. ಸರಕಾರದ ಭರವಸೆಗೆ ನಾವು ಒಪ್ಪುವುದಿಲ್ಲ. ಸರಕಾರದ ಬಾಯಿ ಮಾತಿನ ಭರವಸೆ ನಮಗೆ ಬೇಕಾಗಿಲ್ಲ. ಆದೇಶ ಹೊರಡಿಸಲಿ. ಅಲ್ಲಿಯವರೆಗೂ ನಾವು ಮುಷ್ಕರವನ್ನು ಹಿಂಪಡೆಯಲ್ಲ ಎಂದಿದ್ದಾರೆ.

ಎನ್‌ಪಿಎಸ್‌ ಜಾರಿಗೆ ತಂಡ ರಚನೆ-ಸಿಎಂ ಬೊಮ್ಮಾಯಿ
ಎನ್‌ ಪಿಎಸ್‌ ಜಾರಿಗೆ ಸಿಎಂ ಬೊಮ್ಮಾಯಿ ತಂಡ ರಚನೆ ಮಾಡಿದ್ದು ಬೇರೆ ರಾಜ್ಯಗಳಲ್ಲಿ ಎನ್‌ ಪಿಎಸ್‌ ಹೇಗೆ ಜಾರಿಯಾಗಿದೆ ಎಂಬ ಬಗ್ಗೆ ಅಧ್ಯಯನ ನಡೆಸಲಿದ್ದು, ಮುಷ್ಕರ ಕೈ ಬಿಡುವಂತೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಬೇಡಿಕೆಗೆ ಸ್ಪಂದಿಸದೇ ಇದ್ರೆ, ಸರಕಾರಿ ನೌಕರರ ಮುಷ್ಕರ ಮುಂದುವರಿಕೆ : ಷಢಕ್ಷರಿ

ಇದನ್ನೂ ಓದಿ : Govt employees strike: ಸರಕಾರಿ ನೌಕರರ ಮುಷ್ಕರ: ಶಾಲೆ, ಸರಕಾರಿ ಸೇವೆಗಳು ಬಂದ್, ಚಿಕಿತ್ಸೆಗಾಗಿ ರೋಗಿಗಳ ಪರದಾಟ

ಸಿಎಂ ಬೊಮ್ಮಾಯಿ ಅವರು ಏಳನೇ ವೇತನ ಹೆಚ್ಚಳ (Govt employees salary hike) ಮಾಡುವುದಕ್ಕೆ ಒಪ್ಪಿಗೆ ನೀಡಿದರೂ ಕೂಡ ಸರಕಾರಿ ನೌಕರರು ತಮ್ಮ ಪಟ್ಟು ಬಿಡದೇ ಮುಷ್ಕರವನ್ನು ಮುಂದುವರೆಸಲು ಮುಂದಾಗಿದ್ದಾರೆ. ಆದೇಶದ ಪ್ರತಿ ಬಂದ ಮೇಲೆ ಮುಷ್ಕರ ಕೈ ಬಿಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಅಲ್ಲಿಯವರಗೂ ಮುಷ್ಕರ ಮುಂದುವರೆಯಲಿದೆ ಎಂದು ಷಡಕ್ಷರಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಹಳೆ ಪಿಂಚಣಿ ಮರು ಜಾರಿ ಸಾಧ್ಯವಿಲ್ಲ, ಕರ್ತವ್ಯಕ್ಕೆ ಹಾಜರಾಗಿ : ಸರಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಸೂಚನೆ

Govt employees salary hike: Govt agrees to 17% salary hike: Govt employees won’t budge even on CM’s words

Comments are closed.