ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದೆ. ಆದರೂ ನಾಡಿನ ಲಕ್ಷಾಂತರ ಫಲಾನುಭವಿ ಮಹಿಳೆಯರು ತಮ್ಮ ಅಕೌಂಟ್ ಗೆ ಎರಡು ಸಾವಿರ ರೂಪಾಯಿ ಹಣ ಬೀಳದ ಕಾರಣಕ್ಕೆ ಆಂತಕಕ್ಕೊಳಗಾಗಿದ್ದಾರೆ. ಆದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar ) ಮಾತ್ರ ಟೆನ್ಸನ್ ಬೇಡ, ನಿಮ್ಮ ಮನೆಗೆ ಗೃಹಲಕ್ಷ್ಮೀ (Gruha Lakshmi Scheme ) ಬಂದೇ ಬರ್ತಾಳೆ ಬಿಡಿ ಅಂತಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರೋದಿಕ್ಕೆ ಮೊದಲ ಕಾರಣವೇ ಘೋಷಿಸಿದ ಗ್ಯಾರಂಟಿಗಳು. ಅದರಲ್ಲೂ ಮನೆ ನಡೆಸುವ ಮಹಿಳೆಯ ರನ್ನು ಆಕರ್ಷಿಸಿದ್ದು ಪ್ರತಿ ತಿಂಗಳಿಗೂ ಎರಡು ಸಾವಿರ ರೂಪಾಯಿ ಸಹಾಯಧನ ನೀಡೋ ಗೃಹಲಕ್ಷ್ಮೀ ಯೋಜನೆ. ಕರ್ನಾಟಕದಲ್ಲಿ ಅಂದಾಜು 1 ಕೋಟಿ 23 ಲಕ್ಷ ಫಲಾನುಭವಿಗಳನ್ನು ಹೊಂದಿರೋ ಗೃಹಲಕ್ಷ್ಮೀ ಯೋಜನೆ ಆರಂಭವಾಗಿ ಮೂರು ತಿಂಗಳು ಕಳೆದಿದೆ.

ಆದರೆ ಈ ಯೋಜನೆಯಡಿಯಲ್ಲಿ ಇದುವರೆಗೂ ಮಹಿಳೆಯರು ಕೇವಲ ಒಂದು ತಿಂಗಳ ಸಹಾಯಧನ ಮಾತ್ರ ಪಡೆದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗೋದಿಲ್ಲ. ಮಹಿಳೆಯರ ಅಕೌಂಟ್ ಗೆ ಹಣ ಬರೋದಿಲ್ಲ. ಹೊಸ ಫಲಾನುಭವಿಗಳ ಸೇರ್ಪಡೆ ಇಲ್ಲ ಎಂಬುದು ಸೇರಿದಂತೆ ಹಲವು ರೀತಿಯ ಊಹಾಪೋಹಗಳು ಹರಿದಾಡಲಾರಂಭಿಸಿವೆ.
ಇದನ್ನೂ ಓದಿ : 11.5 ಕೋಟಿ ಪ್ಯಾನ್ ಕಾರ್ಡ್ ರದ್ದು : ನಿಮ್ಮ ಪ್ಯಾನ್ ಕಾರ್ಡ್ ಕೂಡ ರದ್ದಾಗಿದೆಯಾ ? ಯಾವುದಕ್ಕೂ ಒಮ್ಮೆ ಪರಿಶೀಲಿಸಿ
ಆದರೆ ಇವೆಲ್ಲದಕ್ಕೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೆರೆ ಎಳೆದಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮೀ ವಿಳಂಬವಾಗ್ತಿರೋದು ಹಾಗೂ ಹಣ ಖಾತೆಗೆ ಬರದೇ ಇರೋದರಿಂದ ಸೃಷ್ಟಿಯಾಗ್ತಿರೋ ಊಹಾಪೋಹಗಳ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ನಾವು ಗೃಹಲಕ್ಷ್ಮೀ ಯೋಜನೆಯ ಪ್ರಕ್ರಿಯೆಯನ್ನು ಸರಳಗೊಳಿಸಿದ್ದೇವೆ. ಈಗಾಗಲೇ ರಾಜ್ಯದ 1.9 ಕೋಟಿ ಮಹಿಳೆಯರನ್ನು ಯೋಜನೆ ತಲುಪಿದೆ. ಆದರೆ ಇನ್ನೂ ರಾಜ್ಯದಲ್ಲಿ ಅಂದಾಜು ಐದಾರು ಲಕ್ಷ ಮಹಿಳೆಯರು ಯೋಜನೆಯಿಂದ ವಂಚಿತರಾಗಿದ್ದಾರೆ. ಆದರೆ ಇದು ವಿಳಂಬವಾಗ್ತಿರೋದಕ್ಕೆ ಅನುದಾನ ವಿಳಂಬ ಕಾರಣ ಅಲ್ಲ, ಬದಲಾಗಿ ಟೆಕ್ನಿಕಲ್ ಸಮಸ್ಯೆ ಎದುರಾಗ್ತಿದೆ.
ಇದನ್ನೂ ಓದಿ : HSRP ನೋಂದಣಿ ಫಲಕ ಅಳವಡಿಕೆಗೆ ಮತ್ತಷ್ಟು ಕಾಲಾವಕಾಶ : ವಾಹನ ಸವಾರರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ
15 ಲಕ್ಷ ಮಹಿಳೆಯರು ಆಧಾರ ಕಾರ್ಡ್ ಲಿಂಕ್ ಆಗದ ಅಕೌಂಟ್ಬರ್ ನೀಡಿದ್ದಾರೆ. ಅಂತವರ ಅಕೌಂಟ್ ಚಾಲ್ತಿಯಲ್ಲಿ ಇಲ್ಲ. ಹೀಗಾಗಿ ಹಣ ಹಾಕಲು ವಿಳಂಬವಾಗ್ತಿದೆ. ಅನುದಾನದ ಕೊರತೆ ಅನ್ನೋದೆಲ್ಲ ಸುಳ್ಳು.ಯೋಜನೆಗೆ ಯಾವುದೇ ರೀತಿಯಲ್ಲೂ ಅನುದಾನದ ಕೊರತೆ ಇಲ್ಲ. ಸಿಎಂ ಸಿದ್ಧರಾಮಯ್ಯನವರು ಈ ಯೋಜನೆಗಾಗಿ ಅನುದಾನ ತೆಗೆದಿರಿಸಿದ್ದಾರೆ.

ಈಗ ಗೃಹಲಕ್ಷ್ಮೀ ವಂಚಿತ ಮಹಿಳೆಯರ ಅಕೌಂಟ್ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ನಡೆದಿದ್ದು, ಸದ್ಯದಲ್ಲೇ ನೂರಕ್ಕೆ ನೂರು ಪ್ರತಿಶತ ಅರ್ಜಿದಾರ ಎಲ್ಲ ಮಹಿಳೆಯರ ಅಕೌಂಟ್ ಗೆ ಹಣ ಹಾಕೋ ಕೆಲಸವಾಗಲಿದೆ ಎಂದಿದ್ದಾರೆ. ವಿನಾಕಾರಣ ಬಿಜೆಪಿ ನಾಯಕರು ನಮ್ಮ ಯೋಜನೆಗಳ ಜನಪ್ರಿಯತೆ ಸಹಿಸಲಾರದೇ ಅಪ್ರಚಾರ ಮಾಡುತ್ತಿದ್ದಾರೆ.
ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : 12000 ರೂ. ಹೂಡಿಕೆ ಮಾಡಿ ರೂ 70 ಲಕ್ಷ ಪಡೆಯಿರಿ
ಹಿಂದಿನ ಸರ್ಕಾರ ಅಳತೆ ಇಲ್ಲದೇ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ ನೀಡಿತ್ತು. ಇದರಿಂದ ಆಡಳಿತ ಹಾಗೂ ಬೊಕ್ಕಸ ಬರಿದಾಗಿದೆ. ಹೀಗಾಗಿ ಅವರು ಮಾಡ್ತಿರೋ ರಾಡಿಯನ್ನು ನಾವು ತೊಳೆಯೋ ಕೆಲಸ ಮಾಡ್ತಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ವಿರುದ್ಧ ವಾಗ್ದಾಳಿ ಕೂಡ ಮಾಡಿದ್ದಾರೆ.
ಒಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂಬ ಕಾರಣಕ್ಕೆ ಆತಂಕಿತರಾಗಿದ್ದ ಮಹಿಳೆಯರಿಗೆ ಸಚಿವೆ ಹೆಬ್ಬಾಳ್ಕರ್ ಮಾತು ಸಮಾಧಾನ ಕೊಟ್ಟಿದ್ದು, ಹಣ ಬರದೇ ಇರೋ ಮಹಿಳೆಯರು ತಮ್ಮ ಬ್ಯಾಂಕ್ ಅಕೌಂಟ್ ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ ನಿಜವಾಗಿಯೂ ಮಹಿಳೆಯರ ಅಕೌಂಟ್ ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆಯೋ ಅಥವಾ ಸರ್ಕಾರಕ್ಕೆ ಅನುದಾನದ ಕೊರತೆ ಇದೆಯೋ ಅನ್ನೋ ಪ್ರಶ್ನೆಗೆ ಮಾತ್ರ ಕಾಲವೇ ಉತ್ತರಿಸಬೇಕಿದೆ.
Gruha Lakshmi Scheme Amount Not recived ? Minister Lakshmi Hebbalkar Give Legitimate Reason