Muslim Name : ಹಲಾಲ್‌, ಹಿಜಾಬ್‌ ಬೆನ್ನಲ್ಲೇ ಏರಿಯಾ, ರಸ್ತೆಗೆ ಇಟ್ಟಿರುವ ಮುಸ್ಲೀಂ ಹೆಸರು ಬದಲಾಯಿಸಿ : ಬಿಜೆಪಿ ಅಭಿಯಾನ

ಬೆಂಗಳೂರು : ಪ್ರತಿನಿತ್ಯವೂ ಪ್ರತ್ಯೇಕತೆಯ ಹೋರಾಟ ತೀವ್ರ ಸ್ವರೂಪ‌ ಪಡೆದುಕೊಳ್ಳುತ್ತಲೇ ಇದೆ. ಇದುವರೆಗೂ ಹಿಜಾಬ್, ಹಲಾಲ್ ಕಟ್ , ಜಟಕಾ ಕಟ್, ಆಜಾನ್, ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಹೋರಾಟ ನಡೆಸಿದ್ದ ಜನರು ಈಗ ರಾಜ್ಯ ರಾಜಧಾನಿಯ ಮುಸ್ಲಿಂ ಹೆಸರುಗಳನ್ನು ಹೊತ್ತ ಏರಿಯಾ,ರಸ್ತೆ, ಕಟ್ಟಡಗಳನ್ನು ಟಾರ್ಗೆಟ್ ಮಾಡಿದ್ದು ಮುಸ್ಲಿಂ ಹೆಸರುಗಳಿಗೆ (Muslim Name) ಬ್ರೇಕ್ ಹಾಕಲು ಮನವಿ ಮಾಡಿದ್ದಾರೆ.

ಹೌದು, ನಗರದಲ್ಲಿ ಮೇಖ್ರಿ ಸರ್ಕಲ್, ವಿಕ್ಟೋರಿಯಾ ರಸ್ತೆ,ಸುಲ್ತಾನ್ ಪಾಳ್ಯ ಹೀಗೆ ನೊರೆಂಟು ಮುಸ್ಲಿಂ ಹೆಸರಿನ ಏರಿಯಾ ಗಳು, ಸರ್ಕಲ್ ಗಳು ಚಾಲ್ತಿಯಲ್ಲಿವೆ. ಆದರೆ ಈಗ ಈ ಹೆಸರುಗಳಿಗೆ ಬ್ರೇಕ್ ಹಾಕಬೇಕೆಂಬ ಒತ್ತಡ ಕೇಳಿಬಂದಿದೆ. ಇದಕ್ಕೆ ಬೇರೆ ಸ್ವರೂಪ ನೀಡಲಾಗಿದ್ದು, ನಗರಕ್ಕೆ ಯಾವುದೇ ಕೊಡುಗೆ ನೀಡದ ವ್ಯಕ್ತಿಗಳ ಹೆಸರನ್ನೂ ಬದಲಾಯಿಸುವಂತೆ ಆಂದೋಲನ ನಡೆಸಲು ಬಿಜೆಪಿ ಮುಖಂಡರು ಚಿಂತನೆ ನಡೆಸಿದ್ದಾರಂತೆ. ಈ ಬಗ್ಗೆ ಬಿಜೆಪಿ ನಾಯಕರು ಅಭಿಯಾನ ಆರಂಭಿಸಿದ್ದು, ಬೆಂಗಳೂರಿನ ರಸ್ತೆಗಳು, ಏರಿಯ ಹೆಸರು ಬದಲಾಯಿಸುವಂತೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.

ಹಿಂದುಯೇತರ ರಸ್ತೆಗಳು, ಏರಿಯಾಗಳ ಹೆಸರು ಬದಲಾಯಿಸುವಂತೆ ಬಿಬಿಎಂಪಿ ಅಯುಕ್ತರಿಗೆ ಪತ್ರ ಬರೆದಿರುವ ಬಿಜೆಪಿ ಮುಖಂಡರು ನಗರದಲ್ಲಿ ಇರುವ ವಿಕ್ಟೋರಿಯ ರಸ್ತೆ, ಟಿಪ್ಪು ಸುಲ್ತಾನ್ ರಸ್ತೆ , ಟ್ಯಾನಿ ರಸ್ತೆ , ಸೇರಿದಂತೆ ಸುಮಾರು 300ರಕ್ಕೂ ಹೆಚ್ಚು ರಸ್ತೆಗಳು ಹಾಗೂ ಬಿಸ್ಮಿಲ್ ನಗರ, ಇಲಿಯಾಸ್ ನಗರ,ಸುಲ್ತಾನ್ ಪಾಳ್ಯ, ಪ್ರೇಜರ್ ಟೌನ್, ಕಾಕ್ಸ್‌ ಟೌನ ಸೇರಿದಂತೆ ನೂರಾರು ಏರಿಯಾಗಳ ಹೆಸರು ಮರು ನಾಮಕಾರಣಕ್ಕೆ ಒತ್ತಾಯಿಸಿದ್ದಾರೆ.

ಅಲ್ಲದೇ ಬೆಂಗಳುರಿನ ಟಿಪ್ಪುಸುಲ್ತಾನ್ ರಸ್ತೆಯನ್ನೂ ಮರು ನಾಮಕಾರಣ ಮಾಡುವಂತೆ ಪಾಲಿಕೆ ಅಯುಕ್ತರಿಗೆ ಪತ್ರ ಬರೆಯಲಾಗಿದ್ದು, ಬೆಂಗಳೂರಿಗೆ ಹೆಸರು ತಂದ ಗಣ್ಯ ವ್ಯಕ್ತಿಗಳ ಹೆಸರು ಇಡಿ. ಅದನ್ನು ಬಿಟ್ಟು ನಗರದ ಅಭಿವೃದ್ಧಿಗಾಗಲಿ ಅಥವಾ ಸಮಾಜಕ್ಕೆ ಯಾವುದೇ ಕೊಡುಗೆ ನೀಡದವರ ಹೆಸರನ್ನು ಇಡೋದ್ಯಾಕೆ ಎಂದು ಬಿಜೆಪಿ ಮುಖಂಡರು ಪ್ರಶ್ನೆ ಮಾಡಿದ್ದಾರೆ.

ಆದರೆ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎನ್. ಅರ್. ರಮೇಶ್ ನೇತೃತ್ವದಲ್ಲಿ ಬಿಬಿಎಂಪಿ ಆಯುಕ್ತರಿಗೆ ಈ ಬಗ್ಗೆ ಬರೆಯಲಾದ ಪತ್ರವನ್ನು ಆಯುಕ್ತರು ತಿರಸ್ಕರಿಸಿದ್ದು, ಆ ರೀತಿಯ ಯಾವುದೇ ಬದಲಾವಣೆ ಈಗ ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರಂತೆ. ಆದರೆ ಈ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿರೋ ಬಿಜೆಪಿ ಮುಖಂಡರು ಮುಸ್ಲಿಂ ಹೆಸರುಗಳನ್ನು ಬದಲಾಯಿಸೋವರೆಗೂ ಹೋರಾಟ ಮುಂದುವರೆಸೋದಾಗಿ ಹೇಳಿಕೊಂಡಿದೆ.

ಇದನ್ನೂ ಓದಿ : ಸಿಲಿಕಾನ್‌ ಸಿಟಿಗೆ ಮಾಲಿನ್ಯದಿಂದ ಆತಂಕ : ಸ್ತ್ರೀಯರ ಆರೋಗ್ಯದ ಬಗ್ಗೆ ಹೊರಬಿತ್ತು ಆತಂಕಕಾರಿ ಮಾಹಿತಿ

ಇದನ್ನೂ ಓದಿ : ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣ : ಈಶ್ವರಪ್ಪಗೆ ಸಂಕಷ್ಟ, ರಾಜ್ಯಪಾಲರಿಗೆ ಇಂದು ಕಾಂಗ್ರೆಸ್‌ ದೂರು

Halal, Hijab After Behind Area, Muslim Name on the Road Change Demand BJP

Comments are closed.