Hamsalekha : ಪೇಜಾವರ ಶ್ರೀಗಳನ್ನು ಹಿಯಾಳಿಸಿದ ಹಂಸಲೇಖ : ಎರಡೆರಡು ಬಾರಿ ಕ್ಷಮೆಕೋರಿದ ನಾದಬ್ರಹ್ಮ

ಬೆಂಗಳೂರು : ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳು ಹೋಗುವ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಹಂಸಲೇಖ ತಮ್ಮ ಹೇಳಿಕೆಯ ಕುರಿತು ಕ್ಷಮೆ ಯಾಚಿಸಿದ್ದಾರೆ. ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಹಂಸಲೇಖ ತಮ್ಮದು ತಪ್ಪಾಪ್ತು ಅಂತಾ ಎರಡೆರಡು ಬಾರಿ ಹೇಳಿದ್ದಾರೆ.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಂಸಲೇಖ ದಲಿತರ ಮನೆಯಲ್ಲಿ ಪೇಜಾವರ ಶ್ರೀಗಳು ಹೋಗಿ ಕುಳಿತರೆಂದು ಸುದ್ದಿಯಾಗುತ್ತದೆ. ಆದರೆ ಅವರ ಮನೆಯವರು ಕೊಟ್ಟ ಕೋಳಿ ತಿನ್ನುವುದಕ್ಕಾಗುತ್ತಾ? ಲಿವರ್, ಮಾಂಸ ಕೊಟ್ಟರೆ ತಿನ್ನುವುದಕ್ಕಾಗುತ್ತಾ ? ದಲಿತರ ಮನೆಗೆ ಹೋಗುವುದು ಯಾವ ದೊಡ್ಡ ವಿಷಯ ? ಎನ್ನುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ಆರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡಿದ್ದರು. ಅದೀಗ ಗೀಳಾಗಿ ಹೋಗಿದೆ. ಅಶ್ವತ್ಥ ನಾರಾಐಣ, ಅಶೋಕ್‌ ಕೂಡ ಗ್ರಾಮ ವಾಸ್ತವ್ಯ ಮಾಡಿದ್ದಾರೆ ಎಂದಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹಂಸಲೇಖ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಬಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ತನ್ನ ತಪ್ಪಿನ ಬಗ್ಗೆ ಕ್ಷಮೆ ಯಾಚನೆಯನ್ನು ಮಾಡಿದ್ದಾರೆ. ಎಲ್ಲಾ ಮಾತುಗಳು ವೇದಿಕೆ ಅಲ್ಲ, ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ತಪ್ಪಾಗಿ ಮಾತನಾಡಿದ್ದೇನೆ. ಅಸ್ಪಶ್ರ್ಯತೆ ದೇಶಕ್ಕಂಟಿದ್ದ ಶಾಪ, ಈ ಶಾಪವನ್ನು ಹೊಡೆದೋಡಿಸಲು ಪೇಜಾವರ ಶ್ರೀಗಳು ಶ್ರಮಿಸಿದ್ದಾರೆ. ಅದರ ಬಗ್ಗೆ ನನಗೆ ಗೌರವವಿದೆ. ಭಾರತದಲ್ಲಿ ಅದು ಕರಗಿ ಮಾಯವಾಗುತ್ತಿದೆ. ನಾನು ಅಲ್ಲಿ ಆಡಿದ ಮಾತು ನನ್ನ ಪತ್ನಿಗೆ ಇಷ್ಟವಾಗಲಿಲ್ಲ. ಅದಕ್ಕೆ ಆಕೆ ಯನ್ನೂ ನಾನು ಕ್ಷಮೆ ಯಾಚಿಸುತ್ತೇನೆ. ನನಗೆ ಯಾರ ಮನಸ್ಸನ್ನೂ ನೋಯಿಸುವ ಮನಸ್ಸಿಲ್ಲ. ನಾನೊಬ್ಬ ಸಂಗೀತಕಾರ ನನಗ್ಯಾಕೆ ಈ ಟ್ರೋಲ್‌ ಎಂದಿದ್ದಾರೆ ಹಂಸಲೇಖ.

ಇದನ್ನೂ ಓದಿ :  ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ವಂಚನೆ ಪ್ರಕರಣ ದಾಖಲು

ಇದನ್ನೂ ಓದಿ : ಮತ್ತೊಮ್ಮೆ ಬಿಜೆಪಿ ಕುಟುಕಿದ ಪದ್ಮಾವತಿ : ಸೋಷಿಯಲ್ ಮೀಡಿಯಾದಲ್ಲಿ ಹಿಂದುತ್ವದ ಪಾಠ

( Hansalekha, a musician who made a controversial statement on Pejavara Swamiji )

Comments are closed.