Amazon ಹೆಸರಲ್ಲಿ ಕೆಲಸದ ಆಮಿಷ : ಇಬ್ಬರಿಗೆ 17.50 ಲಕ್ಷ ವಂಚನೆ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಂತೆಯೇ ಇದೀಗ ಅಮೆಜಾನ್‌ (Amazon ) ಕಂಪೆನಿಯಲ್ಲಿ ಹೂಡಿಕೆ ಮಾಡಿದ್ರೆ ಉದ್ಯೋಗದ ಜೊತೆಗೆ ಕಮಿಷನ್‌ ನೀಡುವುದಾಗಿ ಇಬ್ಬರು ಯುವಕರಿಗೆ ವಂಚಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಇಬ್ಬರಿಂದ ಒಟ್ಟು 17.50 ಲಕ್ಷ ರೂಪಾಯಿ ವಂಚನೆ ನಡೆಸಲಾಗಿದೆ.

ಬೆಂಗಳೂರು ನಗರದ ಕೂಡ್ಲು ರಸ್ತೆಯ ನಿವಾಸಿಯಾಗಿರುವ ಶ್ರೀನಿವಾಸ್‌ ಎಂಬವರಿಗೆ ವ್ಯಕ್ತಿಯೋರ್ವ ಕರೆ ಮಾಡಿ ಅಮೆಜಾನ್‌ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡುವಂತೆ ಸೂಚಿಸಿ ದ್ದಾನೆ. ಹಣ ಹೂಡಿಕೆ ಮಾಡಿದ್ರೆ ನಿಮಗೆ ಕಂಪನಿಯಲ್ಲಿ ಉನ್ನತ ಹುದ್ದೆಯನ್ನು ನೀಡುವುದರ ಜೊತೆಗೆ ಒಳ್ಳೆಯ ಕಮಿಷನ್‌ ಸಿಗುತ್ತೆ ಅಂತಾ ಆಸೆಯನ್ನು ಹುಟ್ಟಿಸಿದ್ದ. ಇದನ್ನು ನಂಬಿದ ಶ್ರೀನಿವಾಸ್‌ ಅವರು ಬರೋಬ್ಬರಿ ೧೨.೧೨ ಲಕ್ಷ ರೂಪಾಯಿ ಹೂಡಿಕೆಯನ್ನು ಮಾಡಿದ್ದರು. ಆದರೆ ಹೂಡಿಕೆ ಮಾಡಿದ ಹಣಕ್ಕೆ ಕಮಿಷನ್‌ ಆಗಲಿ, ಮಾಡಿದ ಕೆಲಸಕ್ಕೆ ವೇತನವಾಗಲಿ ಬಂದಿರಲಿಲ್ಲ. ಅಲ್ಲದೇ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ್ದ ವ್ಯಕ್ತಿಯೂ ಮೊಬೈಲ್‌ ಕರೆ ಸ್ವೀಕಾರ ಮಾಡುವುದನ್ನೇ ನಿಲ್ಲಿಸಿದ್ದಾನೆ. ಇದರಿಂದಾಗಿ ತಾನು ವಂಚನೆಗೆ ಒಳಗಾಗಿ ದ್ದೇನೆ ಎನ್ನುವುದು ಅರಿವಿಗೆ ಬರುತ್ತಿದ್ದಂತೆಯೇ ಶ್ರೀನಿವಾಸ ಅವರು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಇಷ್ಟೇ ಅಲ್ಲಾ ಹೊಸಕೆರೆ ಹಳ್ಳಿಯಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ. ಇಲ್ಲಿನ ಹರ್ಷವರ್ಧನ್‌ ಎಂಬ ಯುವಕನಿಗೆ ಉದ್ಯೋಗ ಕೊಡಿಸುವುದಾಗಿ ವಂಚಿಸಿ ಬರೋಬ್ಬರಿ ೫.೪೧ ಲಕ್ಷ ರೂಪಾಯಿ ಹಣವನ್ನು ಪಡೆಯಲಾಗಿತ್ತು. ಹಣವನ್ನು ವರ್ಗಾವಣೆ ಮಾಡಿದ್ದ ಹರ್ಷವರ್ಧನ್‌ ಸುಮಾರು ೨೨ ಪರೀಕ್ಷೆಗಳನ್ನೂ ಎದುರಿಸಿದ್ದ. ನಂತರದಲ್ಲಿ ತಾನು ವಂಚನೆಗೆ ಒಳಗಾಗಿದ್ದೇನೆ ಅನ್ನೋ ತಿಳಿಯುತ್ತಲೇ ಹರ್ಷವರ್ಧನ್‌ ಸೈಬಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಇಂತಹ ವಂಚನೆ ಪ್ರಕರಣಗಳು ನಡೆಯುತ್ತಿದ್ದರೂ ಕೂಡ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಪೊಲೀಸರು ಈ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದರೂ ಕೂಡ ಜನರು ವಂಚನೆಗೆ ಒಳಗಾಗುತ್ತಲೇ ಇದ್ದಾರೆ. ಇನ್ಮುಂದೆ ಆದ್ರೂ ಇಂತಹ ಕರೆಗಳು ಬಂದಾಗ ಅದನ್ನು ಖಚಿತ ಪಡಿಸಿಕೊಂಡೇ ವ್ಯವಹಾರ ಮಾಡುವುದು ಒಳಿತು

ಇದನ್ನೂ ಓದಿ : ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೋನುಸೂದ್‌ ಸಹೋದರಿ ಮಾಳವಿಕಾ ಸೂದ್

ಇದನ್ನೂ ಓದಿ : ಅಂಡರ್ ವಾಟರ್ ನಲ್ಲಿ ಲಿಪ್ ಲಾಕ್ : ಗರ್ಭಿಣಿ ನಟಿಯ ಸಾಹಸಕ್ಕೆ ಅಚ್ಚರಿಗೊಂಡ ಅಭಿಮಾನಿಗಳು

(17 Lakhs fraud in the Name of amazon in Bengaluru).

Comments are closed.