Hanuma Jayanthi: ಮೂರು ದಿನ ಮದ್ಯ ಮಾರಾಟ ನಿಷೇಧ : 1 ದಿನ ಶಾಲೆ, ಕಾಲೇಜಿಗೆ ರಜೆ

ಮೈಸೂರು: (Hanuma Jayanthi) ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಹನುಮ ಜಯಂತಿ ಆಚರಣೆ ನಡಯುತ್ತಿದ್ದು, ಹಲವು ಕಡೆಗಳಲ್ಲಿ ವಿಜೃಂಭಣೆಯಿಂದ ಆಚರಣೆ ನಡೆಯುತ್ತಿದೆ. ಈ ಹಿನ್ನಲೆ ಹುಣಸೂರಿನಲ್ಲಿ ಮೂರು ದಿನಗಳ ಕಾಲ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ರಾಜ್ಯದ ಎಲ್ಲೆಡೆಯಲ್ಲಿ ಹನುಮ ಜಯಂತಿ (Hanuma Jayanthi) ಆಚರಣೆಯನ್ನು ಆಚರಿಸುತ್ತಿದ್ದು, ಮೈಸೂರಿನ ಹುಣಸೂರಿನಲ್ಲೂ ಕೂಡ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಇಂದಿನಿಂದ ಮೂರು ದಿನಗಳವರೆಗೂ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಮದ್ಯ ಮುಕ್ತ ದಿನವೆಂದು ಘೋಷಣೆ ಮಾಡಲಾಗಿದೆ. ಮೂರು ದಿನಗಳ ಕಾಲ ಮಧ್ಯ ಮಾರಾಟ ನಿಷೇಧಿಸಲಾಗಿದ್ದು, ಹುಣಸೂರು ತಾಲೂಕಿನಾದ್ಯಂತ ಮಧ್ಯ ಮಾರಾಟ ನಡೆಸುವಂತಿಲ್ಲ.

ಮಧ್ಯ ಮಾರಟ ನಿಷೇಧವಲ್ಲದೇ ಹನುಮ ಜಯಂತಿ ಪ್ರಯಕ್ತ ಹುಣಸೂರು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಾಲೂಕಿನ ಸೂಕ್ಷ್ಮ ಪ್ರದೇಶಗಳಲ್ಲಿ ಹನುಮ ಜಯಂತಿ ಆಚರಣೆ ಹಿನ್ನಲೆಯಲ್ಲಿ ಯಾವುದೇ ತೊಂದರೆಯಾಗದಂತೆ ಖಾಕಿ ಪಡೆಗಳು ಭಾರೀ ಬಂದೋಬಸ್ತ್‌ ಮಾಡಿದ್ದಾರೆ.

ಹಿಂದೂ ಕ್ಯಾಲೆಂಡರ್‌ ಪ್ರಕಾರ, ಕರ್ನಾಟಕದಲ್ಲಿ ಹನುಮ ಜಯಂತಿಯನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಆಚರಣೆ ಮಾಡಲಾಗುತ್ತದೆ. ರಾಜ್ಯದ ಹಲವು ಕಡೆಗಳಲ್ಲಿ, ಎಲ್ಲಾ ಹನುಮ ದೇವಸ್ಥಾನಗಳಲ್ಲಿ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ : M-K border dispute: ಮಹಾರಾಷ್ಟ್ರದಲ್ಲಿ ಬಣ ಬಡಿದಾಟ: ಕರ್ನಾಟಕದ ಗಡಿ ಭಾಗದ ಜನರು ಹೈರಾಣು

ಇದನ್ನೂ ಓದಿ : Post Office New Offer : ಇಂಡಿಯನ್ ಪೋಸ್ಟ್ ನಿಂದ ಭರ್ಜರಿ ಆಫರ್ : ವಿವಾಹಿತರ ಖಾತೆಗೆ 59,400 ರೂ.ಜಮಾ

ಇದನ್ನೂ ಓದಿ : Children’s Mutual Funds : ಚೈಲ್ಡ್‌ ಮ್ಯೂಚುವಲ್‌ ಫಂಡ್‌ ಬಗ್ಗೆ ನಿಮಗೆ ಗೊತ್ತಾ; ನಿಮ್ಮ ಮಕ್ಕಳ ಭವಿಷ್ಯವನ್ನು ಹೀಗೆ ಸುರಕ್ಷಿತಗೊಳಿಸಿ

(Hanuma Jayanthi) Hanuma Jayanthi is being celebrated in the state for the last two days and it is being celebrated with great enthusiasm in many places. Against this backdrop, mid-sale has been banned in Hunsur for three days.

Comments are closed.