Exclusive: Robin Uthappa CSK : ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕನ್ನಡಿಗ ರಾಬನ್ ಉತ್ತಪ್ಪಗೆ ಹೊಸ ಜವಾಬ್ದಾರಿ

ಬೆಂಗಳೂರು : ಕರ್ನಾಟಕ ತಂಡದ ಮಾಜಿ ನಾಯಕ, ಟೀಮ್ ಇಂಡಿಯಾದ ಮಾಜಿ ಆಟಗಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡ 2021ರಲ್ಲಿ ಐಪಿಎಲ್ (IPL) ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ (Robin Uthappa CSK) ಕೊಡಗಿನ ವೀರ ರಾಬಿನ್ ಉತ್ತಪ್ಪ (Robin Uthappa) ಕ್ರಿಕೆಟ್’ನ ಎಲ್ಲಾ ಪ್ರಕಾರಗಳಿಗೆ ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ್ದರು.

ನಿವೃತ್ತಿಯ ನಂತರ ರಾಬಿನ್ ಉತ್ತಪ್ಪ ಭಾರತದ ಜಿಂಬಾಬ್ವೆ ಪ್ರವಾಸದ ವೇಳೆ ಕಾಮೆಂಟೇಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.37 ವರ್ಷದ ರಾಬಿನ್ ಉತ್ತಪ್ಪ ಅವರಿಗೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದಲ್ಲಿ ಹೊಸ ಜವಾಬ್ದಾರಿ ಸಿಕ್ಕಿದೆ. ಉತ್ತಪ್ಪ ಸಿಎಸ್’ಕೆ ತಂಡ ಪ್ರತಿಭಾನ್ವೇಷಕ (ಟ್ಯಾಲೆಂಟ್ ಹಂಟ್, ಸ್ಕೌಟ್ Scout) ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ರಾಬಿನ್ ಉತ್ತಪ್ಪ ಅವರ ಅನುಭವವನ್ನು ಈ ರೀತಿಯಲ್ಲಿ ಬಳಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಿರ್ಧರಿಸಿದೆ.

ಕೊಯಂಬತ್ತೂರಿನ ಎನ್ಎನ್ಆರ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ನಡೆದ ಸಿಎಸ್’ಕೆ ಟ್ರಯಲ್ಸ್ ಸಂದರ್ಭದಲ್ಲಿ ಹಾಜರಿದ್ದ ರಾಬಿನ್ ಉತ್ತಪ್ಪ ಟ್ರಯಲ್ಸ್’ನಲ್ಲಿ ಭಾಗವಹಿಸಿದ್ದ ಯುವ ಆಟಗಾರರ ಆಟದ ಮೇಲೆ ಹದ್ದಿನ ಕಣ್ಣಿಟ್ಟು ವೀಕ್ಷಿಸಿದರು. ಇದೇ ವೇಳೆ ರಾಬಿನ್ ಉತ್ತಪ್ಪ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಅಂಬಾಟಿ ರಾಯುಡು ಕೂಡ ಹಾಜರಿದ್ದರು.

ತಮ್ಮ ಐಪಿಎಲ್ ಕರಿಯರ್’ನ ಕಡೆಯ ಎರಡು ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ರಾಬಿನ್ ಉತ್ತಪ್ಪ, ನಾಕೌಟ್ ಪಂದ್ಯಗಳಲ್ಲಿ ಅಮೋಘ ಆಟ ಪ್ರದರ್ಶಿಸಿ ಸಿಎಸ್’ಕೆ ತಂಡ 4ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾಗಿದ್ದರು. 2014ರ ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆಯುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಇದನ್ನೂ ಓದಿ : Women Umpires in Ranji Trophy : ರಣಜಿ ಟ್ರೋಫಿಗೆ ಮಹಿಳಾ ಅಂಪೈರ್ಸ್, ಬಿಸಿಸಿಐ ಹೊಸ ಪ್ರಯೋಗ

ಇದನ್ನೂ ಓದಿ : India Vs Bangladesh ODI : ಇಂದು 2ನೇ ಏಕದಿನ, ಭಾರತಕ್ಕೆ ಮಾಡು ಇಲ್ಲ ಮಡಿ ಪಂದ್ಯ; ಬದಲಾಗುತ್ತಾ ಪ್ಲೇಯಿಂಗ್ XI?

ಇದನ್ನೂ ಓದಿ : Rohith Sharma 500 Sixers : 500 ಸಿಕ್ಸರ್ಸ್ ಹೊಸ್ತಿಲಲ್ಲಿ ಹಿಟ್‌ಮ್ಯಾನ್, ಮಹೋನ್ನತ ದಾಖಲೆಗೆ ಮೂರೇ ಸಿಕ್ಸರ್ಸ್ ಬಾಕಿ

37 ವರ್ಷದ ರಾಬಿನ್ ಉತ್ತಪ್ಪ 14 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್, ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಆಡಿದ್ದಾರೆ. ಐಪಿಎಲ್’ನಲ್ಲಿ ಒಟ್ಟು 205 ಪಂದ್ಯಗಳನ್ನಾಡಿರುವ ರಾಬಿನ್ ಉತ್ತಪ್ಪ 27.51ರ ಸರಾಸರಿಯಲ್ಲಿ 27 ಅರ್ಧಶತಕಗಳ ಸಹಿತ 130.35ರ ಸ್ಟ್ರೈಕ್’ರೇಟ್’ನಲ್ಲಿ 4,952 ರನ್ ಕಲೆ ಹಾಕಿದ್ದಾರೆ.

Exclusive: Robin Uthappa CSK : Kannadigas Robin Uthappa new responsibility in Chennai Super Kings team

Comments are closed.