Hassan temple :ಇಂದಿನಿಂದ ಅಧಿದೇವತೆ ಹಾಸನಾಂಬೆ ದರ್ಶನ : ವರ್ಷದ ಬಳಿಕ ತೆರೆಯಿತು ದೇಗುಲದ ಬಾಗಿಲು

ಹಾಸನ : (Hassan Hasanamba temple) ಇಂದಿನಿಂದ ಭಕ್ತರಿಗೆ ಅಧಿದೇವತೆ ಹಾಸನಾಂಬೆ ದರ್ಶನ ನೀಡಲಿದ್ದಾಳೆ. ಇಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಹೊತ್ತಿಗೆ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ, ಭಕ್ತರಿಗೆ ಪೂಜಾ ಕೈಂಕರ್ಯ ನೆರವೇರಿಸಲು ಅವಕಾಶ ಕಲ್ಪಿಸಲಾಯಿತು. ಮುಂದಿನ ಹದಿನೈದು ದಿನಗಳವರೆಗೆ ಭಕ್ತರು ಈ ದೇವಿಯ ದರ್ಶನವನ್ನು ಪಡೆಯಬಹುದು.

ಅಕ್ಟೋಬರ್‌ 27 ರ ವರೆಗೆ ಭಕ್ತರಿಗೆ ಹಾಸನಾಂಬೆಯ(Hassan temple) ದರ್ಶನಕ್ಕೆ ಅವಕಾಶವನ್ನು ಮಾಡಿ ಕೊಡುವುದಕ್ಕೆ ದೇವಸ್ಥಾನದ ಆಡಳಿತದ ಮಂಡಳಿ ತಿರ್ಮಾನವನ್ನು ಕೈಗೊಂಡಿದೆ. ದೇವಾಲಯದ ಪ್ರಧಾನ ಅರ್ಚಕರಾದ ನಾಗರಾಜ್‌ ಅವರು ಹಾಸನಾಂಬೆ ದರ್ಶನದ ಕುರಿತು ಮಾಹಿತಿ ನೀಡಿದ್ದಾರೆ.

15 ರಿಂದ 24 ನೇ ದಿನಾಂಕದವರೆಗೆ ಬೆಳಿಗ್ಗೆ ಆರರಿಂದ ಮಧ್ಯಾಹ್ನ ಒಂದರ ವರೆಗೆ ಭಕ್ತರಿಗೆ ದರ್ಶನ ಪಡೆಯುವ ಅವಕಾಶವಿದೆ. 1ರಿಂದ 3 ರವರೆಗೆ ದೇವರಿಗೆ ನೈವೆದ್ಯ ಮಾಡುವುದರಿಂದ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮತ್ತೆ 3 ರಿಂದ 10 ರವರೆಗೆ ಭಕ್ತರಿಗೆ ದರ್ಶನ ಮಾಡಲು ಅವಕಾಶ ಮಾಡಿ ಕೊಡಲಾಗುತ್ತದೆ.25 ರಂದು ಗ್ರಹಣ ಇರುವುದರಿಂದ ಆವತ್ತಿನ ದಿನ ಭಕ್ತರಿಗೆ ದೇವರ ದರ್ಶನದ ಅವಕಾಶ ಇರುವುದಿಲ್ಲ. 26 ರಿಂದ 27 ರಂದು 6ರಿಂದ 7 ರವರೆಗೆ ದರ್ಶನ ಅದರ ನಂತರ ಬಾಗಿಲನ್ನು ಹಾಕಲಾಗುತ್ತದೆ.

ವರ್ಷದಲ್ಲಿ ಒಮ್ಮೆ ಮಾತ್ರವೇ ಬಾಗಿಲು ತೆರೆಯುವ ಹಾಸನಾಂಬೆಯ ದರ್ಶನವನ್ನು ಪಡೆಯಲು ದೇಶದ ನಾನಾ ಮೂಲೆಗಳಿಂದಲೂ ಭಕ್ತರ ದಂಡೇ ಹರಿದು ಬರುತ್ತಿದೆ. ಹನ್ನೆರಡನೆ ಶತಮಾನದಲ್ಲಿ ಆಗಿನ ಕಾಲದ ಪಾಳೆಗಾರನಾದ ಕೃಷ್ಣಪ್ಪನಾಯಕ ಕಾರ್ಯನಿಮಿತ್ತ ಬೇರೆ ಸ್ಥಳಕ್ಕೆ ಪ್ರಯಾಣವನ್ನು ಮಾಡುವಾಗ ಮೊಲವೊಂದು ಅಡ್ಡ ಬಂದಿತು. ಇದನ್ನು ಅಪುಶಕುನವೆಂದು ಭಾವಿಸುತ್ತಾನೆ. ಆ ಸಂದರ್ಭದಲ್ಲಿ ಆದಿಶಕ್ತಿ ಸ್ವರೂಪಿಣಿ ಪ್ರತ್ಯಕ್ಷವಾಗಿ ಈ ಸ್ಥಳದಲ್ಲಿ ನನಗೊಂದು ದೇವಾಲಯವನ್ನು ನಿರ್ಮಾಣ ಮಾಡು ನಾನು ಈ ಸ್ಥಳದಲ್ಲಿ ಹಾಸನಾಂಬೆ ಎಂಬ ಹೆಸರಲ್ಲಿ ನೆಲೆಸುತ್ತಿನಿ ಎನ್ನುತ್ತಾಳೆ. ಅಂದಿನಿಂದ ಆ ದೇವಸ್ಥಾನಕ್ಕೆ ಹಾಸನಾಂಬೆ ಎಂಬ ಹೆಸರು ಬಂದಿದೆ.

ಇದನ್ನೂ ಓದಿ:bjp mla uday garudachar :ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ : ಬಿಜೆಪಿ ಶಾಸಕ ಉದಯ್​ ಗರುಡಾಚಾರ್​ಗೆ 2 ತಿಂಗಳು ಜೈಲು ಶಿಕ್ಷೆ

ಇದನ್ನೂ ಓದಿ:Ramesh Aravind : ಯಕ್ಷಗಾನ ವೇಷತೊಟ್ಟ ನಟ ರಮೇಶ್ ಅರವಿಂದ್ : ಕಲಾವಿದರಿಗೆ ದೊಡ್ಡ ನಮಸ್ಕಾರ ಎಂದಿದ್ಯಾಕೆ ?

ಈ ದೇವಾಲಯದ ವಿಶೇಷವೆನೆಂದರೆ ಇದಕ್ಕೆ ಹಚ್ಚಿ ಇಟ್ಟ ದೀಪವು ವರ್ಷಪೂರ್ತಿ ಉರಿಯುತ್ತಾ ಇರುತ್ತದೆ. ಹೀಗೆ ವರ್ಷಕ್ಕೊಮ್ಮೆ ದೇಗುಲದ ಬಾಗಿಲನ್ನು ಅಲ್ಲಿಗೆ ಪ್ರಮುಖರಾದ ತಹಶಿಲ್ದಾರರು , ಕಮೀಶನರ್‌ ಮತ್ತು ಶಾಸಕರು ಮುಂತಾದವರ ಸಮ್ಮುಖದಲ್ಲಿ ತೆರೆಯಲಾಗುತ್ತದೆ.ಹಣ್ಣು, ತರಕಾರಿಯಿಂದ ದೇವಾಲಯವನ್ನು ಸಿಂಗರಿಸಲಾಗುತ್ತದೆ. ಬಾಗಿಲು ತೆಗೆದ ಸಂದರ್ಭದಲ್ಲಿ ದೇವರ ಭಾಗಿಲ ಮುಂಬಾಗದಲ್ಲಿ ಅಂದರೆ ದೇವಿಗೆ ಕಾಣುವಂತೆ ಬಾಳೆದಿಂಡನ್ನು ಕಡಿಯಲಾಗುತ್ತದೆ.

Hasanamba temple door opened after the year

Comments are closed.