India Vs Australia test : ಉಸ್ಮಾನ್ ಖವಾಜ ಭರ್ಜರಿ ಶತಕ, ಮೋದಿ ಸ್ಟೇಡಿಯಂನಲ್ಲಿ ಕಾಂಗರೂಗಳ ಆರ್ಭಟ, ಮೊದಲ ದಿನವೇ ಕೈಜಾರಿತಾ ಟೆಸ್ಟ್?

ಅಹ್ಮದಾಬಾದ್ : ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಉಸ್ಮಾನ್ ಖವಾಜ ಬಾರಿಸಿದ ಅಮೋಘ ಶತಕದ (Usman Khawaja’s brilliant century) ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡ ಅಹ್ಮದಾಬಾದ್ ಟೆಸ್ಟ್ ಪಂದ್ಯದ ಮೊದಲ ದಿನವೇ ಹಿಡಿತ ಸಾಧಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) 4ನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಕಾಂಗರೂಗಳ ಪರ ಇನ್ನಿಂಗ್ಸ್ ಆರಂಭಿಸಿದ ಉಸ್ಮಾನ್ ಖವಾಜ ಮತ್ತು ಟ್ರಾವಿಸ್ ಹೆಡ್ ಜೋಡಿ ಮೊದಲ ವಿಕೆಟ್’ಗೆ 61 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಟೀಮ್ ಇಂಡಿಯಾ ವಿಕೆಟ್ ಕೀಪರ್ ಕೆ.ಎಸ್ ಭರತ್ ಆರಂಭದಲ್ಲೇ ನೀಡಿದ ಜೀವದಾನವನ್ನು ಬಳಸಿಕೊಂಡ ಟ್ರಾವಿಡ್ ಹೆಡ್ 32 ರನ್ ಗಳಿಸಿದರು. ಈ ಜೋಡಿಯನ್ನು ಅಶ್ವಿನ್ ಬೇರ್ಪಡಿಸಿದ ನಂತರ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಮಾರ್ನಸ್ ಲಬುಶೇನ್ ಕೇವಲ 3 ರನ್ನಿಗೆ ಔಟಾದ್ರು.

ಆದರೆ 3ನೇ ವಿಕೆಟ್’ಗೆ ಉಸ್ಮಾನ್ ಖವಾಜ ಜೊತೆಗೂಡಿದ ಹಂಗಾಮಿ ನಾಯಕ ಸ್ವೀವನ್ ಸ್ಮಿತ್ (38 ರನ್) 79 ರನ್’ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಜಡೇಜ ದಾಳಿಯಲ್ಲಿ ಸ್ಮಿತ್ ಕ್ಲೀನ್ ಬೌಲ್ಡಾದ ನಂತರ ಕ್ರೀಸ್’ಗಿಳಿದ ಪೀಟರ್ ಹ್ಯಾಂಡ್ಸ್’ಕಾಂಬ್ 17 ರನ್ ಗಳಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಆಸ್ಟ್ರೇಲಿಯಾ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 170. ನಂತರ ಜೊತೆಯಾದ ಖವಾಜ ಮತ್ತು ಕ್ಯಾಮರೂನ್ ಗ್ರೀನ್ (ಅಜೇಯ 49 ರನ್) ಜೋಡಿ ಮುರಿಯದ 5ನೇ ವಿಕೆಟ್’ಗೆ 85 ರನ್ ಸೇರಿಸಿ ಭಾರತಕ್ಕೆ ಸಡ್ಡು ಹೊಡೆದು ನಿಂತಿದೆ.

ಆತಿಥೇಯರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಉಸ್ಮಾನ್ ಖವಾಜ ಟೆಸ್ಟ್ ವೃತ್ತಿಜೀವನದ 14ನೇ ಶತಕ ಬಾರಿಸಿ ಮಿಂಚಿದರು. 251 ಎಸೆತಗಳನ್ನೆದುರಿಸಿದ ಖವಾಜ 15 ಬೌಂಡರಿಗಳ ನೆರವಿನಿಂದ ಅಜೇಯ 104 ರನ್ ಗಳಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಪರ ವೇಗಿ ಮೊಹಮ್ಮದ್ ಶಮಿ 65 ರನ್ನಿಗೆ 2 ವಿಕೆಟ್ ಪಡೆದರೆ, ಸ್ಪಿನ್ನರ್’ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಉರುಳಿಸಿದ್ದಾರೆ.

ಇದನ್ನೂ ಓದಿ : ಮೊದಲ ಪ್ರೋಮೋ ರಿಲೀಸ್, ಭರ್ಜರಿ ಸ್ಟೆಪ್ಸ್ ಹಾಕಿದ ರೋಹಿತ್, ರಾಹುಲ್, ಪಾಂಡ್ಯ

ಇದನ್ನೂ ಓದಿ : India Vs Australia test : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಂದು ಲಕ್ಷ ಪ್ರೇಕ್ಷಕರು, ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ

Usman Khawaja’s brilliant century : India Vs Australia test : Usman Khawaja’s brilliant century, kangaroos roar at Modi Stadium, Kaijarita Test on the first day?

Comments are closed.