156 Kidney Stones From A Single Patient : ವ್ಯಕ್ತಿಯೊಬ್ಬನ ಮೂತ್ರಪಿಂಡದಿಂದ ಬರೊಬ್ಬರಿ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು ..!

ಹುಬ್ಬಳ್ಳಿ: ಮೂತ್ರಪಿಂಡದಲ್ಲಿ ಕಲ್ಲುಗಳು ಇರುವುದು, ಅದನ್ನು ಔಷಧಿ ಮೂಲಕವೋ ಅಥವಾ ಆಪರೇಷನ್​ ಮೂಲಕವೋ ವೈದ್ಯರು ತೆಗೆದು ಹಾಕುವುದು ಕಾಮನ್​ ವಿಚಾರ .ಆದರೆ ಹೈದರಾಬಾದ್​​ನಲ್ಲಿ ನಡೆದ ಘಟನೆಯೊಂದನ್ನು ಕೇಳಿದಲ್ಲಿ ನೀವು ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ..! ಏಕೆಂದರೆ ಕಿಡ್ನಿಯಲ್ಲಿ ಕಲ್ಲನ್ನು ಹೊಂದಿದ್ದ ವ್ಯಕ್ತಿಯಿಂದ ವೈದ್ಯರು ಒಂದಲ್ಲ ಎರಡಲ್ಲ ಬರೋಬ್ಬರಿ 156 ಮೂತ್ರಪಿಂಡದ ಕಲ್ಲುಗಳನ್ನು(156 Kidney Stones From A Single Patient) ತೆಗೆದು ಹಾಕಿದ್ದಾರೆ..!

50 ವರ್ಷದ ರೋಗಿಯೊಬ್ಬನ ಮೂತ್ರಪಿಂಡದಿಂದ ವೈದ್ಯರು ಇಷ್ಟೊಂದು ದೊಡ್ಡ ಮಟ್ಟದ ಮೂತ್ರಪಿಂಡದ ಕಲ್ಲುಗಳನ್ನು ತೆಗೆದು ಹಾಕಿದ್ದಾರೆ. ಅಂದಹಾಗೆ ಇದು ದೇಶದ ಇತಿಹಾಸದಲ್ಲಿಯೇ ಒಬ್ಬ ವ್ಯಕ್ತಿಯ ಮೂತ್ರಪಿಂಡದಿಂದ ತೆಗೆಯಲಾದ ಅತೀ ಹೆಚ್ಚು ಕಲ್ಲು ಎಂದು ಹೇಳಲಾಗಿದೆ.

ಈ ರೋಗಿಯ ದೇಹದಿಂದ ಮೂತ್ರಪಿಂಡದ ಕಲ್ಲುಗಳನ್ನು ಹೊರಹಾಕಲು ವೈದ್ಯರು ಶಸ್ತ್ರಚಿಕಿತ್ಸೆ ವಿಧಾನಕ್ಕೆ ಮೊರೆ ಹೋಗದೇ ಲ್ಯಾರಪೋಸ್ಕೋಪಿ ಹಾಗೂ ಎಂಡೋಸ್ಕೋಪಿ ವಿಧಾನವನ್ನು ಬಳಕೆ ಮಾಡಿದ್ದಾರೆ. ಬರೋಬ್ಬರಿ ಮೂರು ಗಂಟೆಗಳ ಕಾಲ ಈ ವೈದ್ಯಕೀಯ ವಿಧಾನವನ್ನು ಬಳಕೆ ಮಾಡಿಕೊಂಡ ವೈದ್ಯರು ಬರೋಬ್ಬರಿ 156 ಮೂತ್ರಪಿಂಡದ ಕಲ್ಲುಗಳನ್ನು ತೆಗೆದು ಹಾಕಿದ್ದಾರೆ.

ಹುಬ್ಬಳ್ಳಿ ಮೂಲದ ಶಾಲಾ ಶಿಕ್ಷಕ ಬಸವರಾಜ್​ ಮಡಿವಾಳರ್​ ಎಂಬವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಪ್ರೀತಿ ಆಸ್ಪತ್ರೆಗೆ ಭೇಟಿ ನೀಡಿದ ಬಸವರಾಜ್​ಗೆ ತಮ್ಮ ಮೂತ್ರಪಿಂಡ ದಲ್ಲಿ ಕಲ್ಲು ಬೆಳೆದಿದೆ ಎಂಬ ವಿಚಾರ ತಿಳಿದುಬಂದಿದೆ. ಅಲ್ಲದೇ ಇವರ ಮೂತ್ರಪಿಂಡ ಕೂಡ ಸರಿಯಾದ ಸ್ಥಳದಲ್ಲಿ ಇರಲಿಲ್ಲ. ಇದು ಹೊಟ್ಟೆ ನೋವಿಗೆ ಕಾರಣವಿಲ್ಲದೇ ಇದ್ದರೂ ಸಹ ಇಂತಹ ಪರಿಸ್ಥಿತಿಯಲ್ಲಿ ಮೂತ್ರಪಿಂಡದ ಕಲ್ಲುಗಳನ್ನು ತೆಗೆಯುವುದು ದೊಡ್ಡ ಸವಾಲಿನ ಕೆಲಸವೇ ಆಗಿತ್ತು.ಆದರೂ ಧೈರ್ಯ ಮಾಡಿ ಮುನ್ನುಗ್ಗಿದ ವೈದ್ಯರು ಕಿಡ್ನಿಯಲ್ಲಿದ್ದ ದಾಖಲೆಯ ಪ್ರಮಾಣದ ಕಲ್ಲುಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನು ಓದಿ : woman shoots at boyfriend : ಪ್ರೀತಿಯಲ್ಲಿ ಹೆಚ್ಚಿದ ಅಂತರ; ಪ್ರಿಯತಮೆಯಿಂದಲೇ ಪ್ರಿಯತಮನ ಮೇಲೆ ಫೈರಿಂಗ್​..!

ಇದನ್ನೂ ಓದಿ : Why Ceiling fans have 3 blades: ಸೀಲಿಂಗ್ ಫ್ಯಾನ್‌ಗೆ ಮೂರೇ ರೆಕ್ಕೆ ಇರುವುದೇಕೆ? ಎಲ್ಲರ ಬಾಲ್ಯದ ಪ್ರಶ್ನೆಗೆ ಇಲ್ಲಿದೆ ಉತ್ತರ

Doctors Remove Record Number Of 156 Kidney Stones From A Single Patient

Comments are closed.