Pushpa Movie Review : ಪುಷ್ಪಕ್ಕೆ ಸಿಗಲಿಲ್ಲ ಫುಲ್ ಮಾರ್ಕ್ಸ್: ಹೀರೋ ಬಿಲ್ಡಪ್ ಗೆ ಸೋತ ಪ್ರೇಕ್ಷಕ

ಒಳ್ಳೊಳ್ಳೆ ಹಿಟ್ ಸಿನಿಮಾ ನೀಡಿದ ನಿರ್ದೇಶಕರು ಹಾಗೂ ನಾಯಕ ನಟ ಒಂದೆಡೆ ಸೇರಿದಾಗ ಸಹಜವಾಗಿಯೇ ಆ ಸಿನಿಮಾದ ಮೇಲೆ ಪ್ರೇಕ್ಷಕರ ನೀರಿಕ್ಷೆ ಹೆಚ್ಚುತ್ತದೆ. ಪುಷ್ಪ ಸಿನಿಮಾದ ವಿಚಾರದಲ್ಲೂ ಆಗಿರೋದು ಇದೇ. (Pushpa Movie Review) ಆದರೆ ಪ್ರೇಕ್ಷಕರ ನೀರಿಕ್ಷೆ, ಸಿನಿಮಾ ರಿಲೀಸ್ ಗೂ ಮೊದಲ ಕೊಡಲಾದ ಬಿಲ್ಡಪ್ ಗೆ ಹೋಲಿಸಿದರೇ ಸಿನಿಮಾ ಅಂತಹ ಗಟ್ಟಿಯಾದ, ರೋಚಕ ಅನುಭವವನ್ನು ಅಥವಾ ದೊಡ್ಡ ಸ್ಮಂಗಿಂಗ್ ಕತೆಯನ್ನೋ ಹೇಳೋದ್ರಲ್ಲಿ ಯಶಸ್ವಿಯಾಗಿಲ್ಲ ( Pushpa The Rise Movie Reviews ) ಅನ್ನೋದು ಪ್ರೇಕ್ಷಕರ ಅಭಿಮತ.

ರಂಗಸ್ಥಲಂನಂತಹ ಹಿಟ್ ಚಿತ್ರದ ನೀಡಿದ ಸುಕುಮಾರ್ ಹಾಗೂ ಅಲಾ ವೈಕುಂಠಪುರಲೋದಂತಹ ಸಿನಿಮಾ ನೀಡಿದ ಅಲ್ಲೂ ಅರ್ಜುನ್ ಒಂದೆಡೆ ಸೇರಿದ್ದರಿಂದ ಪುಷ್ಪ ಸಿನಿಮಾದ ಮೇಲೆ ಪ್ರೇಕ್ಷಕರ ನೀರಿಕ್ಷೆ ಕೊಂಚ ಹೆಚ್ಚಿತ್ತು. ಆದರೆ ಮಾಮೂಲಿ ದಶಕಗಳ ಹಿಂದಿನ ರಕ್ತಚಂದನ ಕಳ್ಳ ಸಾಗಾಣಿಕೆಯ ಕತೆಯನ್ನು ಹೆಣೆದುಕೊಂಡ ಹೊರಟ ಸಿನಿಮಾದಲ್ಲಿ ಹೀರೋನ ಬಿಲ್ಡಪ್ ಗಳೇ ಕತೆಗಿಂತ ಜಾಸ್ತಿ ಮಾತನಾಡಿವೆ. ಪುಷ್ಪ ಸಿಕ್ವೆನ್ಸ್ ಟೂ ಕೂಡ ತೆರೆಗೆ ಬರಲಿರೋದರಿಂದ ಸಿನಿಮಾದ ಕೆಲವು ಪಾತ್ರ ಹಾಗೂ ಸನ್ನಿವೇಶವನ್ನು ಪಾರ್ಟ್ ಎರಡರಲ್ಲಿ ಬಳಸಿಕೊಳ್ಳಲೆಂದೇ ಸೃಷ್ಟಿಸಿದಂತಿದೆ.

ಗಟ್ಟಿಯಾದ ಅಥವಾ ವಿಮರ್ಶೆಗೆ ಒಗ್ಗಿಕೊಳ್ಳುವಂತಹ ಕಥೆಯನ್ನು ಕಟ್ಟುವುದರಲ್ಲಿ ನಿರ್ದೇಶಕರು ಎಡವಿದ್ದಾರೆ. ರಕ್ತಚಂದನದ ಮಹತ್ವ, ಅದರ ಪ್ರಾಮುಖ್ಯತೆಗೆ ಕಾರಣವನ್ನಾದರೂ ಸಮರ್ಥವಾಗಿ ಕಟ್ಟಿಕೊಡಬಹುದಿತ್ತು. ಅದು ಕೂಡ ಚಿತ್ರದಲ್ಲಿಲ್ಲ.ಕಥಾನಾಯಕ ರಕ್ತಚಂದನವನ್ನು ಹೇಗೆ ಕಳ್ಳಸಾಗಾಣಿಕೆ ಮಾಡುತ್ತಾನೆ. ಹೇಗೆ ಪೊಲೀಸರ ಕಣ್ಣುತಪ್ಪಿಸಿ ವ್ಯವಹಾರ ನಡೆಯುತ್ತದೆ. ಇದಕ್ಕೆ ರಾಜಕಾರಣಿಗಳ ಬೆಂಬಲ ಇಂತಹ ಸಾಮಾನ್ಯವಾದ ವಿಚಾರವನ್ನೇ ಪುಷ್ಪ ಸಿನಿಮಾ ಕೂಡ ತೆರೆಮೇಲೆ ತಂದಿದೆ‌. ಇನ್ನು ತಮ್ಮ ಪಾತ್ರದಲ್ಲಿ ಪರಕಾಯಪ್ರವೇಶ ಪಡೆದಂತೆ ನಟಿಸಿರುವ ಅಲ್ಲು ಅರ್ಜುನ್ ಈ ಭಾರಿ ಡ್ಯಾನ್ಸ್ ಗಿಂತ ಹೆಚ್ಚು ನಟನೆಯಲ್ಲಿ ಗಮನ ಸೆಳೆಯುತ್ತಾರೆ.

ಅದರಲ್ಲೂ ಪುಷ್ಪ ಅಂದ್ರೇ ಹೂವು ಅಂದ್ಕೊಂಡ್ಯಾ ಅಲ್ಲಾ ಫೈರ್ ಅನ್ನೋವಂತ ಡೈಲಾಗ್ ಗಳು ಗಮನ ಸೆಳೆಯುತ್ತವೆ. ಅಷ್ಟೇ ಅಲ್ಲ ಚಿತ್ತೂರು ಶೈಲಿಯಲ್ಲಿ ತೆಲುಗು ಮಾತನಾಡುವ ಮೂಲಕ ಅಲ್ಲು ಅರ್ಜುನ್ ಮತ್ತಷ್ಟು ಅವರಿಸಿಕೊಳ್ಳುತ್ತಾರೆ. ಅಲ್ಲದೇ ಮೊದಲ ಬಾರಿಗೆ ಡಿ ಗ್ಲ್ಯಾಮರ್ ಪಾತ್ರದಲ್ಲೂ ಅಲ್ಲು ಮನತಟ್ಟುತ್ತಾರೆ. ಇನ್ನು ನಾಯಕಿ ರಶ್ಮಿಕಾ ಮಂದಣ್ಣ ಕೂಡ ಡಿಗ್ಲ್ಯಾಮರ್ ಪಾತ್ರದಲ್ಲಿ ನಟಿಸಿದ್ದು ಎರಡು ಹಾಡು ಹಾಗೂ ಒಂದಿಷ್ಟು ಸೀನ್ ಗಳಲ್ಲಿ ಮಾತ್ರ ಕಾಣಿಸುತ್ತಾರೆ.

ಕತೆ ತುಂಬ ಪೇವಲವಾಗಿ ಎಳೆದುಕೊಂಡು ಹೋದಂತೆ ಪ್ರೇಕ್ಷಕರಿಗೆ ಭಾಸವಾಗುತ್ತ ಹೋಗುವ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಡಾಲಿ ಧನಂಜಯ್ ಹಾಗೂ ಪೊಲೀಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಫಹಾದ್ ಫಾಸಿಲ್ ಗಮನ ಸೆಳೆಯುತ್ತಾರೆ. ಇನ್ನು ಸಮಂತಾ ನಟನೆಯ ಊ ಅಂಟಾವಾ ಮಾಮಾ ಉಹೂಂ ಅಂಟಾವಾ ಹಾಡು ಕಿವಿ-ಕಣ್ಣುಗಳಿಗೆ ಹಬ್ಬದ ಅನುಭವಕೊಟ್ಟರು ಕಥೆಗೆ ಲಿಂಕ್ ಆಗುವಲ್ಲಿ ಎಡವಿದೆ.ಶೇಷಾಚಲಂ‌ಕಾಡಿನಲ್ಲಿ ರಕ್ತಚಂದನ ಸಾಗಾಣಿಕೆಯಿಂದ ಸಾಮ್ರಾಜ್ಯ ಕಟ್ಟುವ ಪುಷ್ಪ ಎಂಬ ಈ ಕಾಡಿನ ರಾಜ ಶ್ರೀಮಂತನಾದ ಮೇಲೆ ಹೇಗೆ ಮೆರೆದ ಎಂಬ ಸಂಗತಿಯನ್ನು ಚಿತ್ರತಂಡ ಎರಡನೇ ಭಾಗದಲ್ಲಿ ತೋರಿಸಲಿದೆ ಎನ್ನಲಾಗಿದೆ.

ಛಾಯಾಗ್ರಹಣ,ಸಂಗೀತಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದು, ಅನಗತ್ಯವಾದ ಡೈಲಾಗ್, ಹೀರೋನ ಓವರ್ ಬಿಲ್ಡಪ್ ಸೀನ್ ಗಳು ಇಲ್ಲದಿದ್ದರೇ ಪ್ರೇಕ್ಷಕರು ಪುಷ್ಪ ಅಲ್ಲ ಇದು ಫೈರ್ ಫೈರ್ ಎನ್ನುತ್ತಿದ್ದರೇನೋ ಆದರೆ ಹಲವು ಅನಗತ್ಯ ಸೀನ್ ಡೈಲಾಗ್ ಗಳಿಂದ ಸಿನಿಮಾ ನೋಡಗರ ಎವರೇಜ್ ಮಾರ್ಕ್ಸ್ ಪಡೆಯಲಷ್ಟೇ ಸಾಧ್ಯವಾಗಿದೆ.

ಇದನ್ನೂ ಓದಿ : Oo Antava Pushpa Songs : ಐಕಾನ್ ಸ್ಟಾರ್ ಜೊತೆ ಸಮಂತಾ ರೋಮಾನ್ಸ್ : ದಾಖಲೆ ಬರೆದ ಐಟಂ ಸಾಂಗ್

ಇದನ್ನೂ ಓದಿ : ಪುಷ್ಪ ಸಿನಿಮಾಕ್ಕೆ ಬಂದ್ರು‌ ಮಂಗ್ಲಿ ಸಹೋದರಿ: ಸಮಂತಾ ಡ್ಯಾನ್ಸ್ ಗೆ ಇಂದ್ರಾವತಿ ಚೌಹ್ಹಾಣ ಧ್ವನಿ

( Pushpa The Rise Movie Reviews Its Allu Arjun’s Show All the Way)

Comments are closed.