Gen Bipin Rawat :ಸೋಶಿಯಲ್​ ಮೀಡಿಯಾದಲ್ಲಿ ಜನರಲ್​ ಬಿಪಿನ್​ ರಾವತ್​​ರಿಗೆ ಅಪಮಾನ ಮಾಡಿದ್ದ ಮಹಿಳೆಗೆ ಜಾಮೀನು

ಸಿಡಿಎಸ್​ ಜನರಲ್​​ ದಿವಂಗತ ಬಿಪಿನ್​ ರಾವತ್​​ರನ್ನು(Gen Bipin Rawat) ಸೋಶಿಯಲ್​ ಮೀಡಿಯಾದಲ್ಲಿ ಯುದ್ಧ ಅಪರಾಧಿ ಎಂದು ಜರಿದು ಜೈಲುಪಾಲಾಗಿದ್ದ ಹಾಜಿ ಪಬ್ಲಿಕ್​ ಸ್ಕೂಲ್​​ನ ಮಾಜಿ ನಿರ್ದೇಶಕಿ ಸಭಾ ಹಾಜಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್​ 8ರಂದು ತಮಿಳುನಾಡಿನ ಕೂನುರ್​ನಲ್ಲಿ ನಡೆದ ಹೆಲಿಕಾಪ್ಟರ್​ ದುರಂತದಲ್ಲಿ ಬಿಪಿನ್​ ರಾವತ್​ ಮೃತಪಟ್ಟ ದಿನದಂದೇ ಸಭಾ ಹಾಜಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.


ಸಭಾರ ಪೋಸ್ಟ್​ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗಿತ್ತು. ನೆಟ್ಟಿಗರು ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕೆಂದು ಪಟ್ಟು ಹಿಡಿದಿದ್ದರು. ಈ ವಿಷಯ ಸಾಕಷ್ಟು ಸಂಚಲನ ಮೂಡಿಸಿದ ಬೆನ್ನಲ್ಲೇ ಜಮ್ಮು & ಕಾಶ್ಮೀರದ ದೋಡಾ ಜಿಲ್ಲೆಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್​ ಹಾಜಿ ವಿರುದ್ಧ ತನಿಖೆಗೆ ಆದೇಶಿಸಿದ್ದರು.


ಡಿಸೆಂಬರ್​ 14ರಿಂದ 17ರವರೆಗೆ ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ ದೋಡಾದ ಮಹಿಳಾ ಪೊಲೀಸ್​ ಠಾಣೆಯಲ್ಲಿ ಹಾಜರಿರಬೇಕು ಹಾಗೂ ಡಿಸೆಂಬರ್​ 17ರಂದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್​ ಮುಂದೆಯೂ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಹಾಜಿಗೆ ಜಾಮೀನು ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಹಾಜಿ ಸೋಶಿಯಲ್​ ಮೀಡಿಯಾ ಪೋಸ್ಟ್​ ವೈರಲ್​ ಆಗುತ್ತಿದ್ದಂತೆಯೇ ಅನೇಕರು ಆಕೆ ಶಿಕ್ಷಕಿ ಹಾಗೂ ನಿರ್ದೇಶಕಿಯಾಗಿದ್ದ ದೋಡಾದ ಹಾಜಿ ಪಬ್ಲಿಕ್​ ಶಾಲೆಯನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದರು. ಈ ಕೂಗು ಹೆಚ್ಚಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಶಾಲೆಯ ಆಡಳಿತ ಮಂಡಳಿ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​ ಅವರ ಬಗ್ಗೆ ಸಭಾ ನೀಡಿರುವ ಹೇಳಿಕೆಯು ಶಾಲೆಯ ದೃಷ್ಟಿಕೋನವಲ್ಲ ಎಂದು ಹೇಳಿದೆ.

ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್​ ದುರಂತದಲ್ಲಿ ಜನರಲ್​ ಬಿಪಿನ್​ ರಾವತ್​ ಅವರ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ 13 ಮಂದಿ ಅವಘಡ ನಡೆದ ದಿನವೇ ಮೃತಪಟ್ಟಿದ್ದರು. ಈ ದುರಂತದಲ್ಲಿ ಗಾಯಗೊಂಡಿದ್ದ ಏಕೈಕ ಸೇನಾನಿ ಗ್ರೂಪ್ ಕ್ಯಾಪ್ಟನ್​ ವರುಣ್​ ಸಿಂಗ್ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

Woman who insulted Gen Bipin Rawat on social media released on bail

ಇದನ್ನು ಓದಿ :Woman consumes sanitiser : ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನ: ಮಹಿಳೆಯನ್ನು ಖಾಕಿ ರಕ್ಷಿಸಿದ ಪರಿಯೇ ರೋಚಕ

ಇದನ್ನೂ ಓದಿ : woman shoots at boyfriend : ಪ್ರೀತಿಯಲ್ಲಿ ಹೆಚ್ಚಿದ ಅಂತರ; ಪ್ರಿಯತಮೆಯಿಂದಲೇ ಪ್ರಿಯತಮನ ಮೇಲೆ ಫೈರಿಂಗ್​..!

Comments are closed.