ಕನ್ನಡದಲ್ಲೇ ಐಎಎಸ್ ಬರೆಯಬೇಕಾ ? ಇಲ್ಲಿದೆ ಸರಳವಾದ ಟಿಪ್ಸ್

IAS Exams write in Kannada : ಭಾರತದ ಆಡಳಿತಾತ್ಮಕ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡುವ ಸಲುವಾಗಿ ಯೂನಿಯನ್ ಪಬ್ಲಿಕ್ ಕಮಿಷನ್ ನಡೆಸುವ ಪರೀಕ್ಷೆಯೇ ಐಎಎಸ್ ಪರೀಕ್ಷೆ (IAS Exams). ಭಾರತದಲ್ಲಿ ಪ್ರತಿ ವರ್ಷ ಐಎಎಸ್ ನಲ್ಲಿ ಉತ್ತೀರ್ಣರಾಗುವವರ ಪ್ರಮಾಣ ಸಾಕಷ್ಟಿದ್ದರೂ ಮಾಹಿತಿ ಕೊರತೆಯಿಂದ ಪರೀಕ್ಷೆ ಎದುರಿಸಲಾಗದೇ ಉಳಿದು ಹೋಗುವವರೇ ಹೆಚ್ಚು.

IAS Exams write in Kannada : ಭಾರತದ ಆಡಳಿತಾತ್ಮಕ ಹುದ್ದೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡುವ ಸಲುವಾಗಿ ಯೂನಿಯನ್ ಪಬ್ಲಿಕ್ ಕಮಿಷನ್ ನಡೆಸುವ ಪರೀಕ್ಷೆಯೇ ಐಎಎಸ್ ಪರೀಕ್ಷೆ (IAS Exams). ಭಾರತದಲ್ಲಿ ಪ್ರತಿ ವರ್ಷ ಐಎಎಸ್ ನಲ್ಲಿ ಉತ್ತೀರ್ಣರಾಗುವವರ ಪ್ರಮಾಣ ಸಾಕಷ್ಟಿದ್ದರೂ ಮಾಹಿತಿ ಕೊರತೆಯಿಂದ ಪರೀಕ್ಷೆ ಎದುರಿಸಲಾಗದೇ ಉಳಿದು ಹೋಗುವವರೇ ಹೆಚ್ಚು. ಅದರಲ್ಲೂ ಈಗ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ.ಹೀಗಾಗಿ ಇನ್ನಷ್ಟು ಅಭ್ಯರ್ಥಿಗಳು ಐಎಎಸ್ ನತ್ತ ಆಸಕ್ತಿ ತೋರುತ್ತಿದ್ದಾರೆ. ಹಾಗಿದ್ದರೇ ಕನ್ನಡದಲ್ಲಿ ಐಎಎಸ್ ಬರೆಯಲು ನೀವೇನು ಮಾಡಬೇಕು? ಇಲ್ಲಿದೆ ನಿಮಗಾಗಿ ಸರಳ ಟಿಪ್ಸ್.

IAS Exams write in Kannada Here are some simple tips
Image credit to Original Source

ಭಾಷೆ ಮಾಧ್ಯಮ ಯಾವುದೇ ಇರಲಿ, ಐಎಎಸ್ ಬರೆಯಲು ಬೇಕಿರೋದು ಶೃದ್ಧೆ ಮತ್ತು ಆಸಕ್ತಿ. ನೀವು ಪರೀಕ್ಷೆ ಬರೆಯುವ ಮುನ್ನ ಒಂದಿಷ್ಟು ನಿಯಮ ಗಳನ್ನು ಅನುಸರಿಸಬೇಕು. ನಿಗದಿತ ಸಮಯದಲ್ಲಿ ಅಧ್ಯಯ‌ನ. ಎಲ್ಲ ವಿಷಯಗಳ ಬಗ್ಗೆ ಜ್ಞಾನ ಹೊಂದಿರಬೇಕು. ಇದರ ಜೊತೆ ನೀವು ಕನ್ನಡದಲ್ಲಿ ಐಎಎಸ್ ಬರೆಯುವ ಮುನ್ನ ನಿಮ್ಮ ಬರವಣಿಗೆ ಹಾಗೂ ಅಧ್ಯಯನದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು.

ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮೊದಲು ತಮ್ಮ ಬರವಣಿಗೆ ವೇಗ ಹೆಚ್ಚಿಸಿಕೊಳ್ಳಲೇಬೇಕು. ಇದಕ್ಕೆ ಆರಂಭದಿಂದಲೇ ತಯಾರಿ ನಡೆಸಬೇಕಾಗುತ್ತದೆ. ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡ ಬರವಣಿಗೆ ನಿಧಾನವಾಗುತ್ತದೆ. ಇಂಗ್ಲಿಷ್‌ ಉತ್ತರವನ್ನು ಎಂಟು ನಿಮಿಷದಲ್ಲಿ ಬರೆದರೆ ಕನ್ನಡದಲ್ಲಿ ಅದನ್ನೇ ಬರೆಯಲು ಹತ್ತು ನಿಮಿಷ ಬೇಕಾಗುತ್ತದೆ. ಅದಕ್ಕೆ ಪ್ರತಿ ದಿನ ಎರಡರಿಂದ ಮೂರು ಪ್ರಶ್ನೆಗಳಿಗೆ ಕನಿಷ್ಠ ಮೂರರಿಂದ ನಾಲ್ಕು ಪುಟಗಳಷ್ಟು ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಬರೆಯುವ ವೇಗ ಹೆಚ್ಚಾಗುತ್ತದೆ ಮಾತ್ರವಲ್ಲ ಅಕ್ಷರಗಳು ಸುಂದರವಾಗುತ್ತದೆ. ಇದು ನಿಮಗೆ ಅಂಕಗಳನ್ನು ತಂದುಕೊಡಲು ನೆರವಾಗುತ್ತದೆ.

ಇದನ್ನೂ ಓದಿ : ಶಾಲೆಗಳಿಗೆ ಸರಕಾರದ ಹೊಸ ರೂಲ್ಸ್‌ : ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ

ಇನ್ನೂ ನೀವು ಸಾಮಾನ್ಯ ಜ್ಞಾನದ ಪತ್ರಿಕೆಯನ್ನು ಕನ್ನಡದಲ್ಲೇ ಬರೆಯೋದಾದರೇ, ಅದಕ್ಕೆ ನೀವು ಕನ್ನಡದಲ್ಲೇ ಬರೆಯಲು ಪ್ರೀಪೇರ್ ಆಗಬೇಕು. ಅಂದ್ರೇ ಸಾಮಾನ್ಯ ಜ್ಞಾನದ ಬಹುತೇಕ ಮಾಹಿತಿಗಳು ಇಂಗ್ಲೀಷ್ ನಲ್ಲೇ ಇರುತ್ತದೆ. ಅದನ್ನು ನೀವು ಇಂಗ್ಲೀಷ್ ನಲ್ಲಿ ಓದಿಕೊಂಡು ಅರ್ಥೈಸಿಕೊಳ್ಳಬೇಕು. ಅಥವಾ ಇಂಗ್ಲಿಷ್‌ನಲ್ಲಿ ಓದಿರುವುದನ್ನು ಕನ್ನಡಕ್ಕೆ ಅನುವಾದಿಸಿಕೊಂಡು ಅಥವಾ ಕನ್ನಡದಲ್ಲಿ ಅರ್ಥ ಮಾಡಿಕೊಂಡು ಓದಬೇಕು. ವಾಕ್ಯಗಳನ್ನು ಕೂಡ ಕನ್ನಡದಲ್ಲಿ ಬರೆಯಬೇಕು. ಅಷ್ಟೇ ಅಲ್ಲ, ಕೆಲವು ಟೆಕ್ನಿಕಲ್‌ ಪದಗಳನ್ನು ಕನ್ನಡದಲ್ಲಿ ಅರ್ಥ ಮಾಡಿಕೊಂಡು ಅವುಗಳನ್ನು ನೋಟ್‌ ಮಾಡಿಟ್ಟುಕೊಂಡು ಅದರ ಅರ್ಥ ತಿಳಿದುಕೊಳ್ಳಬೇಕು. ಅಲ್ಲದೇ ಅದನ್ನು ಕನ್ನಡದಲ್ಲಿ ಸಮರ್ಥವಾಗಿ ಬರೆಯಲು ಕಲಿಯಬೇಕು.

IAS Exams write in Kannada Here are some simple tips
Image credit to Original Source

ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯನ್ನಾಗಿ ಆಯ್ಕೆ ಮಾಡಿಕೊಂಡರೆ ಹಳೆಗನ್ನಡ ವಿಷಯಗಳಿಗೆ ಹೆಚ್ಚು ಗಮನ ನೀಡಲೇಬೇಕು. ಹಳೆಗನ್ನಡವನ್ನು ಅಷ್ಟು ಸುಲಭವಾಗಿ ನೆನಪಿಟ್ಟುಕೊಳ್ಳುವುದು ಕಷ್ಟ. ಅದಕ್ಕೆ ಅದರಲ್ಲಿ ಪ್ರಮುಖವಾದ ವಿಷಯಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ಪಂಪ ‘ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎನ್ನುತ್ತಾನೆ. ಪಂಪಭಾರತ, ಹರಿಶ್ಚಂದ್ರ ಕಾವ್ಯ ಯಾವುದೇ ಆಗಿರಲಿ, ಅವುಗಳಲ್ಲಿ 20ರಿಂದ 25 ಪ್ರಮುಖ ವಾಕ್ಯಗಳಿರುತ್ತವೆ. ಅವುಗಳನ್ನು ನೋಟ್‌ ಮಾಡಿಕೊಂಡು ಅರ್ಥ ಸಹಿತ ಕಲಿತಿರಬೇಕು.

ಜೊತೆಗೆ ಅವುಗಳನ್ನು ಪರೀಕ್ಷೆಯಲ್ಲಿ ಯಾವ ಪ್ರಶ್ನೆಗೆ ಯಾವ ಸಂದರ್ಭದಲ್ಲಿ ಬಳಸಬಹುದು ಎಂಬುದನ್ನೂ ತಿಳಿದಿರಬೇಕು. ಕೋಚಿಂಗ್‌ ಸೆಂಟರ್‌ನಲ್ಲಿ ಟೆಸ್ಟ್‌ ಸೀರಿಸ್‌ ತೆಗೆದುಕೊಳ್ಳಿ. ಉತ್ತಮ ಕಂಟೆಂಟ್‌ನೊಂದಿಗೆ ನಿರಂತರವಾಗಿ ಮೂರು ತಾಸು ಬರೆಯಬೇಕು. ಹಳೇ ಗನ್ನಡದ ಪ್ರಮುಖ ಕಾವ್ಯದ ತುಣುಕುಗಳನ್ನು, ಶಬ್ದಗಳನ್ನು ಹಾಗೂ ಸಾಲುಗಳನ್ನು ಉಲ್ಲೇಖಿಸಿ ಬರೆದು ಅವುಗಳ ಅರ್ಥ ವಿವರಿಸಬೇಕು.

ಇದನ್ನೂ ಓದಿ : ಅನುದಾನಿತ ಶಾಲಾ ಮಹಿಳಾ ಶಿಕ್ಷಕಿಯರಿಗೆ ಗುಡ್‌ನ್ಯೂಸ್‌ : ಶಿಶುಪಾಲನಾ ರಜೆ ಮಂಜೂರು ಮಾಡಿದ ಕರ್ನಾಟಕ ಸರಕಾರ

ಎಲ್ಲದಕ್ಕಿಂತ ಮುಖ್ಯವಾಗಿ ಬರವಣಿಗೆಯ ವೇಗ. ಯಾಕೆಂದರೇ ಕನ್ನಡದಲ್ಲಿ ನೀವು ಪರೀಕ್ಷೆ ಬರೆದಾಗ ಭಾಷಾ‌ಶುದ್ಧತೆ, ಶಬ್ದಜೋಡಣೆ ಹಾಗೂ ಸ್ಪಷ್ಟವಾದ ಬರವಣಿಗೆ ಹಾಗೂ ಅಕ್ಷರದ ಸೌಂದರ್ಯ ಹೀಗೆ ಎಲ್ಲದಕ್ಕೂ ಮಹತ್ವವಿದೆ ಮತ್ತು ಪರಿಗಣಿಸಲಾಗುತ್ತದೆ. ಹೀಗಾಗಿ ಕನ್ನಡದಲ್ಲಿ ಬರೆಯುವ ಮುನ್ನ ನೀವು ಈ ಎಲ್ಲ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ : ರಾಜ್ಯ ಪಠ್ಯಕ್ರಮಕ್ಕೆ ಅನುಮತಿ, ಕೇಂದ್ರ ಪಠ್ಯಕ್ರಮ ಬೋಧನೆ: ಪರೀಕ್ಷಾ ಎಡವಟ್ಟಿನಿಂದ ಬಯಲಾಯ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಅಕ್ರಮ

IAS Exams write in Kannada? Here are some simple tips

Comments are closed.