Car-truck Accident: ಛತ್ತೀಸ್‌ಗಢದಲ್ಲಿ ಕಾರು-ಟ್ರಕ್ ಢಿಕ್ಕಿ: ತಾಯಿ, ಮಗ ಸೇರಿ ನಾಲ್ವರು ಸಾವು

ಛತ್ತೀಸ್‌ಗಢ: (Car-truck Accident) ಟ್ರಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮತ್ತು ಆಕೆಯ ಮಗ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮೃತರನ್ನು ಸಿಮ್ರಾನ್ ಸಲೂಜಾ (48 ವರ್ಷ), ಆಕೆಯ ಮಗ ರಾಜವೀರ್ ಸಲೂಜಾ (19 ವರ್ಷ), ಅಶೋಕ್ ಮತ್ತು ಉಮೇಶ್ ಸಾಹು (24 ವರ್ಷ) ಎಂದು ಗುರುತಿಸಲಾಗಿದೆ.

ರಾಜಧಾನಿ ರಾಯ್‌ಪುರದಿಂದ ಕಾರಿನಲ್ಲಿ ಬಲೋದ್‌ಗೆ ತೆರಳುತ್ತಿದ್ದಾಗ ಗುಂಡರ್‌ದೇಹಿ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ಪರವಾಡ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಬಲೋದ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಲೋಡ್ ನಿವಾಸಿಗಳಾದ ಮಹಿಳೆ ಮತ್ತು ಅವರ ಮಗ ತನ್ನ ಕಾರಿನಲ್ಲಿ ಕುಟುಂಬ ಕೆಲಸಕ್ಕಾಗಿ ರಾಯ್‌ಪುರಕ್ಕೆ ತೆರಳಿದ್ದರು. ರಾಯ್‌ಪುರದಲ್ಲಿ ಅವರ ಕಾರು ಕೆಟ್ಟುಹೋದ ನಂತರ, ಅವರು ಮತ್ತೊಂದು ಕಾರನ್ನು ಬಾಡಿಗೆಗೆ ತೆಗೆದುಕೊಂಡು ತಮ್ಮ ಚಾಲಕ ಅಶೋಕ್‌ನೊಂದಿಗೆ ಮನೆಗೆ ಮರಳುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಎದುರಿನಿಂದ ಬಂದ ಟ್ರಕ್‌ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

“ಎದುರು ದಿಕ್ಕಿನಿಂದ ಬರುತ್ತಿದ್ದ ಕಬ್ಬಿಣದ ಅದಿರು ತುಂಬಿದ ಟ್ರಕ್‌ಗೆ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ” ಎಂದು ಅಧಿಕಾರಿಗಳು ಹೇಳಿದರು. ಮಾಹಿತಿ ತಿಳಿದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ ಎಂದು ತಿಳಿಸಿದ್ದಾರೆ. ಅಪಘಾರ ಸಂಭವಿಸುತ್ತಿದ್ದಂತೆ ಟ್ರಕ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ : Mangaluru student died: ಆಟೋ ಚಾಲಕನ ನಿರ್ಲಕ್ಷ್ಯ: ಜೀವ ಕಳೆದುಕೊಂಡ ವಿದ್ಯಾರ್ಥಿ

ಇದನ್ನೂ ಓದಿ : Ayushman Bharat scheme scam: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವಂಚನೆ: 13 ಆಸ್ಪತ್ರೆಗಳ ವಿರುದ್ಧ ಕ್ರಮ

ಇದನ್ನೂ ಓದಿ : Acid attack: ಮಹಿಳೆ ಮಕ್ಕಳು ಸೇರಿ ನಾಲ್ವರ ಮೇಲೆ ಆಸಿಡ್‌ ದಾಳಿ

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಸ್ಥಳದಿಂದ ಪರಾರಿಯಾಗಿರುವ ಟ್ರಕ್ ಚಾಲಕನನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Car-truck Accident: Car-truck collision in Chhattisgarh: Mother, son, four killed

Comments are closed.