ಅಕ್ರಮ ಗ್ರಾನೈಟ್‌ ಸಾಗಾಟ : ಮೂರು ಲಾರಿ ವಶ, ಒಬ್ಬಂಟಿ ಕಾರ್ಯಾಚರಣೆ ನಡೆಸಿದ ಭೂ ವಿಜ್ಞಾನಿ ಸಂತೋಷ್

ತುಮಕೂರು : ಆಂಧ್ರದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಗ್ರಾನೈಟ್‌ ಸಾಗಾಟ (Illegal granite shipping) ಮಾಡುತ್ತಿದ್ದ ಲಾರಿಗಳನ್ನು ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದ ಘಟನೆ ತುಮಕೂರಿನ ಕೊರಟಗೆರೆ ಬಳಿಯಲ್ಲಿ ನಡೆದಿದೆ. ಭೂ ವಿಜ್ಞಾನಿ ಸಂತೋಷ್‌ ಅವರು ಏಕಾಂಕಿಯಾಗಿ ಕಾರ್ಯಾಚರಣೆ ನಡೆಸಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Illegal granite shipping lonely operation by officer Santosh 2

ನಿತ್ಯವೂ ಆಂಧ್ರದಿಂದ ಗ್ರಾನೈಟ್‌ ಕಲ್ಲುಗಳನ್ನು ಕರ್ನಾಟಕಕ್ಕೆ ಸಾಗಾಟ ಮಾಡಲಾಗುತ್ತಿತ್ತು. ಆದರೆ ಅಕ್ರಮವಾಗಿ, ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯ ಮೇರೆಗೆ ತುಮಕೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸಂತೋಷ್‌ ಎಂಬವರು ತಡರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ.

Illegal granite shipping lonely operation by officer Santosh 1

ಈ ವೇಳೆಯಲ್ಲಿ ಒಂದು ಲಾರಿಯಲ್ಲಿ ಅಕ್ರಮವಾಗಿ ಗ್ರಾನೈಟ್‌ ಕಲ್ಲು ಸಾಗಾಟ ಮಾಡುತ್ತಿದ್ರೆ, ಮತ್ತೊಂದು ಲಾರಿಯಲ್ಲಿ ಓವರ್‌ ಲೋಡ್‌ ಆಗಿ ಸಾಗಿಸಲಾಗುತ್ತಿತ್ತು. ಅಲ್ಲದೇ ಮತ್ತೊಂದು ಲಾರಿಯಲ್ಲಿ ಪರವಾನಿಗೆ ಅವಧಿ ಮುಗಿದಿದ್ದರೂ ಕೂಡ ಗ್ರಾನೈಟ್‌ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.‌ ಭೂ ವಿಜ್ಞಾನಿ ಸಂತೋಷ್‌ ಅವರ ಕಾರ್ಯಕ್ಕೆ ಇದೀಗ ಮೇಲಾಧಿಕಾರಿಗಳು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕೊರೋನಾ ಬಳಿಕ ಮೊದಲ ಕರಗ : ಉತ್ಸವಕ್ಕೆ ಭರದಿಂದ ನಡೆದಿದೆ ಸಿದ್ಧತೆ

ಇದನ್ನೂ ಓದಿ : ಅನ್ನಭಾಗ್ಯ ಅಕ್ಕಿ ಸಾಗಾಟದ ಲಾರಿ ಚಾಲಕನಿಗೆ ಹಲ್ಲೆ

( Illegal granite shipping lonely operation by officer Santosh )

Comments are closed.