School fees mandatory : ಪರೀಕ್ಷೆ ಹೊತ್ತಲ್ಲಿ ಪೋಷಕರ ಪರದಾಟ: ಫೀಸ್ ಕಟ್ಟಿದ್ರೇ ಮಾತ್ರ ಹಾಲ್ ಟಿಕೇಟ್ ಎಂದ ಸ್ಕೂಲ್ ಗಳು

ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಬಹುತೇಕ ಸ್ಥಗಿತವಾಗಿದ್ದ ರಾಜ್ಯದ ಶಾಲೆಗಳು ಪುನರಾರಂಭಗೊಂಡಿದೆ. ಹೀಗೆ ಆರಂಭಗೊಂಡ ಶಾಲೆಗಳು ಕೊರೋನಾದಿಂದ ಈಗಾಗಲೇ ಕಂಗೆಟ್ಟ ಪೋಷಕರು ಹಾಗೂ ಮಕ್ಕಳಿಗೆ ಧೈರ್ಯ ತುಂಬೋ ಬದಲು ಫೀಸ್ (School fees) ವಿಚಾರವನ್ನು ಮುಂದಿಟ್ಟುಕೊಂಡು ಮಕ್ಕಳನ್ನು ಬ್ಲಾಕ್‌ಮೇಲ್ ಮಾಡಲಾರಂಭಿಸಿದೆ.

ಕೊರೊನಾ ಕೇಸ್ ಕಡಿಮೆಯಾಗುತ್ತಿದ್ದಂತೆ ಆರಂಭಗೊಂಡ ಶಾಲೆಗಳಲ್ಲಿಗ ಪರೀಕ್ಷಾ ಪರ್ವ. ಆದರೆ ಪರೀಕ್ಷೆ ಬರೆಯೋ ಹೊತ್ತಲ್ಲಿ ಮಕ್ಕಳು ಹಾಗೂ ಪೋಷಕರೊಂದಿಗೆ ಶಿಕ್ಷಣ ಸಂಸ್ಥೆಗಳು ಖ್ಯಾತೆ ತೆಗೆದಿವೆ. ಪರೀಕ್ಷೆ ಬರೆಯ ಬೇಕು ಅಂದ್ರೆ ಫುಲ್ ಫೀಸ್ ಕಟ್ಟಲೇಬೇಕು. ಇಲ್ಲವಾದಲ್ಲಿ 1-10ನೇ ತರಗತಿ ಹಾಲ್ ಟಿಕೆಟ್ ಇಲ್ಲ (exam hall tickets), ಪರೀಕ್ಷೆಗೆ ಅವಕಾಶವೂ ಕೊಡುತ್ತಿಲ್ಲ.‌ ಹಾಲ್ ಟಿಕೆಟ್ ಕೊಡುವ ನೆಪದಲ್ಲಿ ಬೆಂಗಳೂರಿನ ನೂರಾರು ಸ್ಕೂಲ್ ಗಳು ಬಾಕಿ ಶುಲ್ಕ ವಸೂಲಿಗೆ ಮುಂದಾಗಿವೆ. ಖಾಸಗಿ ಶಾಲೆಗಳ ಶುಲ್ಕ ಟಾರ್ಚರ್ ಗೆ ಬೇಸತ್ತ ಪೋಷಕರ ಸಮನ್ವಯ ಸಮಿತಿ ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದೆ. ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸುವಂತೆ ಪೋಷಕರು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇನ್ನು ಪೋಷಕರ‌ ಸಮನ್ವಯ ಸಮಿತಿಯ ದೂರಿನ ಮೇರೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ಈ ಕುರಿತು ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ. LKG ಇಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಈ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಎಂದು ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಪತ್ರದ ಹಿನ್ನೆಲೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ. ಮಕ್ಕಳಿಗೆ ‌ಹಾಲ್ ಟಿಕೆಟ್ ಕೊಡುವ ವಿಚಾರದಲ್ಲಿ ಕೆಲ ಶಾಲೆಗಳಿಂದ ಸಮಸ್ಯೆ ಅಗಿದೆ.‌ ನಮ್ಮ ವ್ಯಾಪ್ತಿಯಲ್ಲಿ ಇರದ ಪ್ರತಿಷ್ಟಿತ ಖಾಸಗಿ ಶಾಲೆಗಳು ಈ ರೀತಿ ಮಾಡುತ್ತಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ರುಪ್ಸಾ ಖಾಸಗಿ ಶಾಲಾ ಒಕ್ಕೂಟ ಅಧ್ಯಕ್ಷ ಲೋಕೇಶ್ ಒತ್ತಾಯಿಸಿದ್ದಾರೆ.

ಕಳೆದೆರಡು ವರುಷಗಳಿಂದ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸೋದು ಕಷ್ಟವಾಗಿದೆ. ಇಂಥ ಹೊತ್ತಿನಲ್ಲಿ ಪರೀಕ್ಷೆ ಸಂದರ್ಭದಲ್ಲಿ ಹಾಲ್ ಟಿಕೆಟ್ (exam hall tickets) ‌ನೀಡದೆ ಮಕ್ಕಳಿಗೆ ತೊಂದರೆ ಕೊಡೋದು ಸರಿಯಲ್ಲ.. ಸರ್ಕಾರ ಮಧ್ಯಪ್ರವೇಶಿಸಿ ಶಿಕ್ಷಣ ಸಂಸ್ಥೆಗಳ ಈ ಸುಲಿಗೆಯಿಂದ ನಮ್ಮನ್ನು ರಕ್ಷಿಸಿ ಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕೆಂದು ಪೋಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : Re Exams : ಪರೀಕ್ಷೆ ಇಲ್ಲದೇ ಪಾಸ್‌ ಆದವರಿಗೆ ಶಾಕ್‌ : ಮತ್ತೆ ಬರೆಯಲೇ ಬೇಕು ಪರೀಕ್ಷೆ

ಇದನ್ನೂ ಓದಿ : NEET ban : ನೀಟ್ ನಿಷೇಧಿಸಿ : ನಮ್ಮ ಮಕ್ಕಳನ್ನು ಉಳಿಸಿ ಕರವೇಯಿಂದ ಟ್ವಿಟರ್ ಅಭಿಯಾನ

( School fees mandatory for students to get exam hall tickets)

Comments are closed.